ಕೋಲಾರ: ಅಗ್ನಿಪಥ್ ಯೋಜನೆಯೂ ಯೋಧರನ್ನು ಸಿದ್ಧ ಮಾಡಲು ಶ್ರಮಿಸುತ್ತಿದ್ದು, ದೇಶಾದ್ಯಂತ ಹಲವು ರೀತಿಯ ವಿವಾದಕ್ಕೆ ಕಾರಣವಾಗಿದೆ. ಈ ನಡುವೆ ಕೋಲಾರದ ಕ್ರೀಡಾ ಸಂಸ್ಥೆಯೊಂದು ನೂರಾರು ಯುವಕ-ಯುವತಿಯರು ದೈಹಿಕವಾಗಿ ತರಬೇತಿ ಪಡೆಯುವ ಮೂಲಕ ಸದ್ದಿಲ್ಲದೆ ಅಗ್ನಿವೀರರು ರೆಡಿ ಮಾಡುತ್ತಿದೆ.
ರನ್ನಿಂಗ್, ವಾಕಿಂಗ್, ಪುಶ್ ಅಪ್, ಹೀಗೆ ವಿವಿಧ ರೀತಿಯ ಕಸರತ್ತುಗಳನ್ನು ಮಾಡುತ್ತಿರುವ ಯುವಕರು ಮಾಜಿ ಯೋಧರ ಕಮ್ಯಾಂಡೋವನ್ನು ಪಾಲಿಸುತ್ತಿದ್ದಾರೆ. ತರಬೇತಿ ವೇಳೆ ನಿರತವಾಗಿ ಯುವಕ-ಯುವತಿಯರ ಬಾಯಲ್ಲಿ ‘ಜೈಹಿಂದ್ ಜೈಹಿಂದ್’ ಅನ್ನೋ ಘೋಷಣೆ ಕೂಗುತ್ತಿದ್ದಾರೆ. ಸೈನ್ಯಕ್ಕೆ ಸೇರಬೇಕು, ದೇಶಸೇವೆ ಮಾಡಬೇಕು ಅನ್ನೋದು ಸಾವಿರಾರು ಯುವಕ ಯುವತಿಯರ ಕನಸು. ಅದರಲ್ಲಿ ಹಲವರಿಗೆ ಸರಿಯಾದ ತರಬೇತಿ ಮಾರ್ಗದರ್ಶನ ಸಿಗದೆ ಅವಕಾಶ ಕಳೆದುಕೊಳ್ಳುವವರೆ ಹೆಚ್ಚು. ಇದನ್ನೂ ಓದಿ: ನಿಯಮ ಮೀರಿ ಚಾಮರಾಜಪೇಟೆ ಬಂದ್ ಮಾಡಿದ್ರೆ ಕಠಿಣ ಕ್ರಮ: ಪೊಲೀಸರ ಎಚ್ಚರಿಕೆ
Advertisement
Advertisement
ಹೀಗಿರುವಾಗ ಇತ್ತೀಚೆಗೆ ಕೇಂದ್ರ ಸರ್ಕಾರ ಅಗ್ನಿಪಥ್ ಯೋಜನೆ ಜಾರಿಗೆ ತರುವ ಮೂಲಕ ದೇಶದದ್ಯಾಂತ ಹಲವು ವಿವಾದಕ್ಕೂ ಕಾರಣವಾಗಿತ್ತು. ಹೀಗೆ ಹಲವು ವಿವಾದಗಳ ನಡುವೆಯೇ ಕೋಲಾರದಲ್ಲೊಂದು ಸಂಸ್ಥೆ ಸದ್ದಿಲ್ಲದೆ ಅಗ್ನಿವೀರರನ್ನು ತಯಾರು ಮಾಡುತ್ತಿದೆ. ಹೌದು ಕೋಲಾರ ಸ್ಟೋರ್ಟ್ಸ್ ಕ್ಲಬ್ ಅಗ್ನಿವೀರರಾಗ ಬಯಸುವ ಯುವಕ, ಯುವತಿಯರಿಗೆ ಉಚಿತವಾಗಿ ದೈಹಿಕ ತರಬೇತಿಯನ್ನು ನೀಡುತ್ತಿದೆ.
Advertisement
Advertisement
ಮಾಜಿ ಸೈನಿಕರಾದ ಕೃಷ್ಣಮೂರ್ತಿ ಮತ್ತು ಬ್ಲಾಕ್ ಕಮ್ಯಾಂಡೋ ತರಬೇತಿ ಪಡೆದಿರುವ ಸುರೇಶ್ ಅವರಿಂದ ಜಿಲ್ಲೆಯ ಸುಮಾರು 180ಕ್ಕೂ ಹೆಚ್ಚು ಯುವಕ, ಯುವತಿಯರಿಗೆ ಪ್ರತಿನಿತ್ಯ ದೈಹಿಕ ತರಬೇತಿಯನ್ನು ನೀಡಲಾಗುತ್ತಿದೆ. ಕೋಲಾರ ಹೊರವಲಯ ರಾಷ್ಟ್ರೀಯ ಹೆದ್ದಾರಿ ಬಳಿ ರನ್ನಿಂಗ್, ವಾಮ್‍ಅಪ್ ಮಾಡಿ ನಂತರ ಕೋಲಾರ ನಗರ ರೈಲು ನಿಲ್ದಾಣದ ಬಳಿ ಸೈನ್ಯ ಸೇರಲು ಬೇಕಾದ ಕೆಲವೊಂದು ಕಸರತ್ತು ಹಾಗೂ ತರಬೇತಿಗಳನ್ನು ನೀಡಲಾಗುತ್ತಿದೆ. ಸದ್ಯ ತರಬೇತಿಯಲ್ಲಿ ಅತ್ಯಂತ ಜೋಶ್‍ನಿಂದ ಭಾಗವಹಿಸಿರುವ ಅಗ್ನಿವೀರರು ಮುಂದಿನ ತಿಂಗಳು ಹಾಸನದಲ್ಲಿ ನಡೆಯುವ ಆರ್ಮಿ ಸೆಲೆಕ್ಷನ್‍ನಲ್ಲಿ ಭಾಗವಹಿಸಲಿದ್ದಾರೆ.
ಕೋಲಾರ ಸ್ಟೋರ್ಟ್ಸ್ ಕ್ಲಬ್ 1998 ರಿಂದಲೂ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಹಲವು ಕ್ರೀಡಾ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದೆ. ಜೊತೆಗೆ ಸೈನ್ಯಕ್ಕೆ ಸೇರ ಬಯಸುವ ಯುವಕ-ಯುವತಿಯರಿಗೆ ಮಾಜಿ ಯೋಧರು, ದೈಹಿಕ ಶಿಕ್ಷಕರಿಂದ ಸೈನ್ಯಕ್ಕೆ ಸೇರಲು ಬೇಕಾದ ತರಬೇತಿಯನ್ನು ನೀಡುತ್ತ ಬಂದಿದೆ. ಕೋವಿಡ್ ಸೇರಿದಂತೆ ಹಲವು ಕಾರಣಳಿಂದಾಗಿ ತರಬೇತಿ ನಿಲ್ಲಿಸಿದ್ದು, ಮತ್ತೆ ಕೋಲಾರ ಸ್ಟೋರ್ಟ್ಸ್ ಕ್ಲಬ್ ತರಬೇತಿ ಆರಂಭಿಸಿದೆ.
ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಅಗ್ನಿಪಥ್ ಯೋಜನೆ ವಿವಾದ ಶುರುವಾದ ಮೇಲಂತೂ ಸೈನ್ಯಕ್ಕೆ ಸೇರ ಬಯಸುವ ಯುವಕ-ಯುವತಿಯರ ಸಂಖ್ಯೆ ಹೆಚ್ಚಾಗಿದೆ. ಸದ್ಯ ಹಲವು ಸೌಲಭ್ಯಗಳ ಕೊರತೆಯಿಂದ ಕೋಲಾರ ಸ್ಟೋರ್ಟ್ಸ್ ಕ್ಲಬ್‍ನ ಸದಸ್ಯರು ಕೋಲಾರ ಜಿಲ್ಲೆಯ ಯುವಕ- ಯುವತಿಯರಿಗೆ ಮಾತ್ರ ತರಬೇತಿ ನೀಡುತ್ತಿದ್ದಾರೆ.
ಇಲ್ಲಿ ನೀಡುತ್ತಿರುವ ಕಠಿಣ ತರಬೇತಿಯ ವಿಚಾರ ತಿಳಿದು ಉತ್ತರ ಕರ್ನಾಟಕ ಸೇರಿದಂತೆ ಮೈಸೂರು, ಚಾಮರಾಜನಗರ, ತುಮಕೂರು ಜಿಲ್ಲೆಗಳ ಯುವಕ-ಯುವತಿಯರು ತರಬೇತಿ ಪಡೆಯಲು ಬರುವ ಆಸಕ್ತಿ ವಹಿಸುತ್ತಿದ್ದಾರೆ. ಆದರೂ ವಸತಿ ಸೇರಿದಂತೆ ಹಲವು ಸೌಲಭ್ಯಗಳ ಕೊರತೆಯಿಂದ ಕೇವಲ ಕೋಲಾರ ಜಿಲ್ಲೆಯ ಯುವಕ-ಯುವತಿಯರಿಗೆ ತರಬೇತಿ ನೀಡಲಾಗುತ್ತಿದೆ. ಇದನ್ನೂ ಓದಿ: ಫೈರಿಂಗ್ ರೇಂಜ್‍ನಲ್ಲಿ ಆಕಸ್ಮಿಕ ಸ್ಫೋಟ – ಇಬ್ಬರು ಸೈನಿಕರಿಗೆ ಗಂಭೀರ ಗಾಯ
ತರಬೇತಿಗೆ ಬರುವ ಯುವಕರಿಗೆ ಸೈನ್ಯಕ್ಕೆ ಬೇಕಾಗುವ ದೈಹಿಕ ತರಬೇತಿ ಹಾಗೂ ಪಠ್ಯ ತರಬೇತಿಯನ್ನು ಸಹ ನೀಡಲಾಗುತ್ತಿದೆ. ನಿತ್ಯ ತರಬೇತಿಗೆ ಬರುವ ಯುವಕ-ಯುವತಿಯರಿಗೆ ದಾನಿಗಳ ನೆರವಿನಿಂದ ಕೆಲವೊಂದು ಪೌಷ್ಠಿಕ ಆಹಾರವನ್ನು ನೀಡಲಾಗುತ್ತಿದೆ.