ಇತ್ತೀಚಿನ ದಿನಗಳಲ್ಲಿ ಫ್ಯಾಷನ್ (Fashion) ಎಂಬ ಪದ ಎಲ್ಲರ ಬಾಯಲ್ಲಿ ಕೇಳಿರುತ್ತೀರಿ. ಯಾರಾದರೂ ಹೊಸ ಶೈಲಿಯ ಮಾಡರ್ನ್ ಡ್ರೆಸ್ ಧರಿಸಿದರೆ ಸಾಕು ಅದನ್ನು ಈಗಿನ ಫ್ಯಾಷನ್ ಎನ್ನುತ್ತಾರೆ. ಹಾಗಿದ್ರೆ ಫ್ಯಾಷನ್ ಬಗ್ಗೆ, ಫ್ಯಾಷನ್‌ನಲ್ಲಿರುವ ಕೆಲವು ವಿವಿಧ ಶೈಲಿಗಳ ಬಗೆಗಿನ ಮಾಹಿತಿಯನ್ನು ತಿಳಿದುಕೊಂಡರೆ ಒಳ್ಳೆಯದು ಅಲ್ವಾ? ಯಾವ ಶೈಲಿಯ ಡ್ರೆಸ್‌ಗಳನ್ನು ಯಾವ ಸಂದರ್ಭಗಳಲ್ಲಿ ಬಳಸುತ್ತಾರೆ ಎಂಬುದರ ಕುರಿತು ಸಣ್ಣ ಮಾಹಿತಿ ಇಲ್ಲಿದೆ.
ಫ್ಯಾಷನ್ ಎಂಬುದು ಹರಿವ ನೀರಿನಂತೆ. ದಿನದಿಂದ ದಿನಕ್ಕೆ ಹೊಸಹೊಸ ರೂಪವನ್ನು ಪಡೆದುಕೊಂಡು ಜನರನ್ನು ಆಕರ್ಷಿಸುವುದು ಮಾತ್ರವಲ್ಲದೇ ಮುಂದೆ ಸಾಗುತ್ತಲೇ ಇರುತ್ತದೆ. ಫ್ಯಾಷನ್ ಎಂದಾಕ್ಷಣ ನೆನಪಾಗುವುದೇ ವಿವಿಧ ಡಿಸೈನ್‌ಗಳ ಬಟ್ಟೆಗಳು ಮತ್ತು ಅವುಗಳನ್ನು ವಿನ್ಯಾಸಗೊಳಿಸುವ ಫ್ಯಾಷನ್ ಡಿಸೈನರ್‌ಗಳು. ಇವರು ತಯಾರಿಸುವ ಹೊಸ ರೀತಿಯ ಉಡುಪುಗಳು ಜನರನ್ನು ಕ್ಷಣಮಾತ್ರದಲ್ಲಿ ಅದರತ್ತ ಸೆಳೆಯುವಂತೆ ಮಾಡುತ್ತದೆ. ಕೆಲವೊಮ್ಮೆ ಇವರು ಹಳೆಯ ಶೈಲಿಗೆ ಹೊಸ ಟಚ್ ಕೊಟ್ಟು ಬಟ್ಟೆಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಾರೆ. ಉದಾಹರಣೆಗೆ, 1960ರ ದಶಕದ ಶೈಲಿಯನ್ನು 2000ರ ದಶಕದಲ್ಲಿ ಪರಿಚಯಿಸಲಾಯಿತು. ಅದು ಹಳೆಯದಾಗಿದ್ದರೂ, ಕೆಲವು ಚಲನಚಿತ್ರ ತಾರೆಯರು ಅಥವಾ ಫ್ಯಾಷನ್ ಮಾಡೆಲ್‌ಗಳು ಅಥವಾ ಪ್ರಸಿದ್ಧ ವ್ಯಕ್ತಿಗಳು ಅದನ್ನು ಧರಿಸಿದರೆ ಅದು ಫ್ಯಾಷನ್ ಆಗುತ್ತದೆ. ಅಂತಹ ಹಳೆಯ-ಶೈಲಿಯ ವಿನ್ಯಾಸವು ಮತ್ತೆ ಜನಪ್ರಿಯವಾಗಿದೆ. ಇದನ್ನೂ ಓದಿ: ಹುಡುಗಿಯರ ಮೈಕಾಂತಿ ಹೆಚ್ಚಿಸುವ ಸೀರೆಗೊಂದು ಸಿಂಗಾರ ಬೇಡವೇ?
Advertisement
Advertisement
ಫ್ಯಾಷನ್ ಶೈಲಿಯ ವಿಧಗಳು:
ಫ್ಯಾಷನ್‌ನಲ್ಲಿ ಅನೇಕ ಬಗೆಯ ಶೈಲಿಗಳಿವೆ. ಕೆಲವು ಜನಪ್ರಿಯ ಫ್ಯಾಷನ್ ಶೈಲಿಗಳ (Types) ಬಗ್ಗೆ ಮಾಹಿತಿ ತಿಳಿದುಕೊಳ್ಳಿ.
Advertisement
ಕ್ಲಾಸಿಕ್ ಶೈಲಿ (Classic Style):
ಕ್ಲಾಸಿಕ್ ಶೈಲಿ ಸಾಂಪ್ರದಾಯಿಕ ಶೈಲಿಯಾಗಿದೆ. ಕ್ಲಾಸಿಕ್ ಶೈಲಿಯು ಹೆಚ್ಚಿನ ಬದಲಾವಣೆಗಳನ್ನು ಒಳಗೊಳ್ಳದೇ ಕಡಿಮೆ ಬದಲಾವಣೆಗಳನ್ನು ಹೊಂದಿರುತ್ತದೆ. ಈ ಶೈಲಿಯನ್ನು ಅತಿಹೆಚ್ಚು ಜನರು ಇಷ್ಟಪಡುತ್ತಾರೆ. ನಿರ್ದಿಷ್ಟವಾಗಿ ಹೇಳುವುದಾದರೆ, ಮಹಿಳೆಯರು ಮತ್ತು ಪುರುಷರು ತಮ್ಮ ಆಫೀಸ್‌ಗೆ ಅಥವಾ ಯಾವುದಾದರೂ ಮೀಟಿಂಗ್ ಹೋಗುವಾಗ ಈ ರೀತಿಯಾದ ಉಡುಪನ್ನು ಧರಿಸಲು ಬಯಸುತ್ತಾರೆ. ಕ್ಲಾಸಿಕ್ ಶೈಲಿಯ ಬಟ್ಟೆಗಳು ಪ್ಯಾಂಟ್‌ಗಳು, ಶರ್ಟ್‌ಗಳು, ಬ್ಲೇಜರ್‌ಗಳು ಅಥವಾ ಸೂಟ್‌ಗಳನ್ನು ಒಳಗೊಂಡಿರುತ್ತದೆ. ಇನ್ನು ಮಹಿಳೆಯರ ಬಟ್ಟೆಗಳನ್ನು ನೋಡುವುದಾದರೆ ಪ್ಲೇನ್ ಸೂಟ್ ಅಥವಾ ಸೀರೆಗಳನ್ನು ಧರಿಸಲು ಹೆಚ್ಚಿನ ಆದ್ಯತೆ ನೀಡುತ್ತಾರೆ. ಇದನ್ನೂ ಓದಿ: ಹಳೆಯ ಆಭರಣಗಳಿಗೆ ಹೊಸ ಹುರುಪು – ಟ್ರೆಂಡಿಯಾಗಿ ಧರಿಸುವ ಬೆಳ್ಳಿ ಒಡವೆಗಳ ಬಗ್ಗೆ ಇಲ್ಲಿದೆ ಸಿಂಪಲ್ ಟಿಪ್ಸ್
Advertisement
ಫಾರ್ಮಲ್ ಶೈಲಿ (Formal Style):
ಇದು ಒಂದು ಅಧಿಕೃತ ಉಡುಗೆಯಾಗಿದ್ದು, ವಿವಿಧ ಕೆಲಸದ ಸ್ಥಳಗಳಲ್ಲಿ ಜನರು ಈ ರೀತಿಯಾದ ಬಟ್ಟೆಗಳನ್ನು ಧರಿಸಲು ಬಯಸುತ್ತಾರೆ. ಉದಾಹರಣೆಗೆ, ಶಾಲಾ ಉಡುಗೆ, ಕಚೇರಿ ಉಡುಗೆ ಮತ್ತು ಸಮವಸ್ತ್ರಗಳು. ಫಾರ್ಮಲ್ ಉಡುಪುಗಳು ಬಣ್ಣದ ಆಯ್ಕೆಗಳ ವಿಷಯದಲ್ಲಿ ಬಹಳ ಸೀಮಿತ ಆಯ್ಕೆಗಳನ್ನು ಹೊಂದಿವೆ. ಅಂತಹ ಉಡುಪುಗಳು ಬಹು-ಬಣ್ಣ ಅಥವಾ ಮುದ್ರಣ ವಿನ್ಯಾಸಗಳಲ್ಲಿ ಲಭ್ಯವಾಗುವುದಿಲ್ಲ. ವಿವಿಧ ಶಾಲೆಗಳು ವಿಭಿನ್ನ ಡ್ರೆಸ್ ಕೋಡ್‌ಗಳನ್ನು ಹೊಂದಿವೆ. ಅದೇ ರೀತಿ ಅನೇಕ ಕಚೇರಿಗಳು ತನ್ನದೇ ಆದ ಡ್ರೆಸ್ ಕೋಡ್‌ಗಳನ್ನು ಹೊಂದಿವೆ. ಆದ್ದರಿಂದ ಕ್ಲಾಸಿಕ್ ಬಟ್ಟೆಯನ್ನು ಧರಿಸುವುದು ಒಂದು ಆಯ್ಕೆಯಾದರೇ ಫಾರ್ಮಲ್ ಬಟ್ಟೆಗಳನ್ನು ಧರಿಸುವುದು ಕಡ್ಡಾಯವಾಗಿರುತ್ತದೆ. ಇದನ್ನೂ ಓದಿ: ಫ್ಯಾಶನ್ ಅಂತಾ ಕಿವಿ ಚುಚ್ಚಿಸಿಕೊಳ್ಳುವವರಿಗೆ ಅದರ ಪ್ರಯೋಜನ ತಿಳಿದಿದ್ಯಾ?
ವಿಂಟೇಜ್ ಶೈಲಿ (Vintage Style):
ವಿಂಟೇಜ್ ಫ್ಯಾಷನ್ 50 ವರ್ಷ ಅಥವಾ ಅದಕ್ಕಿಂತ ಹಳೆಯ ಬಟ್ಟೆಗಳನ್ನು ಸೂಚಿಸುತ್ತದೆ. ಕೆಲವರು ಇತ್ತೀಚಿನ ಡ್ರೆಸ್ ಸ್ಟೈಲ್‌ಗಳನ್ನು ಅನುಸರಿಸುವುದಿಲ್ಲ. ನಮ್ಮ ಹಿರಿಯರು ಇತ್ತೀಚಿನ ಬಟ್ಟೆಗಳನ್ನು ಧರಿಸಲು ಇಚ್ಛಿಸುವುದಿಲ್ಲ. ಬದಲಿಗೆ ತಮ್ಮ ಹಳೆಯ ವಯಸ್ಸಿನ ಫ್ಯಾಷನ್‌ನೊಂದಿಗೆ ಉಳಿಯಲು ಬಯಸುತ್ತಾರೆ. ಉದಾಹರಣೆಗೆ, ಜೋಲಾಡುವ ಪ್ಯಾಂಟ್, ದೊಡ್ಡ ಬಣ್ಣದ ಶರ್ಟ್‌ಗಳು ಉದ್ದನೆಯ ಫ್ರಾಕ್‌ಗಳು ಇತ್ಯಾದಿಗಳು ವಿಂಟೇಜ್ ಶೈಲಿಯಾಗಿದೆ. ಕೆಲವೊಮ್ಮೆ, ಇದನ್ನು ‘ರೆಟ್ರೊ ಶೈಲಿ ‘ ಎಂದೂ ಕರೆಯಲಾಗುತ್ತದೆ. ಇದನ್ನೂ ಓದಿ: ಕ್ಯೂಟ್ ಆಗಿ ಕಾಣಿಸಲು ಬಳಸಿ ಈ ಹೇರ್ ಆ್ಯಕ್ಸಸರೀಸ್
ಎಥ್ನಿಕ್ ಶೈಲಿ (Ethnic Style):
ಈ ಶೈಲಿಯು ಒಂದು ವಿಶಿಷ್ಟವಾದ ಉಡುಗೆಯಾಗಿದೆ. ಪ್ರತಿಯೊಂದು ಸ್ಥಳ, ರಾಜ್ಯ ಅಥವಾ ದೇಶ ತನ್ನದೇ ಆದ ಸಂಸ್ಕೃತಿಯನ್ನು ಹೊಂದಿರುತ್ತದೆ. ಆ ನಿರ್ದಿಷ್ಟ ಪ್ರದೇಶದ ಜನರು ನಿರ್ದಿಷ್ಟ ಶೈಲಿಯ ಉಡುಪುಗಳನ್ನು ಧರಿಸುತ್ತಾರೆ. ಕರ್ನಾಟಕ ರಾಜ್ಯವನ್ನು ಉದಾಹರಣೆಯಾಗಿ ತೆಗೆದುಕೊಳ್ಳುವುದಾದರೆ ಪುರುಷರು ಪಂಚೆ ಮತ್ತು ಶರ್ಟ್, ಮಹಿಳೆಯರು ಸೀರೆ ಅಥವಾ ಚೂಡಿದಾರ್ ಹೆಚ್ಚು ಧರಿಸುತ್ತಾರೆ. ಅದೇ ರೀತಿ ಆಯಾಯ ಸ್ಥಳಗಳಲ್ಲಿ ಆಯಾಯ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಅನುಸರಿಸುತ್ತಾರೆ. ಇದನ್ನೂ ಓದಿ: ಚುಮು ಚುಮು ಚಳಿಯಲ್ಲೂ ಬೆಚ್ಚನೆಯ ಅನುಭವ ನೀಡುವ ಬಗೆಬಗೆಯ ಸ್ವೆಟರ್
ಕ್ಯಾಶುವಲ್ ಶೈಲಿ (Casual Style):
ದೀರ್ಘಕಾಲದವರೆಗೆ ಧರಿಸಲು ಆರಾಮದಾಯಕವಾಗಿರುವ ಬಟ್ಟೆಯನ್ನು ಧರಿಸಿದರೆ ಅದನ್ನು ಕ್ಯಾಶುವಲ್ ಎಂದು ಕರೆಯಲಾಗುತ್ತದೆ. ಏಕೆಂದರೆ, ಇದು ಯಾವುದೇ ನಿರ್ದಿಷ್ಟ ವಿನ್ಯಾಸ ಅಥವಾ ಬಣ್ಣವನ್ನು ಹೊಂದಿರುವುದಿಲ್ಲ. ಆದ್ದರಿಂದ, ಇದನ್ನು ಕಚೇರಿಯಲ್ಲಿ ಧರಿಸಲಾಗುವುದಿಲ್ಲ, ಆದರೆ ಜನರು ಮನೆಯಲ್ಲಿರುವಾಗ, ಶಾಪಿಂಗ್‌ಗೆ ಹೋಗುವಾಗ ಇತ್ಯಾದಿ ಕೆಲಸಗಳನ್ನು ಮಾಡುವಾಗ ಈ ರೀತಿಯಾದ ಬಟ್ಟೆಗಳನ್ನು ಧರಿಸಲು ಬಯಸುತ್ತಾರೆ. ಉದಾಹರಣೆಗೆ ಸ್ನೇಹಿತರನ್ನು ಭೇಟಿಯಾಗುವುದು, ಹೊರಾಂಗಣ ಆಟ ಆಡುವುದು ಇತ್ಯಾದಿ. ಈ ಶೈಲಿಯ ಜನಪ್ರಿಯ ಉಡುಪುಗಳು ಎಂದರೆ ಜೀನ್ಸ್, ಟೀ ಶರ್ಟ್‌ಗಳು, ಲೋವರ್‌ಗಳು, ಟ್ರ್ಯಾಕ್ ಸೂಟ್‌ಗಳು, ಜೋಗರ್‌ಗಳು ಇತ್ಯಾದಿ. ಇದನ್ನೂ ಓದಿ: ಫ್ರೆಶ್ ಲುಕ್ ನೀಡುವ ವೆಡ್ಡಿಂಗ್ ಸೂಟ್ಸ್ – ಏನಿದೆ ವಿಶೇಷ?
ಸ್ಪೋರ್ಟಿ ಶೈಲಿ (Sporty Style):
ಸೈಕ್ಲಿಂಗ್ ಮಾಡುವಾಗ, ಹೊರಾಂಗಣ ಆಟಗಳನ್ನು ಆಡುವಾಗ ಅಥವಾ ವ್ಯಾಯಾಮಗಳನ್ನು ಮಾಡುವಾಗ ಆರಾಮದಾಯಕ ಮತ್ತು ಧರಿಸಲು ಸುಲಭವಾದ ಬಟ್ಟೆಗಳನ್ನು ಬಯಸುತ್ತಾರೆ. ಆದ್ದರಿಂದ ಈ ಉದ್ದೇಶಕ್ಕಾಗಿಯೇ ನಿರ್ದಿಷ್ಟ ಶೈಲಿಯನ್ನು ವಿನ್ಯಾಸಗೊಳಿಸಲಾಗಿದೆ. ಇದನ್ನು ‘ಸ್ಪೋರ್ಟಿ ಶೈಲಿ’ ಎಂದು ಕರೆಯಲಾಗುತ್ತದೆ. ಉದಾಹರಣೆಗೆ, ಟ್ರ‍್ಯಾಕ್ ಸೂಟ್‌ಗಳು, ಜರ್ಸಿಗಳು, ಕ್ರೀಡಾ ಬೂಟುಗಳು, ಇತ್ಯಾದಿ. ಇದನ್ನೂ ಓದಿ: ನಿಮ್ಮ ಫೇಸ್‌ಕಟ್‌ಗೆ ಸರಿಯಾದ ಹೇರ್‌ಸ್ಟೈಲ್ ಇರಲಿ
ಬೋಹೀಮಿಯನ್ ಶೈಲಿ (Bohemian style):
ಬೋಹೀಮಿಯನ್ ಶೈಲಿಯು ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಉಡುಪುಗಳನ್ನು ವಿನ್ಯಾಸಗೊಳಿಸುವ ವಿಷಯದಲ್ಲಿ ಮಾತ್ರವಲ್ಲದೆ ಉಡುಪುಗಳನ್ನು ತಯಾರಿಸಲು ವಸ್ತುಗಳನ್ನು ಬಳಸುವ ವಿಷಯದಲ್ಲಿಯೂ ತನ್ನದೇ ಆದ ಸಾಂಪ್ರದಾಯಿಕ ಶೈಲಿಯನ್ನು ಹೊಂದಿದೆ. ಈ ಶೈಲಿಯ ಬಟ್ಟೆಗಳನ್ನು ಧರಿಸಿದ ಸಂದರ್ಭದಲ್ಲಿ ಅದಕ್ಕೆ ಮ್ಯಾಚ್ ಆಗುವಂತಹ ಸಮುದ್ರ ಚಿಪ್ಪುಗಳು, ಎಲೆಗಳು, ಗರಿಗಳು ಇತ್ಯಾದಿಗಳನ್ನು ಬಳಸಿ ತಯಾರಿಸಿದಂತಹ ಆಭರಣಗಳನ್ನು ಧರಿಸುತ್ತಾರೆ. ಇದು ಹಿಪ್ಪಿ ಸಂಸ್ಕೃತಿಯ ಒಂದು ಭಾಗವಾಗಿದೆ. ಇದನ್ನೂ ಓದಿ: ಇಂಡಿಯನ್ ಸ್ಕಿನ್ ಟೋನ್‌ಗೆ ಈ ಬಣ್ಣದ ಲಿಪ್‌ಸ್ಟಿಕ್‌ಗಳು ಬೆಸ್ಟ್
ಸ್ಟ್ರೀಟ್ ಶೈಲಿ (Street Style):
ಇದು ವಿಲಕ್ಷಣವಾಗಿ ತೋರುತ್ತದೆಯಾದರೂ, ಇದು ಫ್ರಾನ್ಸ್ನ ಪ್ಯಾರಿಸ್‌ನ ಬೀದಿಗಳಲ್ಲಿ ಜನಿಸಿದ ಸಾಕಷ್ಟು ಟ್ರೆಂಡಿ ಶೈಲಿಯಾಗಿದೆ. ನ್ಯೂಯಾರ್ಕ್ ನಗರ, ಯುನೈಟೆಡ್ ಸ್ಟೇಟ್ಸ್, ಟೋಕಿಯೋ, ಜಪಾನ್ ಮತ್ತು ಮುಂಬೈ, ಭಾರತದಲ್ಲೂ ಈ ಶೈಲಿಯ ಬಟ್ಟೆಗಳನ್ನು ಧರಿಸುತ್ತಾರೆ. ಯುವಕರು ಸ್ಟ್ರೀಟ್‌ವೇರ್ ಅನ್ನು ಟ್ರೆಂಡಿ ಮತ್ತು ಫ್ಯಾಶನ್ ಆಗಿ ಪರಿವರ್ತಿಸಿದ್ದು, ಇದು ಯಾವುದೇ ಡ್ರೆಸ್‌ಕೋಡ್ ಅನ್ನು ಹೊಂದಿಲ್ಲ. ಉದಾಹರಣೆಗೆ, ಟೀ ಶರ್ಟ್ ಮತ್ತು ಜೀನ್ಸ್, ಸ್ಕರ್ಟ್ ಮತ್ತು ಟಾಪ್ ಇತ್ಯಾದಿ. ಇದನ್ನೂ ಓದಿ: ಬೇಸಿಗೆಯಲ್ಲೂ ಕಂಫರ್ಟ್ ಆಗಿರಲು ಫ್ಯಾಷನ್ ಟಿಪ್ಸ್
ಪಂಕ್ ಶೈಲಿ (Punk Style):
ಇದು ವಿಶಿಷ್ಟವಾದ ರಾಕ್ ಬ್ಯಾಂಡ್ ಪ್ಲೇಯರ್ ಶೈಲಿಯಾಗಿದೆ. ಉದಾಹರಣೆಗೆ ಚರ್ಮದ ಜಾಕೆಟ್‌ಗಳನ್ನು ಧರಿಸುವುದು, ಬಣ್ಣದ ಕೇಶವಿನ್ಯಾಸ, ದೇಹ ಚುಚ್ಚುವಿಕೆಗಳು ಇತ್ಯಾದಿಗಳು ಈ ಶೈಲಿಯಲ್ಲಿ ಒಳಗೊಂಡಿರುತ್ತವೆ. ವಾಸ್ತವವಾಗಿ, ಇದು ಬಹು-ಸಾಂಸ್ಕೃತಿಕ ಶೈಲಿಗಳನ್ನು ಪ್ರತಿನಿಧಿಸುತ್ತದೆ. ಇದನ್ನೂ ಓದಿ: ಉಗುರುಗಳನ್ನು ಆಕರ್ಷಕವಾಗಿಸಲು ಸುಲಭದ ನೈಲ್ ಆರ್ಟ್‌ಗಳು
ಗೋಥಿಕ್ ಶೈಲಿ (Gothic Style):
ಇದು ಡಾರ್ಕ್, ನಿಗೂಢ ಮತ್ತು ಸ್ಮೋಕಿ ಶೈಲಿಯಾಗಿದೆ. ಗೋಥಿಕ್ ಶೈಲಿಯಲ್ಲಿ ಜನರು ಸಾಮಾನ್ಯವಾಗಿ ಗಾಢ ಬಣ್ಣದ ಉಡುಪುಗಳನ್ನು ಧರಿಸುತ್ತಾರೆ. ಕೆಲವು ಪಾರ್ಟಿಗಳಲ್ಲಿ, ಯುವಕರು – ಯುವತಿಯರು ಇದನ್ನು ಧರಿಸಲು ಬಯಸುತ್ತಾರೆ. ಇದನ್ನೂ ಓದಿ: ನಿಮ್ಮ ಎವ್ರಿಡೇ ಮೇಕಪ್ ಕಿಟ್‌ನಲ್ಲಿರಲಿ ಈ ವಸ್ತುಗಳು
ಇವು ಸಾಮಾನ್ಯವಾಗಿ ಜನರು ಧರಿಸುವ ಮತ್ತು ಎಲ್ಲರೂ ತಿಳಿದಿರುವ ಫ್ಯಾಷನ್ ಶೈಲಿಗಳಾಗಿವೆ. ಇದೇ ರೀತಿ ಇನ್ನೂ ಹತ್ತು ಹಲವು ರೀತಿಯ ಶೈಲಿಗಳಿವೆ. ಒಬ್ಬೊಬ್ಬರು ಒಂದೊಂದು ರೀತಿಯ ಬಟ್ಟೆಗಳನ್ನು ಧರಿಸಲು ಇಚ್ಛಿಸುತ್ತಾರೆ. ನೀವು ನಿಮ್ಮ ಟೇಸ್ಟ್‌ಗೆ ತಕ್ಕಂತೆ ಅಥವಾ ಸಂದರ್ಭಗಳಿಗೆ ಅನುಗುಣವಾಗಿ ಬಟ್ಟೆಗಳನ್ನು ಧರಿಸಿದರೆ ಒಳ್ಳೆಯದು. ಎಲ್ಲಾ ಬಟ್ಟೆಗಳು ಎಲ್ಲಾ ಸಂದರ್ಭಗಳಿಗೆ ಮ್ಯಾಚ್ ಆಗುವುದಿಲ್ಲ. ಆದ್ದರಿಂದ ಯಾವ ಸಂದರ್ಭಕ್ಕೆ ಯಾವ ಬಟ್ಟೆ ಹಾಕಿದರೆ ಸೂಕ್ತ ಎಂಬುದನ್ನು ತಿಳಿದುಕೊಂಡು ಅದಕ್ಕೆ ಅನುಸಾರವಾಗಿ ಬಟ್ಟೆಗಳನ್ನು ಧರಿಸಿ. ಇದನ್ನೂ ಓದಿ: ನಿಮ್ಮ ಬಜೆಟ್‌ನಲ್ಲಿ ಚಂದಕಾಣಿಸುವ ಟಿಪ್ಸ್
Web Stories