ದೇಶಾದ್ಯಂತ ಸಂಚಲನ ಮೂಡಿಸುತ್ತಿರುವ `ಹೊಂಬಾಳೆ ಫಿಲ್ಮ್ಸ್’ ಇತ್ತೀಚೆಗಷ್ಟೇ ಸುಧಾ ಕೊಂಗರ ಜತೆ ಸಿನಿಮಾ ಮಾಡುವುದಾಗಿ ಅಧಿಕೃತವಾಗಿ ಅನೌನ್ಸ್ ಮಾಡಲಾಗಿತ್ತು. ಈಗ ಸುಧಾ ಕೊಂಗರ ನಿರ್ದೇಶನದಲ್ಲಿ ಕಾಲಿವುಡ್ ನಟ ಸೂರ್ಯ ನಟಿಸುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ.
Advertisement
`ಸೂರರೈ ಪೊಟ್ರು’ ಯಶಸ್ಸಿನ ನಂತರ ಮತ್ತೆ ಕಾಲಿವುಡ್ ಸೂಪರ್ ಸ್ಟಾರ್‌ಗೆ ನಿರ್ದೇಶನ ಮಾಡಲಿದ್ದಾರೆ ಸುಧಾ ಕೊಂಗರ ಎಂಬ ಊಹಾಪೋಹ ಹರಿದಾಡುತ್ತಿದೆ. ಈ ಚಿತ್ರ ಯಶಸ್ಸಿನ ನಂತರ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಹಾಗಾಗಿ ಮತ್ತೆ ನಟ ಸೂರ್ಯಗೆ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.
Advertisement
Advertisement
ಹೊಂಬಾಳೆ ಬ್ಯಾನರ್‌ನ ಚಿತ್ರದ ನಂತರ ಮತ್ತೆ ಸೂರ್ಯ ಮತ್ತು ಸುಧಾ ಒಟ್ಟಿಗೆ ಚಿತ್ರ ಮಾಡಲಿದ್ದಾರೆ. ಬಯೋಪಿಕ್ ಚಿತ್ರದಲ್ಲಿ ನಟಿಸಲಿದ್ದು, ಈ ಚಿತ್ರವನ್ನು ಸೂರ್ಯ ಅವರ ಸ್ವಂತ ಬ್ಯಾನರ್‌ನಲ್ಲೇ ನಿರ್ಮಾಣವಾಗಿದೆ. ಅದಕ್ಕೂ ಮುಂಚೆ ಸೂರ್ಯ ಒಪ್ಪಿಕೊಂಡಿರುವ ಚಿತ್ರಗಳನ್ನು ಪೂರ್ಣಗೊಳಿಸಬೇಕಿದೆ. ಇದನ್ನೂ ಓದಿ: ಪ್ಲಾಸ್ಟಿಕ್ ಸುತ್ತಿಕೊಂಡು ಬಂದ ಉರ್ಫಿ ಜಾವೇದ್ : ಕಾಸ್ಟ್ಯೂಮ್ ಡಿಸೈನರ್ ಹುಡುಕುತ್ತಿದ್ದಾರೆ ನೆಟ್ಟಿಗರು
Advertisement
`ಹೊಂಬಾಳೆ ಫಿಲ್ಮ್ಸ್’ ಅಡಿಯಲ್ಲಿ ಮೂಡಿ ಬರಲಿರುವ ನೈಜ ಆಧಾರಿತ ಕಥೆಗೆ ಸುಧಾ ಕೊಂಗರ ಆಕ್ಷನ್ ಕಟ್ ಹೇಳ್ತಿದ್ದಾರೆ. ಸುಧಾ ಅವರ ಕಥೆಗೆ ನಾಯಕ ನಟನ ಹುಡುಕಾಟದಲ್ಲಿದೆ ಚಿತ್ರತಂಡ. ಸಿನಿಮಾದ ಅಧಿಕೃತ ಮಾಹಿತಿಗಾಗಿ ಕಾದುನೋಡಬೇಕಿದೆ.