ಕೋಲಾರ: ಮೇ ತಿಂಗಳಿನಲ್ಲಿ ಮಲೇಷ್ಯಾದ (Malaysia) ಓಕಿನೋವಾ ಗೊಜೋ ರಿಯೋ ಇಫೋ ಕ್ರೀಡಾಂಗಣದಲ್ಲಿ ನಡೆಯಲಿರುವ 20ನೇ ಅಂತಾರರಾಷ್ಟ್ರೀಯ ಕರಾಟೆ ಚಾಂಪಿಯನ್‍ಶಿಪ್‍ಗೆ (International Karate Championship) ನಗರದ (Kolar) ರುಮಾನಾ ಕೌಸರ್ ಬೇಗ್ ಆಯ್ಕೆಯಾಗಿದ್ದಾರೆ.
Advertisement
ಈಗಾಗಲೇ ರುಮಾನಾ ಕೌಸರ್ ಬೇಗ್, ಹೈದರಾಬಾದ್‍ನಲ್ಲಿ ನಡೆದ 2024ರ ಚಾಂಪಿಯನ್‍ಶಿಪ್ ಹಾಗೂ ಮೆರಿಟ್ ಸರ್ಟಿಫಿಕೇಟ್ ಪಡೆದುಕೊಂಡಿದ್ದಾರೆ. ಅಲ್ಲದೇ ರಾಜ್ಯ ಮಟ್ಟದಲ್ಲಿ 30 ಪದಕಗಳು ಮತ್ತು 100 ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕರಾಟೆ ಟ್ರೋಫಿಗಳನ್ನು ಗಳಿಸಿ ಸಾಧನೆ ಮಾಡಿದ್ದಾರೆ. ಸಾಧಕ ರತ್ನ ರಾಷ್ಟ್ರೀಯ ಪ್ರಶಸ್ತಿ ಕರಾಟೆ 2023, ಇಂಡಿಯಾ ಬುಕ್ ಆಫ್ ರೆಕಾರ್ಡ್ ಚಿನ್ನದ ಪದಕಗಳ ಜೊತೆಗೆ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಮೊದಲ ದಿನವೇ ʻಯಶಸ್ವಿʼ ಶತಕದ ಹೋರಾಟ – ಭರ್ಜರಿ ಮೊತ್ತದತ್ತ ಭಾರತ
Advertisement
Advertisement
ಇವರು ವಸತಿ ಶಾಲೆಗಳಲ್ಲಿ ಸುಮಾರು 3000 ಬಾಲಕಿಯರಿಗೆ ಆತ್ಮರಕ್ಷಣೆಗಾಗಿ ಕರಾಟೆ ತರಬೇತಿ ನೀಡುತ್ತಿದ್ದಾರೆ. ಇವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವಕಾಶ ಸಿಕ್ಕಿರುವುದಕ್ಕೆ ಜಿಲ್ಲೆಯ ಜನ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ʻಯಶಸ್ವಿʼ ದ್ವಿಶತಕ – ಟೀಂ ಇಂಡಿಯಾ ಪರ ಜೈಸ್ವಾಲ್ ವಿಶೇಷ ಸಾಧನೆ