ಮುಂಬೈ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಸೋಶಿಯಲ್ ಮೀಡಿಯಾದಲ್ಲಿ ಅತಿಹೆಚ್ಚು ಅಭಿಮಾನಿಗಳನ್ನ ಹೊಂದಿದ ನಂ.1 ಕ್ರಿಕೆಟಿಗನಾಗಿದ್ದಾರೆ. ಈ ನಡುವೆ ಕೊಹ್ಲಿ ಸೋಶಿಯಲ್ ಮೀಡಿಯಾದಿಂದ ಗಳಿಸುವ ಆದಾಯದ ಬಗ್ಗೆ ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್ ಫ್ಲಾಟ್‌ಪಾರ್ಮ್ ಸಂಸ್ಥೆ ಹಾಪರ್ ಎಚ್‌ಕ್ಯೂ ಬಿಡುಗಡೆ ಮಾಡಿದ ವರದಿಯೊಂದು ಚರ್ಚೆಯನ್ನ ಹುಟ್ಟುಹಾಕಿದೆ.
While I am grateful and indebted to all that I’ve received in life, the news that has been making rounds about my social media earnings is not true. ????
— Virat Kohli (@imVkohli) August 12, 2023
Advertisement
ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) ಹಾಗೂ ಲಿಯೊನೆಲ್ ಮೆಸ್ಸಿ (Lionel Messi) ಬಳಿಕ ವಿಶ್ವದಲ್ಲಿಯೇ ಸೋಶಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ 3ನೇ ಕ್ರೀಡಾಪಟು ಹಾಗೂ ನಂ.1 ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಎಂದು ಸಂಸ್ಥೆ ತಿಳಿಸಿತ್ತು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ಹುಟ್ಟಿಕೊಂಡಿತ್ತು. ಇದಕ್ಕೆ ಸ್ವತಃ ವಿರಾಟ್ ಕೊಹ್ಲಿ ಅವರೇ ಸ್ಪಷ್ಟನೆ ಕೊಟ್ಟಿದ್ದು, ತಾನು ಒಂದು ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ (Instagram Post Earning) 11.45 ಕೋಟಿ ರೂ. ಪಡೆಯುತ್ತೇನೆಂಬುದು ಸುಳ್ಳು ಎಂದು ಹೇಳಿದ್ದಾರೆ.
Advertisement
Advertisement
ನಾನು ನನ್ನ ಜೀವನದಲ್ಲಿ ಸ್ವೀಕರಿಸಿದ ಎಲ್ಲದಕ್ಕೂ ನಾನು ಕೃತಜ್ಞನಾಗಿದ್ದೇನೆ ಮತ್ತು ಋಣಿಯಾಗಿದ್ದೇನೆ, ನನ್ನ ಸೋಶಿಯಲ್ ಮೀಡಿಯಾ ಗಳಿಕೆಯ ಬಗ್ಗೆ ಹರಿದಾಡುತ್ತಿರುವ ಸುದ್ದಿ ನಿಜವಲ್ಲ ಎಂದು ವಿರಾಟ್ ಕೊಹ್ಲಿ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ವಿನಾಶದತ್ತ ಸಾಗುತ್ತಿದೆ – ನಾಲಿಗೆ ಹರಿಬಿಟ್ಟ ಪಾಕ್ ಮಾಜಿ ಕ್ರಿಕೆಟಿಗ, ಅಭಿಮಾನಿಗಳು ಕೆಂಡ
Advertisement
ಕೊಹ್ಲಿ ಬಗ್ಗೆ ಬಂದ ಸುದ್ದಿ ಏನಿತ್ತು?
ಕೊಹ್ಲಿ ಒಂದು ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ 11.45 ಕೋಟಿ ರೂ. ಪಡೆಯುತ್ತಾರೆ ಎಂದು ಹಾಪರ್ ಎಚ್‌ಕ್ಯೂ ವರದಿ ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೊ ಅಗ್ರಸ್ಥಾನದಲ್ಲಿದ್ದು, ಮತ್ತೊಬ್ಬ ದಿಗ್ಗಜ ಲಿಯೊನೆಲ್ ಮೆಸ್ಸಿ 2ನೇ ಸ್ಥಾನ ಪಡೆದುಕೊಂಡಿರುವುದಾಗಿ ಹೇಳಿತ್ತು.
ರೊನಾಲ್ಡೊ ಪೋಸ್ಟ್ ಮಾಡುವ ಪ್ರಾಯೋಜಿತ ಪೋಸ್ಟ್‌ಗೆ ಸುಮಾರು 3.23 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತವನ್ನು ಪಡೆಯುತ್ತಾರೆ. ಅಂದರೆ ಪ್ರತಿ ಪೋಸ್ಟ್‌ಗೆ ಸುಮಾರು 26.75 ಕೋಟಿ ರೂಗಳನ್ನು ಪಡೆಯುತ್ತಾರೆ. ಅಂತೆಯೇ ಮೆಸ್ಸಿ ಪ್ರತಿ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಸುಮಾರು 2.56 ಮಿಲಿಯನ್ (21.49 ಕೋಟಿ ರೂ.) ನಗದನ್ನು ಪಡೆಯುತ್ತಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಹೊಸ ಇನ್ನಿಂಗ್ಸ್ ಆರಂಭ – ಧಾರವಾಡದಲ್ಲಿ 900 ಕೋಟಿ ಹೂಡಿಕೆ
ವಿರಾಟ್ ಕೊಹ್ಲಿ ಜಾಗತಿಕವಾಗಿ ಟಾಪ್-20 ಪಟ್ಟಿಯಲ್ಲಿ ಸ್ಥಾನವನ್ನು ಪಡೆದ ಏಕೈಕ ಭಾರತೀಯನಾಗಿದ್ದು, ಇನ್‌ಸ್ಟಾಗ್ರಾಮ್ ಪ್ಲಾಟ್‌ಫಾರ್ಮ್‌ನಲ್ಲಿ 25.6 ಕೋಟಿ ಅನುಯಾಯಿಗಳನ್ನು ಹೊಂದಿದ್ದಾರೆ. ಇವರನ್ನು ಹೊರತುಪಡಿಸಿ ಬಾಲಿವುಡ್ ಮತ್ತು ಹಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಈ ಪಟ್ಟಿಯಲ್ಲಿ 29ನೇ ಸ್ಥಾನವನ್ನು ಪಡೆದುಕೊಂಡಿದ್ದು, ಪ್ರತಿ ಪೋಸ್ಟ್‌ಗೆ 532,000 ಅಮೆರಿಕನ್ ಡಾಲರ್ (4.40 ಕೋಟಿ ರೂ.) ಹಣವನ್ನು ಪಡೆಯುತ್ತಾರೆ.
Web Stories