ಮಡಿಕೇರಿ: ಸಾಂಪ್ರದಾಯಿಕ ವಸ್ತ್ರ ಧರಿಸುವ ವಿಚಾರದಲ್ಲಿ ವಿವಾದದ ಕೇಂದ್ರವಾಗಿ ಮಾರ್ಪಟ್ಟಿರುವ ಮಡಿಕೇರಿ (Madikeri) ತಾಲ್ಲೂಕಿನ ಕಟ್ಟೆಮಾಡು ಗ್ರಾಮದ ಶ್ರೀ ಮಹಾಮೃತ್ಯುಂಜಯ ದೇವಾಲಯದ ವಿಚಾರ ಸಾಮರಸ್ಯದ ಕೊರತೆಗೆ ಕಾರಣವಾಗಿದೆ. ಇದೀಗ ಮಹಾಮೃತ್ಯುಂಜಯ ದೇವಾಲಯದ ಅರ್ಚಕನ (Priest) ಮೇಲೆ ಮಾರಣಾಂತಿಕ ಹಲ್ಲೇ ಆಗಿರುವುದರಿಂದ ಜಿಲ್ಲೆಯಲ್ಲಿ ಮತ್ತೆ ಅಶಾಂತಿಯ ವಾತಾವರಣ ಸೃಷ್ಟಿ ಅಗುತ್ತೋ ಅನ್ನೋ ಅನುಮಾನ ಸ್ಥಳೀಯರನ್ನು ಕಾಡುತ್ತಿದೆ.
ಹೌದು. ಕೊಡವರ ಸಾಂಪ್ರದಾಯಿಕ ಕುಪ್ಯಚೇಲೆ ಧರಿಸಿ ದೇವಾಲಯ ಪ್ರವೇಶಕ್ಕೆ ನಿರಾಕರಿಸಿದ ವಿಚಾರಕ್ಕೆ ಸಂಬಂಧಪಟ್ಟಂತೆ 2 ಸಮುದಾಯಗಳ ನಡುವಿನ ವಿವಾದ ಇಂದಿಗೂ ಮುಂದುವರೆದಿದೆ. ಅಲ್ಲದೇ ದೇವಾಲಯದ 200 ಮೀಟರ್ ಸುತ್ತ ನಿಷೇಧಾಜ್ಞೆ ಮುಂದುವರೆಸಲಾಗಿದೆ. ಈ ನಡುವೆ ದೇವಾಲಯದ ಪ್ರದಾನ ಅರ್ಚಕರ ಮೇಲೆ ಇಬ್ಬರು ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಇದನ್ನೂ ಓದಿ: ಇದು ಚರಿತ್ರೆ ಸೃಷ್ಟಿಸೊ ಅವತಾರ – U19 ಮಹಿಳಾ T20 ವಿಶ್ವಕಪ್‌ನಲ್ಲಿ ಚೊಚ್ಚಲ ಶತಕ, ಭಾರತದ ತ್ರಿಶಾ ಗೊಂಗಡಿ ದಾಖಲೆ
ವಿಘ್ನೇಶ್ ಭಟ್ ಹಲ್ಲೆಗೊಳಗಾದ ಅರ್ಚಕರಾಗಿದು, ಕಾಕೋಟು ಪರಂಬು ಗ್ರಾಮದ ಅನಿಲ್ ಮತ್ತು ಸಹಚರರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಹಲ್ಲೆಯಿಂದ ಗಂಭೀರ ಗಾಯಗೊಂಡಿರುವ ಅರ್ಚಕರನ್ನ ಕೊಡಗು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ನಡುವೆ ಕೊಡವ ಜನಾಂಗದ ಅನಿಲ್ ಮತ್ತು ಸಹಚರರು ದೇವಾಲಯ ವಿಚಾರವಾಗಿ ಅರ್ಚಕರ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ನಡೆಸಿದ ಮೂವರು ಅರೋಪಿಗಳನ್ನು ಅದಷ್ಟು ಬೇಗ ಬಂಧನ ಮಾಡಬೇಕು ಇಲ್ಲದೇ ಹೋದ್ರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ದೇವಾಲಯದ ಸಮಿತಿ ಸದಸ್ಯರು ತಿಳಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಈ ನಡುವೆ ಕೊಡಗು ಎಸ್ಪಿ ರಾಮರಾಜನ್ ಮಾಧ್ಯಮಗಳೊಂದಿಗೆ ಮಾತಾನಾಡಿ, ಕಟ್ಟೆಮಾಡು ದೇವಾಲಯ ವಿವಾದ ಮುಂದಿರಿಸಿಕೊಂಡು ಸಮಾಜದಲ್ಲಿ ಶಾಂತಿ ಭಂಗಕ್ಕೆ ಮುಂದಾಗುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಸಿಎಂ ಬದಲಾವಣೆ ವಿಚಾರ| ಶಾಸಕರನ್ನು ಕೇಳಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಣಯ: ಕೆ.ಎನ್.ರಾಜಣ್ಣ