ಲಂಡನ್: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಸರಣಿ ಸೋಲುಂಡರೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಗೆಲ್ಲುವ ಮೂಲಕ ಸೋಲಿನ ಅಂತರ ಕಡಿಮೆ ಮಾಡಿಕೊಳ್ಳವ ನಿರೀಕ್ಷೆ ಇತ್ತು. ಆದರೆ ಅಂತಿಮ ಟೆಸ್ಟ್ 2ನೇ ಇನ್ನಿಂಗ್ಸ್‍ನಲ್ಲಿ ನಾಯಕ ವಿರಾಟ್ ಕೊಹ್ಲಿ ಮೊದಲ ಎಸೆತದಲ್ಲೇ ಔಟಾಗಿ ಗೋಲ್ಡನ್ ಡಕ್ ಆಗುವ ಮೂಲಕ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ.
https://twitter.com/DRVcricket/status/1039185894039871488?
Advertisement
ಇದಕ್ಕೂ ಮುನ್ನ ವಿದಾಯ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಇಂಗ್ಲೆಂಡ್ ಭಾರೀ ಮುನ್ನಡೆ ಪಡೆಯಲು ಕಾರಣದ ಕುಕ್ ತಮ್ಮ ಕೊನೆಯ ಪಂದ್ಯವನ್ನು ಸ್ಮರಣೀಯವಾಗಿಸಿದರು. 147 ರನ್ ಸಿಡಿಸಿ ಕುಕ್ ಔಟಾಗುತ್ತಿದಂತೆ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ಎದ್ದು ನಿಂತು ಚಪ್ಪಾಳೆ ತಟ್ಟಿ ಗೌರವ ನೀಡಿದರು. ಇದರೊಂದಿಗೆ ವೃತ್ತಿ ಜೀವನದ 33ನೇ ಶತಕ ಪೂರೈಸಿದ ಕುಕ್ ಪಾದಾರ್ಪಣೆ ಪಂದ್ಯ ಹಾಗೂ ಅಂತಿಮ ಪಂದ್ಯ ಎರಡರಲ್ಲೂ ಶತಕ ಸಿಡಿಸಿದ ಹೆಗ್ಗಳಿಕೆ ಪಡೆದರು.
Advertisement
Advertisement
ಎರಡನೇ ಇನ್ನಿಂಗ್ಸ್ ನಲ್ಲಿ 423 ರನ್ ಗಳಿಸಿದ ಇಂಗ್ಲೆಂಡ್ ಡಿಕ್ಲೇರ್ ನೀಡಿ ಟೀಂ ಇಂಡಿಯಾಗೆ 464 ರನ್ ಗುರಿ ನೀಡಿತು. ಇಂಗ್ಲೆಂಡ್ ಪರ ಭರ್ಜರಿ ಬ್ಯಾಟಿಂಗ್ ನಡೆಸಿದ ನಾಯಕ ರೂಟ್ (125) ಕೂಡ ಶತಕ ಸಿಡಿಸಿ ಮಿಂಚಿದರು. ಇತ್ತ ಇಂಗ್ಲೆಂಡ್ ಗುರಿ ಬೆನ್ನತ್ತಿದ ಟೀಂ ಇಂಡಿಯಾ 3 ರನ್ ಗಳಿಸುವಷ್ಟರಲ್ಲಿ ಆರಂಭಿಕ ಧವನ್ (1), ಪೂಜಾರ (0), ಕೊಹ್ಲಿ (0) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಟೀಂ ಇಂಡಿಯಾ 58/3 ಕಳೆದುಕೊಂಡಿದ್ದು ಕೆಎಲ್ ರಾಹುಲ್ (46*), ರಹಾನೆ (10*) ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಇಂಗ್ಲೆಂಡ್ ಪರ ಮಿಂಚಿನ ದಾಳಿ ನಡೆಸಿದ ಆ್ಯಂಡರ್ ಸನ್ 2, ಬ್ರಾಡ್ 1 ವಿಕೆಟ್ ಗಳಿಸಿದ್ದಾರೆ.
Advertisement
https://twitter.com/DRVcricket/status/1039186174244528129
https://twitter.com/DRVcricket/status/1039186681793077248