ಮುಂಬೈ: ಟೀಂ ಇಂಡಿಯಾ (Team India) ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli), ಸ್ಫೋಟಕ ಬ್ಯಾಟ್ಸ್‌ಮ್ಯಾನ್ ಸೂರ್ಯಕುಮಾರ್ ಯಾದವ್ ಹಾಗೂ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಅವರು 2022ರ ಸಾಲಿನ ಐಸಿಸಿ ಪುರುಷರ ‘ವರ್ಷದ ಟಿ20 ತಂಡ’ದಲ್ಲಿ (Men’s T20I Team of the Year 2022) ಸ್ಥಾನ ಪಡೆದುಕೊಂಡಿದ್ದಾರೆ.
Advertisement
ಐಪಿಎಲ್‌ನಲ್ಲಿ (IPL) ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದ ಟೀಕೆಗಳಿಗೆ ಗುರಿಯಾಗಿದ್ದ ಕೊಹ್ಲಿ 2022ರ ಏಷ್ಯಾಕಪ್ ಟೂರ್ನಿಯಲ್ಲಿ ಲಯಕ್ಕೆ ಮರಳಿದರು. 5 ಪಂದ್ಯಗಳಿಂದ 276 ರನ್ ಕಲೆಹಾಕಿದ್ದರು. ಏಷ್ಯಾಕಪ್‌ನಲ್ಲಿ ಅಫ್ಘಾನಿಸ್ತಾನದ ವಿರುದ್ಧ ಭರ್ಜರಿ ಶತಕ ಸಿಡಿಸಿ ಮಿಂಚಿದರು. ಅಲ್ಲದೇ ಟಿ20 ವಿಶ್ವಕಪ್ (T20 WorldCup) ಟೂರ್ನಿಯಲ್ಲೂ ಬ್ಯಾಟಿಂಗ್ ಅಬ್ಬರ ಮುಂದುವರಿಸಿದ ಚೇಸ್ ಮಾಸ್ಟರ್ ಕೊಹ್ಲಿ ಪಾಕಿಸ್ತಾನ (Pakistan) ವಿರುದ್ಧ ಅಮೋಘ 82 ರನ್ ಗಳಿಸಿದ್ದರಲ್ಲದೆ, ಟೂರ್ನಿಯಲ್ಲಿ ಒಟ್ಟು 296 ರನ್ ಬಾರಿಸಿದರು.
Advertisement
Advertisement
ಸೂರ್ಯನ ಅಬ್ಬರ: ಸ್ಫೋಟಕ ಬ್ಯಾಟ್ಸ್‌ಮ್ಯಾನ್ ಸೂರ್ಯಕುಮಾರ್ (Suryakumar Yadav) ಅವರು 2022ರ ಋತುವಿನಲ್ಲಿ 1,164 ರನ್ ಕಲೆಹಾಕಿದ್ದರು. 2 ಶತಕ ಮತ್ತು 9 ಅರ್ಧಶತಕ ಗಳಿಸಿದ್ದರು. ಮಾತ್ರವಲ್ಲದೇ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಟಿ20 ಬ್ಯಾಟರ್‌ಗಳ ಪಟ್ಟಿಯಲ್ಲಿ ಪಾಕಿಸ್ತಾನದ ಮೊಹಮ್ಮ್ ರಿಜ್ವಾನ್ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದರು. ಇದನ್ನೂ ಓದಿ: ಲೈಂಗಿಕ ಶೋಷಣೆ ಆರೋಪಕ್ಕೆ ಟ್ವಿಸ್ಟ್ – ಕುಸ್ತಿಪಟುಗಳ ವಿರುದ್ಧವೇ ಹೈಕೋರ್ಟ್‍ನಲ್ಲಿ ದೂರು
Advertisement
ಪಾಂಡ್ಯ ಪರಾಕ್ರಮ: 2022ರಲ್ಲಿ ಉತ್ತಮ ಆಲ್‌ರೌಂಡರ್ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯ ಬರೋಬ್ಬರಿ 607 ರನ್‌ಗಳಿಸಿದರಲ್ಲದೇ 20 ವಿಕೆಟ್‌ಗಳನ್ನು ಪೆಡೆಯುವ ಮೂಲಕ ವರ್ಷದ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಟಿ20 ವಿಶ್ವಕಪ್ ನಲ್ಲಿ ಇಂಗ್ಲೆಂಡ್ ವಿರುದ್ಧ ಸೆಮಿ ಫೈನಲ್‌ನಲ್ಲಿ 33 ಎಸೆತಗಳಲ್ಲಿ 66 ರನ್ ಚಚ್ಚಿ ತಂಡದ ಮೊತ್ತವನ್ನು 160ರ ಗಡಿ ದಾಟಿಸಿದರು.
ಬಟ್ಲರ್ ಬೊಂಬಾಟ್ ಬ್ಯಾಟಿಂಗ್: ಇಂಗ್ಲೆಂಡ್ ತಂಡದ ಮಾಜಿ ನಾಯಕ ಇಯಾನ್ ಮಾರ್ಗನ್ ನಿವೃತ್ತಿ ಘೋಷಿಸಿದ ಬಳಿಕ ಇಂಗ್ಲೆಂಡ್ ತಂಡದ ಕ್ಯಾಪ್ಟನ್ ಆದ ಜೋಸ್ ಬಟ್ಲರ್ (Jos Buttler) ಸಹ ವರ್ಷದ ಟಿ20ಐ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಕಳೆದ ವರ್ಷದ 15 ಪಂದ್ಯಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿರುವ ಬಟ್ಲರ್ 160.41 ಸ್ಟ್ರೈಕ್‌ರೇಟ್‌ನಲ್ಲಿ 462 ರನ್‌ಗಳನ್ನ ಚಚ್ಚಿದ್ದಾರೆ. ಅಲ್ಲದೇ ಏಕದಿನ ವಿಶ್ವಕಪ್ ಬಳಿಕ 2022ರಲ್ಲಿ ಟಿ20 ವಿಶ್ವಕಪ್ ಗೆಲ್ಲಲೂ ಬಟ್ಲರ್ ಕಾರಣವಾಗಿದ್ದಾರೆ. ಈ ಪಂದ್ಯದಲ್ಲಿ ಜವಾಬ್ದಾರಿ ಬ್ಯಾಟಿಂಗ್ ಪ್ರದರ್ಶಿಸಿದ ಬಟ್ಲರ್ 225 ರನ್ ಗಳಿಸಿ ಇಂಗ್ಲೆಂಡ್ ಆಟಗಾರರಲ್ಲೇ ಅತಿಹೆಚ್ಚು ರನ್‌ಗಳಿಸಿದ ಹೆಗ್ಗಳಿಕೆ ಪಡೆದರು.
View this post on Instagram
ರಿಜ್ವಾನ್ ಮಿಂಚಿಂಗ್: 2021 ರಿಂದಲೂ ಅದ್ಭುತ ಫಾರ್ಮ್ ಮುಂದುವರಿಸಿದ ಪಾಕ್ ಕ್ರಿಕೆಟಿಗ ಮೊಹಮ್ಮದ್ ರಿಜ್ವಾನ್ 2022ರ ಒಂದೇ ವರ್ಷದಲ್ಲಿ 996 ರನ್ ಗಳಿಸಿ, ಪುರುಷರ ಅಂತಾರಾಷ್ಟ್ರೀಯ ಟಿ20 ನಲ್ಲಿ ಅತಿಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದುಕೊಂಡಿದ್ದಾರೆ. ರಿಜ್ವಾನ್ ಚುಟುಕು ಪಂದ್ಯದಲ್ಲಿ 10 ಅರ್ಧಶತಗಳನ್ನ ಸಿಡಿಸಿದ್ದಾರೆ. ಜೊತೆಗೆ ಟಿ20 ವಿಶ್ವಕಪ್‌ನಲ್ಲಿ 175 ರನ್‌ಗಳಿಸಿ ಪಾಕ್ ತಂಡದ ಹೆಗ್ಗಳಿಕೆಗೂ ಅವರು ಪಾತ್ರರಾದರು. ಇದನ್ನೂ ಓದಿ: ಪಂತ್ ಆದಷ್ಟು ಬೇಗ ಗುಣಮುಖರಾಗಲಿ – ಮಹಾಕಾಳೇಶ್ವರನಿಗೆ ಪ್ರಾರ್ಥನೆ ಸಲ್ಲಿಸಿದ ಸೂರ್ಯ, ಕುಲ್‌ದೀಪ್
ಇವರಷ್ಟೇ ಅಲ್ಲದೇ ಪಾಕಿಸ್ತಾನ ತಂಡದ ಹ್ಯಾರಿಸ್ ರೌಫ್, ಜಿಂಬಾಬ್ವೆ ತಂಡದ ಸಿಕಂದರ್ ರಾಜ, ಇಂಗ್ಲೆಂಡ್ ಆಲ್‌ರೌಂಡರ್ ಸ್ಯಾಮ್ ಕರ್ರನ್, ಶ್ರೀಲಂಕಾದ ವಾನಿಂದು ಹಸರಂಗ, ಕಿವೀಸ್‌ನ ಗ್ಲೆನ್ ಫಿಲಿಪ್ಸ್ ಹಾಗೂ ಐರ್ಲೆಂಡ್‌ನ ಜೋಶ್ ಲಿಟ್ಲ್ ವರ್ಷದ ಟಿ20ಐ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k