ಫ್ಯಾಶನ್ ಎಂಬ ಮಾತ್ರಕ್ಕೆ ಅಲ್ಲ, ಕಿವಿ ಚುಚ್ಚಿಸಿಕೊಳ್ಳುವುದರಿಂದ ಆರೋಗ್ಯದ ಲಾಭವೂ ಇದೆ ಎಂಬುದು ಸತ್ಯ ಸಂಗತಿ. ಕಿವಿ ಚುಚ್ಚಿಸಿಕೊಳ್ಳುವುದು ಪ್ರಾಚೀನ ಭಾರತೀಯ ಪದ್ಧತಿಯಾಗಿದ್ದು, ಇದನ್ನು ಕರ್ಣವೇದ ಎಂತಲೂ ಕರೆಯುತ್ತಾರೆ.
ಕಿವಿಯ ಬೇರೆ ಬೇರೆ ಮೂಲೆಗಳಲ್ಲಿ ಚುಚ್ಚಿಸಿಕೊಳ್ಳುವುದರಿಂದ ಅದರದೇ ಆದ ಪ್ರಯೋಜನಗಳಿವೆ ಎಂಬುದು ಹಲವರಿಗೆ ತಿಳಿದಿರಲಿಕ್ಕಿಲ್ಲ. ಇವು ಕಿವಿಯ ಅಂದವನ್ನು ಹೆಚ್ಚಿಸುವುದರೊಂದಿಗೆ ಆರೋಗ್ಯವನ್ನೂ ವೃದ್ಧಿಸುತ್ತದೆ. ಕಿವಿಯ ಪ್ರತಿಯೊಂದು ಮೂಲೆ ದೇಹದ ಇತರ ಭಾಗಗಳೊಂದಿಗೆ ಸಂಪರ್ಕ ಹೊಂದಿರುತ್ತದೆ ಎಂಬುದೇ ಇದಕ್ಕೆ ಸಾಕ್ಷಿ. ಕಿವಿ ಚುಚ್ಚುವಿಕೆಯ ಪ್ರಯೋಜನವೇನೆಂಬುದನ್ನು ನಾವಿಲ್ಲಿ ನೋಡೋಣ.
Advertisement
Advertisement
ಡೈತ್:
ಕಿವಿಯ ಚಿಕ್ಕ ಮಡಿಕೆಯೇ ಡೈತ್. ಇತ್ತೀಚೆಗೆ ಜನರು ಕಿವಿಯ ಈ ಭಾಗದಲ್ಲಿ ಚುಚ್ಚಿಸಿಕೊಳ್ಳುವುದು ಸಾಮಾನ್ಯವಾಗಿದ್ದು, ಇದು ಅತ್ಯಂತ ವಿಭಿನ್ನವಾಗಿಯೂ ಕಾಣಿಸುತ್ತದೆ. ಹೆಚ್ಚಿನ ಜನರು ಮೈಗ್ರೇನ್ ಸಮಸ್ಯೆಯನ್ನು ಎದುರಿಸುತ್ತಿದ್ದು, ಡೈತ್ ಚುಚ್ಚುವಿಕೆ ಇದಕ್ಕೆ ಪರಿಹಾರವಾಗಿದೆ ಎಂಬುದು ಸಾಬೀತಾಗಿದೆ. ಇದನ್ನೂ ಓದಿ: ಹಳೆಯ ಆಭರಣಗಳಿಗೆ ಹೊಸ ಹುರುಪು – ಟ್ರೆಂಡಿಯಾಗಿ ಧರಿಸುವ ಬೆಳ್ಳಿ ಒಡವೆಗಳ ಬಗ್ಗೆ ಇಲ್ಲಿದೆ ಸಿಂಪಲ್ ಟಿಪ್ಸ್
Advertisement
Advertisement
ಶಂಖ:
ಇದು ಒಂದು ಬಗೆಯ ಕಿವಿ ಚುಚ್ಚಿಸುವಿಕೆಯಾಗಿದ್ದು, ಇದು ಆಕರ್ಷಕ ಚುಚ್ಚಿಸುವಿಕೆಗಳಲ್ಲಿ ಒಂದು. ಈ ಭಾಗದ ಚುಚ್ಚಿಸುವಿಕೆ ದೇಹದ ಸ್ನಾಯುವಿನ ವಿಶ್ರಾಂತಿಗೆ ಸಹಾಯ ಮಾಡುತ್ತದೆ. ಮುಖ್ಯವಾಗಿ ಮಾದಕ ವ್ಯಸನಿಗಳು ಈ ರೀತಿಯಲ್ಲಿ ಕಿವಿಯನ್ನು ಚುಚ್ಚಿಸಿಕೊಂಡರೆ ಚಟವನ್ನು ಬಿಡಿಸಲು ಇದು ಸಹಾಯ ಮಾಡುತ್ತದೆ ಎಂದೂ ಹೇಳಲಾಗುತ್ತದೆ.
ಫಾರ್ವರ್ಡ್ ಹೆಲಿಕ್ಸ್:
ಕಿವಿ ಹಾಗೂ ಮುಖವನ್ನು ಒಂದುಗೂಡಿಸುವ ಕಿವಿಯ ಮುಂದಿನ ಚಿಕ್ಕ ಭಾಗವೇ ಮುಂಭಾಗದ ಹೆಲಿಕ್ಸ್. ಇದು ಸ್ನಾಯು ಸೆಳೆತವನ್ನು ನಿವಾರಿಸಲು, ರಕ್ತ ಪರಿಚಲನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮುಖದ ಮೇಲಿನ ಸುಕ್ಕು ಗೋಚರವಾಗುವುದನ್ನು ಕಡಿಮೆ ಮಾಡಲೂ ಇದನ್ನು ಚುಚ್ಚಿಸಲಾಗುತ್ತದೆ.
ಹೆಲಿಕ್ಸ್:
ಕಿವಿ ಮೇಲಿನ ಹೊರಭಾಗದ ಮಡಿಕೆಯೇ ಹೆಲಿಕ್ಸ್. ಇದು ಅತ್ಯಂತ ಪ್ರಸಿದ್ಧ ಹಾಗೂ ಸಾಂಪ್ರದಾಯಿಕ ಚುಚ್ಚಿಸುವಿಕೆಗಳಲ್ಲೂ ಒಂದಾಗಿದೆ. ಇದು ಗಂಟಲು ನೋವು ಹಾಗೂ ಹಲವು ಅಲರ್ಜಿಗಳನ್ನು ನಿವಾರಿಸುತ್ತದೆ. ನಿದ್ರಾಹೀನತೆಗೂ ಇದು ಪರಿಹಾರವಾಗಿದೆ. ಇದನ್ನೂ ಓದಿ: ಕ್ಯೂಟ್ ಆಗಿ ಕಾಣಿಸಲು ಬಳಸಿ ಈ ಹೇರ್ ಆ್ಯಕ್ಸಸರೀಸ್
ಲೋಬ್:
ಇದು ಸಾಮಾನ್ಯ ಹಾಗೂ ಮಕ್ಕಳಿಗೆ ಮೊದಲ ಬಾರಿ ಚುಚ್ಚಿಸುವ ಕಿವಿಯ ಭಾಗವಾಗಿದೆ. ಈ ಭಾಗದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಚುಚ್ಚಿಸಿಕೊಳ್ಳುವುದು ಮೊದಲಿನಿಂದಲೂ ಫ್ಯಾಶನ್. ಲೋಬ್ ಭಾಗದ ಚುಚ್ಚಿಸುವಿಕೆ ದೃಷ್ಟಿಯನ್ನು ಸುಧಾರಿಸುತ್ತದೆ ಎನ್ನಲಾಗುತ್ತದೆ.