ಮಡಿಕೇರಿ: ಕೇಂದ್ರ ಸರ್ಕಾರ ಕರಿ ಮೆಣಸಿಗೆ (Black Pepper) ವಿಧಿಸಿದ್ದ GST ಯನ್ನು (ಸರಕು ಮತ್ತು ಸೇವಾ ತೆರಿಗೆ) ಸಂಪೂರ್ಣ ತೆಗೆದು ಹಾಕಿದೆ.
Advertisement
ಕೊಡಗಿನ ಗೋಣಿಕೊಪ್ಪ ಬೆಳೆಗಾರರೋಬ್ಬರಿಗೆ 1 ಕೋಟಿ GST ಕಟ್ಟುವಂತೆ ನೋಟಿಸ್ ಬಂದಿತ್ತು. ಬಳಿಕ ಅವರು ಕರ್ನಾಟಕ ಕಾಫಿ ಬೆಳೆಗಾರರ ಸಂಘ, ಕರ್ನಾಟಕ ಬೆಳೆಗಾರರ ಸಂಘ, ಕೊಡಗು ಪ್ಲಾಂಟರ್ಸ್ ಅಸೋಸಿಯೇಶನ್ ನಿಯೋಗದೊಂದಿಗೆ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಸಂಪರ್ಕಿಸಿ ಮನವಿ ಸಲ್ಲಿಸಿದ್ದರು. ಇದನ್ನೂ ಓದಿ: ಬೆಳ್ಳಂಬೆಳಿಗ್ಗೆ ಮೈಕ್ರೋ ಫೈನಾನ್ಸ್, ಅಕ್ರಮ ಬಡ್ಡಿ ದಂಧೆಕೋರರ ಮನೆಗಳ ಮೇಲೆ ಪೊಲೀಸರ ದಾಳಿ
Advertisement
Advertisement
ಈ ಸಂಬಂಧ ಯದುವೀರ್ (Yaduveer Wadiyar) ಅವರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಗಮನ ಸೆಳೆದಿದ್ದರು. ಅದರಂತೆ ಈಗ ಕರಿಮೆಣಸು ಬೆಳೆಗಾರರಿಗೆ ಕೇಂದ್ರ ಗುಡ್‌ನ್ಯೂಸ್ ಕೊಟ್ಟಿದೆ. ಕರಿಮೆಣಸು ಬೆಳೆಗೆ GST ರದ್ದು ಮಾಡಿ ಆದೇಶ ಹೊರಡಿಸಿದೆ. ಈ ಹಿನ್ನೆಲೆ ವಿವಿಧ ಬೆಳೆಗಾರ ಸಂಘಟನೆಗಳು ಸಂಸದ ಯದುವೀರ್ ಒಡೆಯರ್ ಅವರಿಗೆ ಧನ್ಯವಾದ ಸಲ್ಲಿಸಿವೆ. ಇದನ್ನೂ ಓದಿ: ರಾಜಧಾನಿಯಲ್ಲಿ ಮಿತಿಮೀರಿದ ಪುಂಡರ ಹಾವಳಿ – ಮಧ್ಯರಾತ್ರಿ ಮಾರಕಾಸ್ತ್ರ ಹಿಡಿದು ಬೈಕ್ ವ್ಹೀಲಿಂಗ್