ಸ್ವಿಜರ್ಲ್ಯಾಂಡ್: ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಹಾಗೂ ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್ (80) ಶನಿವಾರ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ಕೋಫಿ ಅನ್ನಾನ್ ಫೌಂಡೇಶನ್ ತಿಳಿಸಿದೆ.
ಇಂದು ಸ್ವಿಜರ್ಲ್ಯಾಂಡ್ನ ಬರ್ನ್ ಆಸ್ಪತ್ರೆಯಲ್ಲಿ ಕೋಫಿ ಅನ್ನಾನ್ ನಿಧನರಾಗಿದ್ದಾರೆ. ಈ ವೇಳೆ ಅವರ ಪತ್ನಿ ನಾನೆ, ಮಕ್ಕಳಾದ ಅಮಾ, ಕಾಜೋ ಮತ್ತು ನಿನಾ ಇದ್ದರು. ಮೂಲತಃ ಘಾನಾ ದೇಶದವರಾದ ಕೋಫಿ ಅನ್ನಾನ್, ಆಫ್ರಿಕಾದ ಖಂಡದ ಅನೇಕ ದೇಶಗಳ ಅಭಿವೃದ್ಧಿಗಾಗಿ ಶ್ರಮಿಸಿದ್ದರು.
Advertisement
Advertisement
ಕೋಫಿ ಅನ್ನಾನ್ ಜನವರಿ 1997 ರಿಂದ ಡಿಸೆಂಬರ್ 2006ರವರೆಗೆ ವಿಶ್ವಸಂಸ್ಥೆಯ 7ನೇ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಆಗಿದ್ದರು. ಈ ಮೂಲಕ ಮೊದಲ ಕಪ್ಪು ವರ್ಣೀಯ ವ್ಯಕ್ತಿ ಈ ಪಟ್ಟವನ್ನು ಅಲಂಕರಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದರು.ಅಧ್ಯಕ್ಷತೆ ಅವಧಿ ಬಳಿಕ ಕೋಫಿ ಅನ್ನಾನ್ ಫೌಂಡೇಶನ್ ತೆರೆದು, ಅದರ ಮೂಲಕ ಶಾಂತಿ ಸ್ಥಾಪನೆಗಾಗಿ ದುಡಿದಿದ್ದರು. ಹೀಗಾಗಿ ಅವರಿಗೆ 2001ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿತ್ತು.
Advertisement
It is with immense sadness that the Annan family and the Kofi Annan Foundation announce that Kofi Annan, former Secretary General of the United Nations and Nobel Peace Laureate, passed away peacefully on Saturday 18th August after a short illness… pic.twitter.com/42nGOxmcPZ
— Kofi Annan (@KofiAnnan) August 18, 2018
Advertisement
ಆಫ್ರಿಕಾ ಪ್ರೋಗ್ರೆಸ್ ಪ್ಯಾನಲ್‍ನಲ್ಲಿ ಅಧ್ಯಕ್ಷರಾಗಿ ಮತ್ತು ಗ್ರೀನ್ ರೆವಲ್ಯೂಷನ್ ಇನ್ ಆಫ್ರಿಕಾದಲ್ಲಿ ನಾಯಕತ್ವ ವಹಿಸಿ ದುಡಿದಿದ್ದರು. ಕೋಫಿ ಅನ್ನಾನ್ ಸುದ್ದಿ ತಿಳಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬರೆದು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
Mr. Kofi Annan’s significant contribution to the MDGs will always be remembered. My thoughts are with his family and admirers in this hour of grief. May his soul rest in peace.
— Narendra Modi (@narendramodi) August 18, 2018