– ಕೋಲ್ಕತ್ತಾದ ವ್ಯಕ್ತಿಯಲ್ಲಿ ಸೋಂಕು ದೃಢ
ಕೋಲ್ಕತ್ತಾ: ವಿಶ್ವದಲ್ಲೇ ಅಪರೂಪದ ಮಾರಕ ಸಸ್ಯ ಶಿಲೀಂಧ್ರ (Plant Fungus) ಸೋಂಕಿಗೆ ಕೋಲ್ಕತ್ತಾದ (Kolkata) ವ್ಯಕ್ತಿ ತುತ್ತಾಗಿದ್ದು, ದೇಶದಲ್ಲಿ ಆತಂಕ ಮೂಡಿಸಿದೆ. ವಿಶ್ವದಲ್ಲೇ ಸೋಂಕು ದೃಢಪಟ್ಟ ಮೊದಲ ಪ್ರಕರಣ ಇದಾಗಿದೆ.
61 ವಯಸ್ಸಿನ ವ್ಯಕ್ತಿ ಈ ಸೋಂಕಿ ಒಳಗಾಗಿದ್ದಾರೆ. ಕಳೆದ ಮೂರು ತಿಂಗಳಿಂದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ಕರ್ಕಶ ಧ್ವನಿ, ಕೆಮ್ಮು, ಆಯಾಸ, ಗಂಟಲಲ್ಲಿ ತೊಂದರೆ ಕಾಣಿಸಿಕೊಂಡಿತ್ತು. ಕೋಲ್ಕತ್ತಾ ಆಸ್ಪತ್ರೆಗೆ ದಾಖಲಾದಾಗ ಸೋಂಕು ಇರುವುದು ದೃಢಪಟ್ಟಿದೆ. ಇದನ್ನೂ ಓದಿ: 10 ರೂ.ನ 30 ನೋಟು ಎಣಿಸಲು ಸಾಧ್ಯವಾಗದ ವರ- ಮದುವೆ ಕ್ಯಾನ್ಸಲ್ ಮಾಡಿದ ವಧು
ವ್ಯಕ್ತಿಯು ಮಧುಮೇಹ, ಹೆಚ್ಐವಿ ಸೋಂಕು, ಮೂತ್ರಪಿಂಡದ ಕಾಯಿಲೆ, ಯಾವುದೇ ದೀರ್ಘಕಾಲದ ಕಾಯಿಲೆ, ಇಮ್ಯುನೊಸಪ್ರೆಸಿವ್ ಡ್ರಗ್ ಸೇವನೆ ಅಥವಾ ಆಘಾತದ ಇತಿಹಾಸವನ್ನು ಹೊಂದಿರಲಿಲ್ಲ. ರೋಗಿ, ವೃತ್ತಿಯಲ್ಲಿ ಸಸ್ಯ ಮೈಕೊಲೊಜಿಸ್ಟ್ ಆಗಿದ್ದಾರೆ. ದೀರ್ಘಕಾಲದವರೆಗೆ ಕೊಳೆಯುತ್ತಿರುವ ವಸ್ತುಗಳು, ಅಣಬೆಗಳು ಮತ್ತು ವಿವಿಧ ಸಸ್ಯ ಶಿಲೀಂಧ್ರಗಳನ್ನು ತನ್ನ ಸಂಶೋಧನಾ ಚಟುವಟಿಕೆಗಳ ಭಾಗವಾಗಿ ಬಳಸಿಕೊಂಡಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.
ಕೊಂಡ್ರೊಸ್ಟೆರಿಯಮ್ ಪರ್ಪ್ಯೂರಿಯಮ್ ಒಂದು ಸಸ್ಯ ಶಿಲೀಂಧ್ರವಾಗಿದ್ದು, ಅದು ಸಸ್ಯಗಳಲ್ಲಿ ಬೆಳ್ಳಿಯ ಎಲೆ ರೋಗವನ್ನು ಉಂಟುಮಾಡುತ್ತದೆ. ಸಸ್ಯದ ಶಿಲೀಂಧ್ರವು ಮಾನವರಲ್ಲಿ ರೋಗವನ್ನು ಉಂಟುಮಾಡುವ ಮೊದಲ ನಿದರ್ಶನ ಇದಾಗಿದೆ. ಸಾಂಪ್ರದಾಯಿಕ ತಂತ್ರಗಳು (ಸೂಕ್ಷ್ಮದರ್ಶಕ) ಶಿಲೀಂಧ್ರವನ್ನು ಗುರುತಿಸಲು ವಿಫಲವಾಗಿದೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಮೋದಿ ಹಟಾವೋ, ದೇಶ್ ಬಚಾವೋ ಪೋಸ್ಟರ್ ಪ್ರಕರಣ- 8 ಮಂದಿ ಆರೋಪಿಗಳ ಬಂಧನ