ಸಿಎಂ ಕಾನ್ವೆ ರೂಲ್ಸ್ ಬ್ರೇಕ್ – ಜನಾರ್ದನ ರೆಡ್ಡಿ ಕಾರನ್ನು ಸೀಜ್ ಮಾಡಿದ ಪೊಲೀಸರು

Public TV
1 Min Read
Janardhan Reddy Car

ಕೊಪ್ಪಳ: ಸಿಎಂ ಕಾನ್ವೆ ರೂಲ್ಸ್ ಬ್ರೇಕ್ ಮಾಡಿದ್ದ ಹಿನ್ನೆಲೆಯಲ್ಲಿ ಶಾಸಕ ಜನಾರ್ದನ ರೆಡ್ಡಿಯವರ (Janardhan Reddy) ಕಾರು ಸೇರಿ ಮೂರು ಕಾರುಗಳನ್ನು ಗಂಗಾವತಿ ಟ್ರಾಫಿಕ್ ಪೊಲೀಸರು ಸೀಜ್ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಕಾರನ್ನು ಸೀಜ್ ಮಾಡಿ, ಗಂಗಾವತಿಗೆ ಟ್ರಾಫಿಕ್ ಪೊಲೀಸರು ಕೊಂಡೊಯ್ದಿದ್ದಾರೆ. ಅಲ್ಲದೇ ಅವರ ಇಬ್ಬರು ಬೆಂಬಲಿಗರ ಕಾರನ್ನು ವಶಕ್ಕೆ ಪಡೆದಿದ್ದಾರೆ. ಜನಾರ್ದನ ರೆಡ್ಡಿಯವರ ರೇಂಜ್ ರೋವರ್ ಸೇರಿ ಬೆಂಬಲಿಗರ ಸ್ಕಾರ್ಪಿಯೋ ಹಾಗೂ ಫಾರ್ಚೂನರ್ ಕಾರುಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಇದನ್ನೂ ಓದಿ: Haryana Election Results| ಜಿಲೇಬಿ ಟ್ರೆಂಡ್‌ ಆಗಿದ್ದು ಯಾಕೆ?

ಅ.5ರ ರಾತ್ರಿ ರಾಯಚೂರಿನಿಂದ ಜಿಂದಾಲ್ ವಿಮಾನ ನಿಲ್ದಾಣಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah) ತೆರಳುತ್ತಿದ್ದಾಗ ನಿಯಮ ಉಲ್ಲಂಘಿಸಲಾಗಿತ್ತು. ಡಿವೈಡರ್ ಮೇಲೆಯೇ ಕಾರು ಹತ್ತಿಸಿ ಸಿಎಂ ಬರುತ್ತಿದ್ದ ಮಾರ್ಗದಲ್ಲೇ ಕಾರು ಚಲಾಯಿಸಿಕೊಂಡು ತೆರಳಿದ್ದರು. ಸಿಎಂ ಕಾರು ಆಗಮಿಸುತ್ತಿದ್ದ ವೇಳೆ ಎದುರಿನಿಂದ ಮತ್ತೊಂದು ಕಾರು ಬರುವುದನ್ನು ಕಂಡ ಬೆಂಗಾವಲು ಪಡೆ ಕೊನೆಗೆ ತಮ್ಮ ಕಾರನ್ನೇ ನಿಲ್ಲಿಸಿ ಜನಾರ್ದನ ರೆಡ್ಡಿಯವರ ಕಾರು ತೆರಳಿದ ಬಳಿಕ ಸಿಎಂ ಅವರನ್ನು ಕರೆದುಕೊಂಡು ಹೋಗಿದ್ದರು.

ನಿಯಮ ಉಲ್ಲಂಘಿಸಿದ್ದರ ಹಿನ್ನೆಲೆ ಕಾರು ಚಾಲಕ ಹುಸೇನ್ ಸೇರಿದಂತೆ ಮೂವರ ಮೇಲೆ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದರು. ಇದನ್ನೂ ಓದಿ: ದೇಗುಲದ ಭದ್ರತಾ ಸಿಬ್ಬಂದಿಯ ಜಾತಿ ನಿಂದನೆ- ಅರ್ಚಕ ಅರೆಸ್ಟ್

Share This Article