Connect with us

Bengaluru City

ಕೊಡಗಿನ ಜನತೆಗೆ ನೆರವಾಗಲು ರಂಗಸಪ್ತಾಹ- ಭಾಗವಹಿಸಿ, ಸಹಾಯ ಮಾಡಿ

Published

on

ಬೆಂಗಳೂರು: ಕೊಡಗಿನ ಅನಾಹುತಕ್ಕೆ ನೆರವಾಗಲು ಪತ್ರಕರ್ತ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಹಾಗೂ ಸಮಾನ ಮನಸ್ಕರ ನೇತೃತ್ವದಲ್ಲಿ ಆರಂಭವಾದ ಪೀಪಲ್ ಫಾರ್ ಕೊಡಗು ತಂಡವು ರಂಗಸಪ್ತಾಹ ಹೆಸರಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿದೆ.

ಬೆಂಗಳೂರಿನ ಕಲಾಗ್ರಾಮದಲ್ಲಿ ನವೆಂಬರ್ 11 ರಿಂದ ನವೆಂಬರ್ 16ರ ತನಕ ಪ್ರತಿದಿನ ಸಂಜೆ 5.30ಕ್ಕೆ ಗಾಯನ ಹಾಗೂ 7ಕ್ಕೆ ನಾಟಕ ಪ್ರದರ್ಶನವಿರುತ್ತದೆ. ಟಿಕೆಟ್ ಬೆಲೆ 100 ರೂ. ಹಾಗೂ 600 ರೂ. ಸೀಸನ್ ಪಾಸ್ ದರ ನಿಗದಿ ಮಾಡಲಾಗಿದೆ.

ಪೀಪಲ್ ಫಾರ್ ಪೀಪಲ್ ಮನವಿ ಏನು?
ಮಳೆ ನಿಂತಿತು, ಕೊಡಗು ಕೂಡ ಜನರ ನೆನಪಿನಿಂದ ಮರೆಯಾಗತೊಡಗಿತು. ನಮ್ಮ ದೇಶದಲ್ಲಿ ಸಮಸ್ಯೆಗಳೇ ಹಾಗೆ. ತಕ್ಷಣದ ಅನುಭೂತಿ ಮುಗಿದ ಮೇಲೆ ನಾವೆಲ್ಲರೂ ಮರೆಯುತ್ತೇವೆ. ಆದರೆ ಕೊಡಗು ನಮ್ಮೆಲ್ಲರ ಹೆಮ್ಮೆ. ಈ ಕೊಡಗು ಸರಿ ಹೋಗಿಲ್ಲ ಸಮಸ್ಯೆಗಳ ಸಾಗರವೇ ಇದೆ. ಕೊಡಗನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಬೆಟ್ಟದಷ್ಟು ಕೆಲಸಗಳು ಬಾಕಿ ಇವೆ. ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತಿದ್ದರೂ ಮರುನಿರ್ಮಾಣಕ್ಕೆ ವರ್ಷಾನುಗಟ್ಟಲೆಯ ಬದ್ಧತೆ ಬೇಕಿದೆ, ಶ್ರಮ ಹಾಕಬೇಕಿದೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಮ್ಮ “ಪೀಪಲ್ ಫಾರ್ ಪೀಪಲ್” ತಂಡ 25ಕ್ಕೂ ಹೆಚ್ಚು ದಿನಗಳ ಕಾಲ ಕೊಡಗಿನ ನೆರೆ ಪೀಡಿತ ಪ್ರದೇಶಗಳಲ್ಲಿ ನಿಂತು ಕೆಲಸ ಮಾಡಿದ್ದಲ್ಲದೆ ಸರಕಾರಕ್ಕೆ ಆಗಲೇಬೇಕಾದ 19 ಅವಶ್ಯ ಕೆಲಸಗಳ ಪಟ್ಟಿಯನ್ನು ಮನವಿ ಪತ್ರದ ಮೂಲಕ ಕೊಟ್ಟು, ಆ ನಿಟ್ಟಿನಲ್ಲಿ ಕಾರ್ಯೋನ್ಮುಕರಾಗಲು ಸಮಾಜದ ಎಲ್ಲ ಕ್ಷೇತ್ರಗಳ ಗಣ್ಯರನ್ನು ಕೈಜೋಡಿಸುವಂತೆ ಕೇಳಿಕೊಂಡಿದೆ. ಖುಷಿಯ ವಿಚಾರವೆಂದರೆ ಮಠ ಮಾನ್ಯಗಳಿಂದ ಹಿಡಿದು ರೈತ ಸಂಘದ ವರೆಗೆ ಎಲ್ಲರೂ ಕೈಜೋಡಿಸುತ್ತಿದ್ದಾರೆ.

ಈಗ ಆಗಬೇಕಾಗಿದ್ದು ಏನು?
ಜಾಗೃತಿ, 719 ಮಕ್ಕಳ ವಿದ್ಯಾಭ್ಯಾಸಕ್ಕೆ ವ್ಯವಸ್ಥೆ, 6095 ಮನೆಗಳ ಮರುನಿರ್ಮಾಣ, 2000 ಜಾನುವಾರು ಮತ್ತು ಹೈನುಗಾರಿಕೆಗೆ ವ್ಯವಸ್ಥೆ, 183 ಶಾಲೆಗಳ ನಿರ್ಮಾಣ, ಹಾಳಾದ 13 ಸಾವಿರ ಹೆಕ್ಟೇರ್ ಭೂ ಪ್ರದೇಶವನ್ನು ವಾಸಯೋಗ್ಯವಾಗಿ ನಿರ್ಮಿಸುವುದು, ಕ್ಯಾಂಪ್ ಗಳ ನಿರ್ವಹಣೆ, ಮುಖ್ಯವಾಗಿ ಐದು ನದಿಗಳ ಪುನರುಜ್ಜೀವನ ಇದಕ್ಕೆ ಸಾಕಷ್ಟು ಶ್ರಮ ಬೇಕು ಜೊತೆಗೆ ಹಣವೂ ಬೇಕು. ಸಿಎಂ ಫಂಡ್ ಕೂಡ ಸಾಲುವುದಿಲ್ಲ. ಹತ್ತು ವರುಷದ ಶ್ರಮ ಬೇಡುವ ಸಮಸ್ಯೆ. ಈ ನಿಟ್ಟಿನಲ್ಲಿ ಪರಿಹಾರ ಕೆಲಸವಾಗಬೇಕಿದೆ. ತಾತ್ಕಾಲಿಕ ಉದ್ಯೋಗ ಮೇಳ, ಆರೋಗ್ಯ ಮೇಳ ಮೆಡಿಕಲ್ ಟರ್ಮ್ ಕೆಲಸ ಆಗಬೇಕು. ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ: Kodagigagi Rangasapthaha

ಈ ಎಲ್ಲ ಸದುದ್ದೇಶಗಳಿಗಾಗಿ ಈ ರಂಗ ಸಪ್ತಾಹದ ಕಾರ್ಯಕ್ರಮ ನಾಡಿನ ಅತ್ಯುತ್ತಮ ರಂಗತಂಡಗಳು ನವೆಂಬರ್ 11 ರಿಂದ ನವೆಂಬರ್ 17 ರ ವರೆಗೆ ರಂಗ ಪ್ರದರ್ಶನ ನೀಡುವುದರ ಮೂಲಕ ಈ ಮಹಾತ್ಕಾರ್ಯಕ್ಕೆ ನೆರವಾಗುತ್ತಿದ್ದಾರೆ. ಈ ಮೂಲಕ ಏನು ಸಿಗುತ್ತದೊ ಅದನ್ನ ಕೊಡಗಿಗೆ ಬಳಸುವುದು ನಮ್ಮ ಉದ್ದೇಶ.

ಇದೆಲ್ಲದರ ಜೊತೆ ಕೊಡಗಿನ ಸಮಸ್ಯೆಗಳನ್ನು ಒಳಗೊಂಡ ವೈಜ್ಞಾನಿಕ ವಿಶ್ಲೇಷಣೆಯ ಯಾವುದೇ ಪಕ್ಷ, ಸಂಘಟನೆ ಪರವಾಗಿರದ ತಜ್ಞರ ರಿಸರ್ಚ್ ಆಧಾರದಲ್ಲಿ ಸಹ್ಯಾದ್ರಿ ಬದುಕಿಗೆ ಪರ್ಯಾಯ ಆಂದೋಲನ ರೂಪಿಸುವ ಶಕ್ತಿಗಾಗಿ ಸವಿವರವಾದ ‘ಜಮ್ಮಾ ಭೂಮಿರ ಕಥೆ’ ಸಾಕ್ಷ್ಯಚಿತ್ರ ನಿರ್ಮಾಣದ ಕಾರ್ಯವನ್ನೂ ಹಮ್ಮಿಕೊಂಡಿದ್ದೇವೆ. ನಿಮ್ಮೆಲ್ಲರ ಕಿಂಚಿತ್ತು ಸಹಾಯ, ಉದಾರ ಸಹಾಯಹಸ್ತ ಮುಳುಗಿ ಹೋಗಿರುವ ನಮ್ಮದೇ ನಾಡಿನ ಜನರ ಬದುಕು ಕಟ್ಟುವಲ್ಲಿ ಸಹಕಾರಿಯಾಗುತ್ತದೆ. ದಯವಿಟ್ಟು ನಮ್ಮೊಂದಿಗೆ ಕೈ ಜೋಡಿಸಿ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Click to comment

Leave a Reply

Your email address will not be published. Required fields are marked *