`ಪುಷ್ಪ’ (Pushpa) ಬ್ಯೂಟಿ ಸಮಂತಾ (Samantha) ಈಗ ಶಾಕುಂತಲೆ ಆಗಿ ಅಬ್ಬರಿಸಲು ರೆಡಿಯಾಗಿದ್ದಾರೆ. ಮಯೋಸೈಟಿಸ್ ಕಾಯಿಲೆ ಜೊತೆ ಹೊರಾಡುತ್ತಲೇ ಸಿನಿಮಾ ಪ್ರಚಾರ ಕಾರ್ಯದಲ್ಲಿ ನಟಿ ಸಮಂತಾ ಭಾಗಿಯಾಗುತ್ತಿದ್ದಾರೆ. ತಾವು ಹೋದಲೆಲ್ಲ ಕಡೆ ಸಮಂತಾ ಜಪಮಾಲೆ (Japa Mala) ಹಿಡಿದು ಎಂಟ್ರಿ ಕೊಡ್ತಿದ್ದಾರೆ. ನಟಿಯ ಈ ನಡೆ ನೋಡಿ ಡಿವೋರ್ಸ್ ನಂತರ ಆಧ್ಯಾತ್ಮದತ್ತ ವಾಲಿದ್ರಾ ಅಂತಾ ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಇತ್ತೀಚೆಗಷ್ಟೇ ಸಮಂತಾ ನಟನೆಯ `ಶಾಕುಂತಲಂ’ (Shakuntalam) ಚಿತ್ರದ ಟ್ರೈಲರ್ ರಿಲೀಸ್ ಆಯ್ತು. ಟ್ರೈಲರ್ ಝಲಕ್‌ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೀಗಿರುವಾಗ ಈ ಚಿತ್ರದ ಇವೆಂಟ್‌ನಲ್ಲಿ ಸಮಂತಾ ಕೈಯಲ್ಲಿದ್ದ ಜಪಮಾಲೆ ಎಲ್ಲರ ಗಮನ ಸೆಳೆದಿತ್ತು. ಸಮಂತಾ ಮೈಕ್ ಹಿಡಿದು ವೇದಿಕೆಯಲ್ಲಿ ಮಾತನಾಡುವಾಗ ಕೂಡ ಮತ್ತೊಂದು ಕೈಯಲ್ಲಿ ಜಪಮಾಲೆ ಹಿಡಿದುಕೊಂಡಿದ್ದರು. ಹಾಗಾಗಿ ಸಹಜವಾಗಿಯೇ ಯಾಕೀ ಜಪಮಾಲೆ? ಸಮಂತಾ (Samantha) ಆಧ್ಯಾತ್ಮದತ್ತ ವಾಲುತ್ತಿದ್ದಾರಾ? ಡಿವೋರ್ಸ್ (Divorce) ಬಳಿಕ ಮಯೋಸೈಟಿಸ್ ಚಿಕಿತ್ಸೆಯ ಭಾಗವಾಗಿ ಈ ರೀತಿ ಮಾಲೆ ಹಿಡಿದುಕೊಂಡಿದ್ದಾರಾ? ಹೀಗೆ ಹಲವು ಪ್ರಶ್ನೆಗಳು ಅಭಿಮಾನಿಗಳನ್ನು ಕಾಡುತ್ತಿದೆ. ಇದನ್ನೂ ಓದಿ:ಎಷ್ಟೇ ಕಷ್ಟ ಬಂದರೂ ಸಿನಿಮಾ ಮೇಲಿನ ಪ್ರೀತಿ ಕಳೆದುಕೊಂಡಿಲ್ಲ: ಗಳಗಳನೇ ಅತ್ತ ಸಮಂತಾ
ಸಾಕಷ್ಟು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿರುವ ಸಮಂತಾ ಉತ್ತಮ ಆರೋಗ್ಯ, ಶಾಂತಿಗಾಗಿ ಪ್ರತಿ ದಿನ 10,0008 ಶ್ಲೋಕಗಳ ಜಪ ಮಾಡುತ್ತಿದ್ದಾರಂತೆ. ಇನ್ನೂ ಸ್ಯಾಮ್ ಕೆಲವು ವರ್ಷಗಳ ಹಿಂದೆಯೇ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದರು. ಇತ್ತೀಚೆಗೆ ಮಂತ್ರಗಳನ್ನು ಪಠಣ ಮಾಡುತ್ತಿದ್ದಾರೆ. ಹಾಗಾಗಿ ಹೋದಲ್ಲಿ ಬಂದಲ್ಲಿ ಅದನ್ನು ಕೊಂಡೊಯ್ಯುತ್ತಿದ್ದಾರೆ. ಅಪರೂಪದ ಕಾಯಿಲೆಯ ಬಗ್ಗೆ ತಿಳಿಯುತ್ತಿದ್ದಂತೆ ಸಮಂತಾ ಕುಗ್ಗಿ ಹೋಗಿದ್ದರು. ಆದರೆ ಅಷ್ಟೇ ಬಲವಾದ ಆತ್ಮವಿಶ್ವಾಸದೊಂದಿಗೆ ತನ್ನ ಸಮಸ್ಯೆಯನ್ನು ಎದುರಿಸಲು ಹೋರಾಡುತ್ತಿದ್ದಾರೆ.
ಇನ್ನೂ ಈ ಕಾರ್ಯಕ್ರಮದಲ್ಲಿ ನಟಿ ಮಾತನಾಡುವಾಗ, ಎಷ್ಟೇ ಕಷ್ಟ ಬಂದರೂ ಸಿನಿಮಾ ಮೇಲಿನ ಪ್ರೀತಿ ಕಳೆದುಕೊಂಡಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ. ಈಗ ಸಮಂತಾ ನಡೆ ಮತ್ತು ನುಡಿಗೆ ಅಭಿಮಾನಿಗಳಿಗೆ ಹಲವು ಪ್ರಶ್ನೆಗಳು ಕಾಡುತ್ತಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k