ಲಂಡನ್: ಹೆಮ್ಮಾರಿ ಕೊರೊನಾ ವೈರಸ್‍ನಿಂದಾಗಿ ಅನೇಕ ಕ್ರೀಡಾಕೂಟ, ಟೂರ್ನಿಗಳು ರದ್ದುಗೊಂಡಿವೆ ಅಥವಾ ಮುಂದೂಡಲ್ಪಟ್ಟಿವೆ. ಹೀಗಾಗಿ ಆಟಗಾರರು, ಕ್ರೀಡಾಪಟುಗಳು ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಇಂತಹ ಸಮಯದಲ್ಲಿ ಕೆಲವರು ಯುವ ಪ್ರತಿಭೆಗಳಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಆಟದ ತಂತ್ರ, ನಿಯಮಗಳನ್ನು ಹೇಳಿಕೊಡುತ್ತಿದ್ದಾರೆ.
ಅಂಥೆ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಆಕ್ರಮನಕಾರಿ ಬ್ಯಾಟ್ಸ್‌ಮನ್ ಕೂಡ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಯುವ ಕ್ರಿಕೆಟರ್ ಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ. ಜೊತೆಗೆ ಒಂದಿಷ್ಟು ಬ್ಯಾಟಿಂಗ್ ತಂತ್ರಗಳನ್ನು ತಿಳಿಸಿಕೊಡುತ್ತಿದ್ದಾರೆ. ಆದರೆ ಪೀಟರ್ಸನ್ ”ಈ ಮಗುವಿಗೆ ಯಾವುದೇ ಸಲಹೆಗಳೇ ಬೇಡ” ಎಂದು ಟ್ವಿಟ್ಟರ್‌ನಲ್ಲಿ ಒಂದು ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದಾರೆ.
Advertisement
https://twitter.com/KP24/status/1253643460357369856
Advertisement
ಶಾಹಿದ್ ಎಂಬ ಪುಟ್ಟ ಪೋರ, ತಾನು ಬ್ಯಾಟಿಂಗ್ ಮಾಡುತ್ತಿರುವ 1 ನಿಮಿಷ 17 ಸೆಂಕೆಡ್ ಇರುವ ವಿಡಿಯೋವನ್ನು ಟ್ವಿಟ್ ಮಾಡಿದ್ದಾನೆ. ಇದನ್ನು ನೋಡಿದ ಕೇವಿನ್ ಪೀಟರ್ಸನ್ ಫುಲ್ ಫಿದಾ ಆಗಿದ್ದಾರೆ. ”ನನ್ನ ಯೂಟ್ಯೂಬ್ ಚಾನೆಲ್‍ನಲ್ಲಿ ಈ ಹುಡುಗನ ಜೊತೆಗೆ 45 ನಿಮಿಷ ಲೈವ್‍ನಲ್ಲಿದ್ದೆ. ಈ ಮಗುವಿಗೆ ಯಾವುದೇ ರೀತಿಯ ಸಲಹೆಗಳ ಅಗತ್ಯವೇ ಇಲ್ಲ ಎನ್ನುವುದು ನನ್ನ ಅಭಿಪ್ರಾಯ. ಅವನು ಎಲ್ಲ ಕೌಶಲ್ಯಗಳನ್ನು ಹೊಂದಿದ್ದಾನೆ” ಎಂದು ತಿಳಿಸಿದ್ದಾರೆ.
Advertisement
ಪಶ್ಚಿಮ ಬಂಳಾದ ಈ ಪುಟ್ಟ ಪೋರ ಮೂರು ವರ್ಷದವನಾಗಿದ್ದು, ಭಾರತ ಸೇರಿದಂತೆ ವಿದೇಶಿ ಕ್ರಿಕೆಟರ್‌ಗಳ ಮನ ಗೆದ್ದಿದ್ದಾನೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಬಾಲಕ ಶಾಹಿದ್‍ಗೆ ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಬೌಲಿಂಗ್ ಮಾಡಿದ್ದರು. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಾಲಕನ ಬ್ಯಾಟಿಂಗ್‍ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಸ್ಟೀವ್ ವಾ ಅವರು ಬಾಲಕ ಶಾಹಿದ್‍ನನ್ನು ಕೋಲ್ಕತ್ತಾದಲ್ಲಿ ಭೇಟಿಯಾಗಿ, ಆತನನ್ನು ಎತ್ತಿ ಮುದ್ದಾಡಿದ್ದರು.
Advertisement
https://twitter.com/Shahid68577153/status/1237440118224379904
ಶಾಹಿದ್ ಟೀಂ ಇಂಡಿಯಾ ಪರ ಬ್ಯಾಟಿಂಗ್ ಮಾಡಬೇಕು. ಆ ದಿನಕ್ಕಾಗಿ ನಾನು ಕಾಯುತ್ತಿದ್ದೇನೆ ಎಂದು ಬಾಲಕನ ತಂದೆ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಶಾಹಿದ್ ಕೂಡ ಅಷ್ಟೇ ಶ್ರದ್ಧೆಯಿಂದ ಅಭ್ಯಾಸದಲ್ಲಿ ತೊಡಗಿದ್ದಾನೆ.