ಕೋಲಾರ: ಕಾಶಿಯ ಜ್ಞಾನವಾಪಿ (Gyanvapi Mosque) ಉತ್ಖನನದಲ್ಲಿ ಕನ್ನಡದ ಶಾಸನ ಸಿಕ್ಕಿದ್ದು, ಈ ಶಾಸನಕ್ಕೂ ಕೋಲಾರಕ್ಕೂ ಲಿಂಕ್ ಇದೆ ಎಂಬ ವಿಚಾರಗಳು ಕೇಳಿಬರುತ್ತಿದೆ. ಕಾಶಿಯ ಶಾಸನವನ್ನೇ ಹೋಲುವ ಹಲವು ಶಾಸನಗಳು ಕೊಲಾರಮ್ಮನ (Kolaramma Temple) ದೇವಾಲಯದಲ್ಲಿ ಇವೆ.
Advertisement
ಪುರಾತತ್ವ ಇಲಾಖೆಯ ವ್ಯಾಪ್ತಿಗೆ ಬರುವ ಈ ದೇವಾಲಯಕ್ಕೆ ಸುಮಾರು ಸಾವಿರ ವರ್ಷಗಳ ಇತಿಹಾಸವಿದೆ. ಕೋಲಾರ ನಗರದ ಕೋಟೆ ಬಡಾವಣೆಯಲ್ಲಿ ನೆಲೆಸಿರುವ ನಗರ ದೇವತೆ, ಶಕ್ತಿ ದೇವತೆ ಕೋಲಾರಮ್ಮನ ದೇವಾಲಯವನ್ನು ಗಂಗರ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ. ದೇವಾಲಯದ ಗೋಡೆ ಮತ್ತು ಕಂಬಗಳ ಮೇಲೆ ಕನ್ನಡ ಹಾಗೂ ತಮಿಳು ಶಾಸನಗಳನ್ನ ಕೆತ್ತಲಾಗಿದೆ. ಅಲ್ಲದೇ ಶಾಸನಗಳಲ್ಲಿ ಹಲವು ವಿಚಾರಗಳನ್ನು ಬರೆಯಲಾಗಿದೆ. ಇದನ್ನೂ ಓದಿ: ಕಾರ್ಯಕ್ರಮದ ನಡುವೆ ಯತೀಂದ್ರ ಸಿದ್ದರಾಮಯ್ಯಗೆ ಅವಾಚ್ಯ ಶಬ್ದಗಳಿಂದ ನಿಂದನೆ – ವ್ಯಕ್ತಿ ಬಂಧನ
Advertisement
Advertisement
ಇನ್ನೂ ಇಂದು ಕಾಶಿಯಲ್ಲಿ ಪತ್ತೆಯಾಗಿರುವ ಕನ್ನಡ ಶಾಸನಕ್ಕೂ ಕೋಲಾರಮ್ಮ ದೇವಾಲಯದಲ್ಲಿರುವ ಶಾಸನಗಳಿಗೂ ಒಂದಕ್ಕೊಂದು ಸಬಂಧ ಇದೆ ಅನ್ನೋದು ಪುರಾತತ್ವ ವರದಿಯಲ್ಲಿ ತಿಳಿಯಬಹುದಾಗಿದೆ. ಇನ್ನೂ ಈಗಾಗಲೇ ಕಾಶಿಯಲ್ಲಿ ಪತ್ತೆಯಾದ ಕನ್ನಡದ 2 ಪದಗಳನ್ನ ತಜ್ಞರು ನ್ಯಾಯಾಲಯಕ್ಕೆ ನೀಡಿದ್ದು, ಕೋಲಾರಮ್ಮ ದೇವಾಲಯದ ಶಾಸನದ ಕುರಿತು ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಪ್ರತೀ ಮಂಡಲ, ಜಿಲ್ಲೆಗಳಲ್ಲಿನ ರಾಮಭಕ್ತರನ್ನು ಅಯೋಧ್ಯೆಗೆ ಕಳುಹಿಸಲು ನಿರ್ಧಾರ: ಅಶ್ವಥ್ ನಾರಾಯಣ್