ತಮಿಳು ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Public TV
0 Min Read
suresh sangaiah

‘ಒರು ಕಿದಾಯಿನ್ ಕರುಣೈ ಮನು’, ‘ಸತ್ಯತ್ರಿಕ’ ಸಿನಿಮಾಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದ ತಮಿಳು ನಿರ್ದೇಶಕ ಸುರೇಶ್ ಸಂಗಯ್ಯ (Suresh Sangaiah) ನಿಧನರಾಗಿದ್ದಾರೆ. ಚೆನ್ನೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ನ.15ರ ರಾತ್ರಿ 11ಕ್ಕೆ ನಿರ್ದೇಶನ ವಿಧಿವಶರಾಗಿದ್ದಾರೆ. ಇದನ್ನೂ ಓದಿ:ಹಾಟ್ ಆಗಿ ಕಾಣಿಸಿಕೊಂಡು ಪಡ್ಡೆಹುಡುಗರ ನಿದ್ದೆ ಕದ್ದ ಶಾನ್ವಿ

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಸುರೇಶ್ ಅವರು ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಪತ್ನಿ ಮತ್ತು ಇಬ್ಬರೂ ಮಕ್ಕಳನ್ನು ಸುರೇಶ್ ಅಗಲಿದ್ದಾರೆ.

ಅಂದಹಾಗೆ, ಯೋಗಿ ಬಾಬು ನಟನೆಯ ‘ಕೆನಾಥ ಕಾನೋಮ್’ ಸೇರಿದಂತೆ ಸಾಕಷ್ಟು ಸಿನಿಮಾಗಳನ್ನು ಸುರೇಶ್ ಸಂಗಯ್ಯ ನಿರ್ದೇಶನ ಮಾಡಿದ್ದಾರೆ.

Share This Article