ಕೊಪ್ಪಳ: ಆನೆಗೊಂದಿ ಉತ್ಸವ 2020ರ ನಿಮಿತ್ತ ನಫಾಸನ ಸಂಸ್ಥೆ ವತಿಯಿಂದ ರಾಕ್ ಕ್ಲೈಂಬಿಂಗ್ ಸಾಹಸ ಪ್ರದರ್ಶನ ನಡೆಯಿತು.
ಗಂಗಾವತಿ ತಾಲೂಕಿನ ಆನೆಗೊಂದಿ ಉತ್ಸವದ ನಿಮಿತ್ತ ಇಂದು ನಡೆದ ರಾಕ್ ಕ್ಲೈಂಬಿಂಗ್ ಪ್ರದರ್ಶನಕ್ಕೆ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ಋಷಿಮುಖ ಪರ್ವದಲ್ಲಿ ಚಾಲನೆ ನೀಡಿದರು. ಆನೆಗೊಂದಿಯ ಶ್ರೀ ಕೇಷ್ಣದೇವರಾಯ ವೇದಿಕೆ ರಸ್ತೆಯ ಪಕ್ಕದಲ್ಲಿ ನಡೆದ ರಾಕ್ ಕ್ಲೈಂಬಿಂಗ್ ಪ್ರದರ್ಶನದಲ್ಲಿ ರ‍್ಯಾಪ್ಲಿಂಗ್, ಜಿಫ್‍ಲೈನ್ ಕೃತಕ ಗೊಡೆ, ಆರ್ಚರಿ ಸೇರಿದಂತೆ ವಿವಿಧ ಪ್ರದರ್ಶನಗಳು ನಡೆದವು.
ಈ ಪ್ರದರ್ಶನದಲ್ಲಿ ಭಾಗವಹಿಸಲು ಮಕ್ಕಳು ಸ್ವಇಚ್ಛೆಯಿಂದ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದು ವಿಶೇಷವಾಗಿತ್ತು. ನಫಾಸನ ಸಂಸ್ಥೆಯ ಸಹಾಯಕ ನಿರ್ದೇಶಕ ವಿರೇಶ್.ಎಂ ಹಾಗೂ ಅವರ ಸಂಸ್ಥೆಯ ಸಾಹಸಿ ರಾಕ್ ಕ್ಲೈಂಬಿಂಗ್ ಪ್ರದರ್ಶನವನ್ನು ನಡೆಸಿಕೊಟ್ಟಿತು.