– ಅಮೃತ್ ಸಿಟಿ ಯೋಜನೆಯ 8 ಕೋಟಿ ಹಣ ಬಳಕೆ ಮೂಲಕ ಕಾಯಕಲ್ಪ
ಕೋಲಾರ: ಮಕ್ಕಳಿಗೆ ಆಟವಾಡೋದಕ್ಕೆ, ಹಿರಿಯರು ವಿಶ್ರಾಂತಿ ಪಡೆಯೋದಕ್ಕೆ, ಜನರು ಬೆಳಗ್ಗೆ ಸಂಜೆ ವಾಯು ವಿಹಾರಕ್ಕೆ ಉದ್ಯಾನವನಗಳು (Park) ಅವಶ್ಯಕ. ಹಳ್ಳಿಯಲ್ಲಾದ್ರೆ ಮರ, ಗಿಡಗಳು ಸಿಗುತ್ತವೆ. ಆದರೆ ನಗರ ಪ್ರದೇಶದಲ್ಲಿ ವಾಯು ವಿಹಾರಕ್ಕೆ ಸೂಕ್ತ ಜಾಗ ಉದ್ಯಾನವನಗಳು. ಇಂತಹ ಉದ್ಯಾನವನಗಳ ಅಭಿವೃದ್ದಿಗೆ ಕೋಲಾರ ನಗರಸಭೆ (Kolar City Municipal Council) ಮಾಸ್ಟರ್ ಪ್ಲಾನ್ ರೂಪಿಸಿದೆ.
ಹೌದು, ನಗರವನ್ನ ಸುತ್ತಿ ಬರುವ ಜನರು ಸುಸ್ತಾಗಿ ಕೊನೆ ಪಕ್ಷ ಒಂದು ಕ್ಷಣ ವಿಶ್ರಮಿಸೋಣ ಅಂದರೆ ನಗರ ಪ್ರದೇಶಗಳಲ್ಲಿ ಸಿಗೋದೇ ಪಾರ್ಕ್‌ಗಳು. ಇನ್ನೂ ಸಾಕಷ್ಟು ಜನರು ಬೆಳಗ್ಗೆ ಸಂಜೆ ವಾಯು ವಿಹಾರ ಮಾಡೋದು ಸಹ ಇದೆ ಪಾರ್ಕ್‌ಗಳಲ್ಲಿ. ಮತ್ತೆ ಕೆಲವು ಉದ್ಯಾನವನಗಳಲ್ಲಿ ಇತ್ತೀಚೆಗೆ ತೆರೆದ ವ್ಯಾಯಾಮ, ಜಿಮ್ ಸಹ ಮಾಡಲಾಗಿದೆ. ಆದರೆ ಈ ಪಾರ್ಕ್‌ಗಳು ಸರಿಯಾದ ನಿರ್ವಹಣೆ ಇಲ್ಲದೆ ಪಾಳು ಬಿದ್ದಿವೆ. ಪಾರ್ಕ್‌ಗಳು ಕುಡುಕರ ಅಡ್ಡೆಗಳಾಗಿ, ನಿರ್ವಹಣೆ ಇಲ್ಲದೆ ಅಳವಿನಂಚಿಗೆ ತಲುಪಿವೆ. ಇದನ್ನ ಮನಗಂಡ ಡಿಸಿ ಎಂಆರ್ ರವಿ ಅವರು ನಗರಸಭೆ ಮೂಲಕ ಅಭಿವೃದ್ಧಿಗೆ ಮುಂದಾಗಿದ್ದಾರೆ. ಕೋಲಾರ ನಗರಸಭೆ ಸರ್ವಜ್ಞ ಪಾರ್ಕ್, ಅಂಬೇಡ್ಕರ್ ಪಾರ್ಕ್, ಕುವೆಂಪು ಪಾರ್ಕ್ ಸೇರಿದಂತೆ ನಗರದಲ್ಲಿರುವ 19 ಉದ್ಯಾನವನಗಳಿಗೆ ಕಾಯಕಲ್ಪ ನೀಡಲು ಮಾಸ್ಟರ್ ಪ್ಲಾನ್‌ವೊಂದು ತಯಾರಾಗಿದೆ. ಇದನ್ನೂ ಓದಿ: ಕರ್ತವ್ಯನಿರತ ಯೋಧನಿಗೆ ವಿದ್ಯುತ್ ಶಾಕ್ – ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲೇ ಸಾವು
ಸ್ವಚ್ಛತಾ ಹಿ ಸೇವಾ ಆಂದೋಲನದ ಭಾಗವಾಗಿ ಅಕ್ಟೋಬರ್ 2ರವರೆಗೆ ನಡೆಯಲಿರುವ ಈ ಅಭಿಯಾನದಲ್ಲಿ, ಪ್ರತಿ ಭಾನುವಾರ ನಗರದ ಎಲ್ಲಾ ಉದ್ಯಾನವನಗಳನ್ನು ಸಾರ್ವಜನಿಕರ ಸಹಭಾಗಿತ್ವದಲ್ಲಿ ಸ್ವಚ್ಛಗೊಳಿಸಲು ನಿರ್ಧರಿಸಲಾಗಿದೆ. ಅದರಂತೆ 85 ವರ್ಷಗಳಷ್ಟು ಹಳೆಯದಾದ ಸರ್ವಜ್ಞ ಪಾರ್ಕ್‌ನಲ್ಲಿರುವ ಬ್ಯಾಂಡ್ ಸ್ಟಾಂಡ್ ಮತ್ತು ರೇಡಿಯೋ ಕಿಯೋಸ್ಕ್ ಅನ್ನು ದುರಸ್ತಿಪಡಿಸಿ ಜನರ ಅನುಕೂಲಕ್ಕೆ ಅನುವು ಮಾಡಿಕೊಡಲು ಈಗಾಗಲೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದನ್ನೂ ಓದಿ: ನೇಪಾಳದಲ್ಲಿ ಅಲ್ಲೋಲ ಕಲ್ಲೋಲ – ಹಣಕಾಸು ಸಚಿವನನ್ನ ಬೀದಿಯಲ್ಲಿ ಅಟ್ಟಾಡಿಸಿ ಹೊಡೆದ ಉದ್ರಿಕ್ತರು
ಇನ್ನು ಕೋಲಾರ ಜಿಲ್ಲೆಯಲ್ಲಿ ಸುಮಾರು 56 ಪಾರ್ಕ್ಗಳಿವೆ. ಈ ಪೈಕಿ 19 ಕೋಲಾರ ನಗರದಲ್ಲೆ ಇವೆ. ಇದರಲ್ಲಿ ಉತ್ತಮ ಸ್ಥಿತಿಯಲ್ಲಿರುವ ಪಾರ್ಕ್‌ಗಳೇ ಕಡಿಮೆ. ಜಿಲ್ಲೆಯ ಬಹುತೇಕ ಪಾರ್ಕ್‌ಗಳು ನಿರ್ವಹಣೆ ಇಲ್ಲದೆ ಸೊರಗಿ ತನ್ನ ಸ್ವರೂಪವನ್ನೇ ಕಳೆದುಕೊಂಡಿವೆ. ಹಾಗಾಗಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ 15ನೇ ಹಣಕಾಸು ಯೋಜನೆಯಡಿ ಅಮೃತ್ ನಗರೋತ್ಥಾನ ಕಾರ್ಯಕ್ರಮದಡಿಯಲ್ಲಿ ಉದ್ಯಾನಗಳ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ ಮುಲ್ಲಾಗಳ ಸರ್ಕಾರ ಅನ್ನೋದು ಸಾಬೀತಾಗಿದೆ: ಅಶೋಕ್
ನಗರದ ಸಮಾನ ಮನಸ್ಕರು ನಾಗರಿಕ ವೇದಿಕೆ ರಚಿಸಿಕೊಂಡು ಉದ್ಯಾನಗಳ ನಿರ್ವಹಣೆ ಮತ್ತು ಸ್ವಚ್ಛತಾ ಪಾಲನೆಗೆ ಅಮೃತ್ ಯೋಜನೆಯಡಿ ಉದ್ಯಾನಗಳಿಗೆ ಕಾಯಕಲ್ಪ ನೀಡುವುದು ಇದರ ಉದ್ದೇಶವಾಗಿದೆ. ಈಗಾಗಲೆ 8 ಕೋಟಿ ರೂ. ಅನುದಾನ ಮೀಸಲಿಟ್ಟಿರುವ ನಗರಸಭೆ ಮುಂದಿನ ಅಕ್ಟೋಬರ್ 2ರ ವೇಳೆ ಎಲ್ಲಾ ಪಾರ್ಕ್‌ಗಳನ್ನು ಸುಂದರೀಕರಣ ಮಾಡೋದು ಇದರ ಉದ್ದೇಶವಾಗಿದೆ. ಇದನ್ನೂ ಓದಿ: ನೇಪಾಳದ ಏರ್‌ಪೋರ್ಟ್ ಬಳಿ ಹೊಗೆ ಕಂಡು ದೆಹಲಿಗೆ ವಾಪಸಾದ ವಿಮಾನ – ಏರ್ ಇಂಡಿಯಾ, ಇಂಡಿಗೋ ಹಾರಾಟ ರದ್ದು
ಅದರಂತೆ ಕುಳಿತುಕೊಳ್ಳಲು ಕಲ್ಲಿನ ಬೆಂಚುಗಳು, ನಡಿಗೆ ಪಥ, ಕಾರಂಜಿಗಳು ಹಾಗೂ ವಿದ್ಯುತ್ ದೀಪಗಳನ್ನು ಸರಿಪಡಿಸಿ ಸಾರ್ವಜನಿಕರ ಅನುಕೂಲಕ್ಕೆ ತಕ್ಕ ಹಾಗೆ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸುವುದು ಇವರ ಉದ್ದೇಶ. ಅದರಂತೆ ಸ್ವಚ್ಛತಾ ಹಿ ಸೇವಾ ಅಭಿಯಾನದ ನೆನಪಿಗಾಗಿ ಎಲ್ಲಾ ಉದ್ಯಾನಗಳಲ್ಲಿ ಸಸಿಗಳನ್ನು ನೆಟ್ಟು, ಮಕ್ಕಳಿಗೆ, ವೃದ್ಧರಿಗೆ, ಸಮಾನ ಮನಸ್ಕರಿಗೆ ಉದ್ಯಾನವನಗಳನ್ನ ಹಸಿರಾಗಿಸಿ ಸುಂದರ ಮಾಡಲು ನಿರ್ಧಾರ ಮಾಡಲಾಗಿದೆ. ಇದು ಕೋಲಾರ ನಾಗರೀಕರು ಸೇರಿದಂತೆ ನಿತ್ಯ ಪಾರ್ಕ್‌ನಲ್ಲಿ ವಾಯುವಿಹಾರ ಮಾಡುವವರಿಗೆ ಖುಷಿಯ ವಿಚಾರವಾಗಿದೆ. ಇದನ್ನೂ ಓದಿ: ಪುತ್ರನಿಗೆ ಶಸ್ತ್ರಚಿಕಿತ್ಸೆ – ಶಾಸಕ ವಿನಯ್‌ಗೆ 2 ದಿನಗಳ ಮಧ್ಯಂತರ ಜಾಮೀನು ಮಂಜೂರು
ಒಟ್ಟಿನಲ್ಲಿ ಮನಸ್ಸಿಗೆ ನೆಮ್ಮದಿ ಸಿಗಲಿ, ದೇಹಕ್ಕೆ ಒಂದಷ್ಟು ಉಲ್ಲಾಸ ಉತ್ಸಾಹ ಸಿಗಲಿ ಎಂದು ಜನರು ಉದ್ಯಾನವನಗಳಿಗೆ ಬರುತ್ತಾರೆ. ಆದರೆ ಪಾರ್ಕ್‌ಗಳ ಸರಿಯಾದ ನಿರ್ವಹಣೆ ಇಲ್ಲದೆ ಒಂದಷ್ಟು ನೆಮ್ಮದಿ ಇಲ್ಲದೆ ಇರುವುದನ್ನ ಮನಗಂಡ ಅಧಿಕಾರಿಗಳು ಉದ್ಯಾನವಗಳ ಅಭಿವೃದ್ಧಿಗೆ ಒತ್ತು ನೀಡಿರುವುದು ಖುಷಿಯ ವಿಚಾರವೇ ಸರಿ. ಇದನ್ನೂ ಓದಿ: ಈ ಜನ್ಮದಲ್ಲೇ ಮುಸ್ಲಿಂ ಧರ್ಮಕ್ಕೆ ಹೋಗಿಬಿಡಿ, ನಾವೇ ಹಾರ ಹಾಕಿ ಕಳುಹಿಸ್ತೇವೆ: ಶೋಭಾ ಕರಂದ್ಲಾಜೆ