ಬೆಂಗಳೂರು: ಕೊಡಗಿನ ಮಹಾಮಳೆಗೆ ಬಲಿಯಾದವರ ಸಂಖ್ಯೆ 22ಕ್ಕೆ ಏರಿದ್ದು, ಆಗಸ್ಟ್ 17 ರಂದು ಕಣ್ಮರೆಯಾಗಿದ್ದ ಹೆಬ್ಬಟ್ಟಗೆರಿಯ ವೃದ್ಧೆ ಉಮ್ಮವ್ವ(75) ಮೃತದೇಹ ಗುರುವಾರ ಪತ್ತೆಯಾಗಿದೆ.
ಜಲಪ್ರವಾಹದಲ್ಲಿ ನಾಪತ್ತೆಯಾಗಿದ್ದ ಅಜ್ಜಿಯನ್ನು ಹುಡುಕಿಕೊಡುವಂತೆ ಪಬ್ಲಿಕ್ ಟಿವಿ ಮೂಲಕ ಮೊಮ್ಮಗಳು ಸಂಗೀತ ಸಂಗೀತಾ ಕೊಡಗು ಜಿಲ್ಲೆಯ ಉಸ್ತುವಾರಿ ಸಚಿವ ಸಾರಾ ಮಹೇಶ್ ಅವರಲ್ಲಿ ಮನವಿ ಮಾಡಿದ್ದರು.
Advertisement
ಈ ಮನವಿಗೆ ಸ್ಪಂದಿಸಿದ್ದ ಸಚಿವರು ಅಂದೇ ಹೆಬ್ಬಟ್ಟಗೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಷ್ಟೇ ಅಲ್ಲದೇ ಅಧಿಕಾರಿಗಳಿಗೆ ಉಮ್ಮವ್ವ ಅವರನ್ನು ಪತ್ತೆ ಹಚ್ಚುವಂತೆ ಸೂಚಿಸಿದ್ದರು.
Advertisement
ಕೊಡಗಿನಲ್ಲಿ ಪರಿಸ್ಥಿತಿ ನಿಧಾನವಾಗಿ ಸುಧಾರಣೆಯಾಗುತ್ತಿದ್ದು, ದುರ್ಗಮವಾಗಿದ್ದ ಮುಕ್ಕೋಡ್ಲು, ಮಕ್ಕಂದೂರು, ಜೋಡುಪಾಲ, ಮದೆನಾಡು, ಅರೆಕಲ್ಲು, ಹಟ್ಟಿಹೊಳೆ, ಕಾಡನಕೊಲ್ಲಿ ಸೇರಿದಂತೆ ಪ್ರವಾಹ ಬಾಧಿತ ಪ್ರದೇಶಗಳ ಮಾರ್ಗಗಳು ನಿಧಾನವಾಗಿ ಓಡಾಟಕ್ಕೆ ಮುಕ್ತವಾಗುತ್ತಿವೆ. ಗುಡ್ಡ-ಭೂ ಕುಸಿತ, ಜಲಪ್ರವಾಹದಿಂದ ಪ್ರದೇಶಗಳಿಂದ ಸಂತ್ರಸ್ತರಾಗಿದ್ದವರು ಇದೀಗ ನಿಧಾನವಾಗಿ ಮನೆಗಳತ್ತ ತೆರಳ್ತಿದ್ದಾರೆ. ಆದರೆ, ಅವಶೇಷಗಳನ್ನ ನೋಡಿ ಕಣ್ಣೀರು ಹಾಕ್ತಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv