ದುಬೈ: ಐಸಿಸಿ ವರ್ಷದ ಕ್ರಿಕೆಟ್ ಆಟಗಾರ ಪ್ರಶಸ್ತಿ ಪಡೆದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ಧಿ ಲಭಿಸಿದ್ದು, ಐಸಿಸಿ ಬಿಡುಗಡೆ ಮಾಡಿದ ಆಟಗಾರರ ಶ್ರೇಯಾಂಕ ಪಟ್ಟಿಯಲ್ಲಿ ಕೊಹ್ಲಿ, ಕೆರಿಬಿಯನ್ ಆಟಗಾರ ಬ್ರಿಯಾನ್ ಲಾರಾ ಅವರ ದಾಖಲೆಯನ್ನು ಮುರಿದಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಜೋಹನ್ಸ್ ಬರ್ಗ್ ನಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದ ಎರಡು ಇನ್ನಿಂಗ್ಸ್ ಗಳಲ್ಲಿ 54 ಮತ್ತು 41 ರನ್ ಹೊಡೆಯುವ ಮೂಲಕ 12 ಅಂಕ ಗಳಿಸಿದರು. ಈ ಮೂಲಕ 912 ಅಂಕಗಳನ್ನು ಪಡೆದು ಲಾರಾ ದಾಖಲೆಯನ್ನು ಸರಿಗಟ್ಟಿದರು. ಇದಕ್ಕೂ ಮೊದಲು 900 ಅಂಕಗಳು ಪಡೆದಿದ್ದ ಕೊಹ್ಲಿ 31 ಸ್ಥಾನದಲ್ಲಿದ್ದರು.
Advertisement
Advertisement
ಐಸಿಸಿಯ ಆಲ್ ಟೈಂ ಶ್ರೇಯಾಂಕ ಪಟ್ಟಿಯಲ್ಲಿ ಪಟ್ಟಿಯಲ್ಲಿ 961 ಅಂಕಗಳೊಂದಿಗೆ ಆಸ್ಟ್ರೇಲಿಯಾದ ಡಾನ್ ಬ್ರಾಡ್ ಮನ್ ಅಗ್ರ ಸ್ಥಾನವನ್ನು ಹೊಂದಿದ್ದು ಪ್ರಸ್ತುತ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ 947 ಅಂಕಗಳೊಂದಿಗೆ ಎರಡನೇ ಸ್ಥಾನವನ್ನು ಪಡೆದಿದ್ದಾರೆ.
Advertisement
ಕೊಹ್ಲಿ 912 ಅಂಕಗಳೊಂದಿಗೆ 26ನೇ ಸ್ಥಾನವನ್ನು ಪಡೆದಿದ್ದಾರೆ. ನಂತರದಲ್ಲಿ ಲಾರಾ (911), ಕೇವಿನ್ ಪೀಟರ್ ಸನ್ (909), ಹಶೀಮ್ ಅಮ್ಲ (907), ಶಿವನಾರಾಯಣ್ ಚಂದ್ರಪಾಲ್ (901) ಮತ್ತು ಮೈಕಲ್ ಕ್ಲಾಕ್(900) ಸ್ಥಾನ ಪಡೆದಿದ್ದಾರೆ.
Advertisement
ಟೀಂ ಇಂಡಿಯಾ ಮಾಜಿ ಆಟಗಾರ ಸುನೀಲ್ ಗವಾಸ್ಕರ್ 1979 ರ ಇಂಗ್ಲೆಂಡ್ ವಿರುದ್ಧದ ನಡೆದ ಟೆಸ್ಟ್ ಪಂದ್ಯದಲ್ಲಿ 916 ಅಂಕಗಳನ್ನು ಪಡೆದಿದ್ದರು. ಪ್ರಸ್ತುತ ಕೊಹ್ಲಿ ಗವಾಸ್ಕರ್ ದಾಖಲೆಯನ್ನು ಮುರಿಯುವ ಅವಕಾಶವಿದ್ದು, ಟೀಂ ಇಂಡಿಯಾ ಜೂನ್ ನಲ್ಲಿ ಬಾಂಗ್ಲಾ ಅಥವಾ ಆಗಸ್ಟ್/ಸೆಪ್ಟೆಂಬರ್ ನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆಡಲಿದೆ.