ತಮಿಳಿನ ಖ್ಯಾತ ಗಾಯಕಿ ಉಮಾ ರಮಣನ್ (Uma Ramanan) ಅವರು 69ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. ಮೇ 1ರಂದು ಉಮಾ ಚೆನ್ನೈನಲ್ಲಿ ವಿಧಿವಶರಾಗಿದ್ದಾರೆ. ತಮಿಳಿನಲ್ಲಿ ಸಾಕಷ್ಟು ಸೂಪರ್ ಹಿಟ್ ಹಾಡುಗಳಿಗೆ ಉಮಾ ಧ್ವನಿ ನೀಡಿದ್ದರು. ಇನ್ನೂ ಅವರ ಸಾವಿನ ಹಿಂದಿನ ಕಾರಣ ತಿಳಿದು ಬಂದಿಲ್ಲ. ಇದನ್ನೂ ಓದಿ:‘ವೀರ್’ ಮೋಷನ್ ಪೋಸ್ಟರ್ ಔಟ್- ಜೆಕೆ ಹೊಸ ಚಿತ್ರಕ್ಕೆ ಯುವ ನಿರ್ದೇಶಕ ಆ್ಯಕ್ಷನ್ ಕಟ್
Advertisement
ಶಾಸ್ತ್ರಿಯ ಸಂಗೀತ ಕಲಿತು ಗಾಯನದಲ್ಲಿ (Play Back Singer) ಹೆಸರು ಮಾಡಿರುವ ಉಮಾ 35 ವರ್ಷಗಳಲ್ಲಿ 6000ಕ್ಕೂ ಹೆಚ್ಚು ಸಂಗೀತ ಕಛೇರಿಗಳನ್ನು ನಡೆಸಿಕೊಟ್ಟಿದ್ದಾರೆ. 1977ರಲ್ಲಿ ಹಿಂದಿ ಸಿನಿಮಾದಲ್ಲಿ ಗಾಯನಕ್ಕೆ ಅವಕಾಶ ಸಿಕ್ಕಿದರೂ ಕೂಡ ತಮಿಳು ಚಿತ್ರರಂಗ ಅವರ ಕೆರಿಯರ್‌ಗೆ ಬ್ರೇಕ್ ಕೊಟ್ಟಿದೆ.
Advertisement
Advertisement
ಇಳಯರಾಜ ಸಂಗೀತದಲ್ಲಿ ಉಮಾ ರಮಣನ್ ಸಾಕಷ್ಟು ಹಿಟ್ ಸಾಂಗ್‌ಗಳನ್ನು ನೀಡಿದ್ದಾರೆ. ಸದ್ಯ ಗಾಯಕಿಯ ನಿಧನಕ್ಕೆ ಆಪ್ತರು ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.