ಕೋಲ್ಕತ್ತಾ : ವಧು ಒಬ್ಬರು ಮದುವೆಯ ವೇಳೆ ವರನಿಗೆ ಸಿಂಧೂರ ಇಟ್ಟಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವಧು ಶಾಲಿನಿ, ವರ ಅಂಕನ್ ಮಜುಂದಾರ್ ಹಳೆಯ ಮೇಲೆ ಸಿಂಧೂರ ಇಟ್ಟಿದ್ದಾರೆ. ಡಿಸೆಂಬರ್ 2ರಂದು ಶಾಲಿನಿ ಹಾಗೂ ಅಂಕನ್ ಮಜುಂದಾರ್ ಸಪ್ತಪದಿ ತುಳಿದರು. ಮದುವೆ ಸಮಾರಂಭದ ಫೋಟೋ ಹಾಗೂ ವೀಡಿಯೋವನ್ನು ವಧುವಿನ ಸಹೋದರಿ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದರು.
ಈ ವೀಡಿಯೋದಲ್ಲಿ ಶಾಲಿನಿ ನಗುತ್ತಾ ವರ ಅಂಕನ್ ಮಂಜುಂದಾರ್ ಹಣೆಯ ಮೇಲೆ ಸಿಂಧೂರ ಇಡುತ್ತಾರೆ. ಈ ವೇಳೆ ಮದುವೆ ಬಂದಿದ್ದ ಅಥಿತಿಗಳು ದಂಪತಿಗೆ ಪ್ರೋತ್ಸಹ ನೀಡುತ್ತಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ನಡುರಾತ್ರಿ ಕಾರು ಹಿಂಬಾಲಿಸಿ ಅಪರಿಚಿತನ ಕಿರಿಕ್ – ಪುಂಡನ ಪುಂಡಾಟಕ್ಕೆ ಇಡೀ ಕುಟುಂಬ ಹೈರಾಣು
ವಿಶೇಷವೆಂದರೆ ಈ ಮದುವೆಯನ್ನು ಮೂವರು ಪುರೋಹಿತರು ಸೇರಿ ನೆರವೇರಿಸಿದರು. ಮದುವೆಯ ಮಂತ್ರಗಳನ್ನು ಸಂಸ್ಕøತದಲ್ಲಿ ಮಾತ್ರವಲ್ಲದೇ ಬೆಂಗಾಲಿಯನ್ನು ಕೂಡ ಪಠಿಸಿದರು. ವೈರಲ್ ಆಗುತ್ತಿರುವ ವಿಭಿನ್ನವಾದ ಈ ಮದುವೆಯ ವೀಡಿಯೋಗೆ ಇಲ್ಲಿಯವರೆಗೂ ಸುಮಾರು 3 ಲಕ್ಷಕ್ಕೂ ಅಧಿಕ ವೀವ್ಸ್, 4 ಸಾವಿರಕ್ಕೂ ಅಧಿಕ ಲೈಕ್ಸ್ ಹಾಗೂ ಕಾಮೆಂಟ್‍ಗಳ ಸುರಿಮಳೆಯೇ ಹರಿದು ಬರುತ್ತಿದೆ. ಇದನ್ನೂ ಓದಿ: ಪತಿಗೆ ಡೈವೋರ್ಸ್ ಕೊಡು, ಮುಸ್ಲಿಂ ಯುವಕನ ಜೊತೆ ಮದುವೆ ಮಾಡಿಸ್ತೀನಿ – ನೂರ್ ಜಹಾನ್ ಅರೆಸ್ಟ್
View this post on Instagram
ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನಟ ರಾಜ್‌ಕುಮಾರ್ ರಾವ್ ಮದುವೆ ಸಮಾರಂಭದ ವೇಳೆ ಪತ್ರಲೇಖ ಕೂಡ ಪತಿಗೆ ಸಿಂಧೂರ ಇಟ್ಟಿದ್ದ ವೀಡಿಯೋ ವೈರಲ್ ಆಗಿತ್ತು.