ತುಮಕೂರು: ಜಾತಿ ಮುಂದೆ ಕ್ರಿಶ್ಚಿಯನ್ ಅಂತ ಬರೆದಿರೋದು ಸರ್ಕಾರವೇ ಮತಾಂತರಕ್ಕೆ (Conversion) ಪ್ರೋತ್ಸಾಹ ನೀಡಿದಂತೆ ಎಂದು ಕಾಂಗ್ರೆಸ್ ಶಾಸಕ ಕೆ.ಎನ್ ರಾಜಣ್ಣ (KN Rajanna) ಮತ್ತೊಮ್ಮೆ ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ತುಮಕೂರಿನಲ್ಲಿ (Tumakuru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ (Caste) ಮುಂದೆ ಕ್ರಿಶ್ಚಿಯನ್ ಅಂತ ಬರೆಯುವುದನ್ನು ನಾನೂ ವಿರೋಧ ಮಾಡಿದ್ದೇನೆ. ಅದನ್ನು ಈಗ ಡಿಲೀಟ್ ಮಾಡಿದ್ದಾರೆ. ಸರ್ಕಾರ ಈ ರೀತಿ ಬರೆದು ಸಮೀಕ್ಷೆ ಮಾಡೋದ್ರಿಂದ ಮತಾಂತರಕ್ಕೆ ಪ್ರೋತ್ಸಾಹ ಮಾಡಿದಂತೆ ಎಂದು ಖಂಡಿಸಿದ್ದಾರೆ. ಇದನ್ನೂ ಓದಿ: ಬಾನು ಮುಷ್ತಾಕ್ ಮೇಲೆ ನಮಗೆ ಗೌರವ ಹೆಚ್ಚಾಗಿದೆ: ನಾರಾಯಣಸ್ವಾಮಿ

ಜೊತೆಗೆ ಮತಾಂತರಗೊಂಡವರು ಮೂಲ ಜಾತಿಯ ಮೀಸಲಾತಿ, ಸವಲತ್ತು ಪಡೀತಾರೆ. ಇದಕ್ಕೂ ಸರ್ಕಾರ ಅವಕಾಶ ಕೊಡಬಾರದು. ನಾನು ನಾಯಕ ಜಾತಿಯವನು ಕ್ರಿಶ್ಚಿಯನ್‌ಗೆ ಮತಾಂತರಗೊಂಡರೆ ನಾಯಕ ಜಾತಿಯ ಬೆನಿಫಿಟ್ ತಗೋಬಾರದು. ಸರ್ಕಾರ ಇದರ ಬಗ್ಗೆಯೂ ಗಮನ ಹರಿಸಬೇಕು ಎಂದು ರಾಜಣ್ಣ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ನಮ್ಮದು ಜಾತ್ಯಾತೀತ ಸರ್ಕಾರ ಆಗಿರೋದಕ್ಕೆ ಬಾನು ಮುಷ್ತಾಕ್‌ರಿಂದ ದಸರಾ ಉದ್ಘಾಟನೆ ಮಾಡಿಸಿರೋದು: ಪ್ರದೀಪ್ ಈಶ್ವರ್
ಮತಗಳ್ಳತನದ (Vote Chori) ತನಿಖೆ ವಿಚಾರದಲ್ಲಿ ಮಾತನಾಡಿದ ರಾಜಣ್ಣ, ಈಗ ಎಸ್‌ಐಟಿ ಮಾಡಿದ್ದಾರೆ. ಮೊದಲು ಒಂದು ಎಫ್‌ಐಆರ್ ರಿಜಿಸ್ಟ್ರಾರ್ ಮಾಡಿ ಆನ್ ಲೈನ್ 6-7 ಫಾರಂ ಕೊಟ್ಟಿರ್ತಾನೋ, ಯಾವ ಐಡಿಯಲ್ಲಿ ಬಂದಿದೆ ಅಂತ ಚೆಕ್ ಮಾಡಿ ಅವನ ಮೇಲೆ ಕೇಸ್ ಹಾಕ್ಬೇಕು. ಮಲ್ಲಿಕಾರ್ಜುನ್ ಎಂಬಾತ ನನ್ನದೇ ಹೆಸರಲ್ಲಿ 7 ವೋಟ್ ಡಿಲೀಟ್ ಮಾಡಿದ್ದಾರೆ ಅಂತಿದ್ದಾರೆ. ಅವನದ್ದೇ ಕಂಪ್ಲೆಂಟ್ ತಗೊಂಡು, ಬಾಟಂನಿಂದ ಹೋಗಬೇಕು. ಅವನ ಊರು ಯಾವುದು? ಯಾವ ಉದ್ದೇಶಕ್ಕೆ ಮಾಡಿದ್ದಾನೆ? ಎಲ್ಲವನ್ನು ವಿಚಾರಣೆ ಮಾಡಬೇಕು. ಏಕೆಂದ್ರೆ ಇದು ಮಿಸ್ ರೆಪ್ರೆಸೆಂಟೇಷನ್ ಅಂಡ್ ಕ್ರಿಮಿನಲ್ ಸಂಚು ಕಾನೂನು ಅಡಿಯಲ್ಲಿ ಕೇಸ್ ದಾಖಲು ಮಾಡಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಕ್ಕಳ ದಾಸೋಹ ಸಂಗ್ರಹಕ್ಕೆ ಕಾರು ಉಡುಗೊರೆ ನೀಡಿದ ನಟ ವಿನೋದ್ ರಾಜ್

