– ಒಂದೇ ದಿನ 1 ಲಕ್ಷ ಲಾಟರಿ ಟಿಕೆಟ್ ಸೋಲ್ಡ್ ಔಟ್
ಕಾರವಾರ/ಪಣಜಿ: ಗೌರಿ -ಗಣೇಶ ಹಬ್ಬ (Ganesha Festival) ಇನ್ನೇನು ಬಂದೇ ಬಿಟ್ಟಿತು. ಬೀದಿ ಬೀದಿಗಳಲ್ಲಿ ವಿವಿಧ ರಂಗಿನ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಯಾಗುತ್ತದೆ. ಹಲವು ಸಂಘ-ಸಂಸ್ಥೆಗಳು ಜನರನ್ನು ಸೆಳೆಯಲು ಹಬ್ಬದ ವಿಶೇಷವಾಗಿ ಲಾಟರಿ ಸಹ ಇಟ್ಟು ಹಬ್ಬ ಮುಗಿದ ನಂತರ ಡ್ರಾ ಮಾಡಿ ಬಹುಮಾನ ಘೋಷಿಸುತ್ತದೆ.
ಹೌದು. ಗೋವಾ ರಾಜ್ಯದ ಪಣಜಿಯ ಕೆಪೆಮ್ (Quepem))ನಲ್ಲಿ ಪ್ರತಿ ವರ್ಷ ಕೆಪೆಮ್ ಸಾರ್ವಜನಿಕ ಗಣೇಶೋತ್ಸವ ಉತ್ಸವ ಸಮಿತಿ ಗಣೇಶೋತ್ಸವ ಆಚರಿಸುತ್ತದೆ. ಈ ವೇಳೆ ಬರುವ ಭಕ್ತರಿಗೆ ಲಾಟರಿಯನ್ನು ಇಟ್ಟು ದೊಡ್ಡ ಮೊತ್ತದ ಬಹುಮಾನ ನೀಡುತ್ತದೆ. ಈ ಬಾರಿ 36 ನೇ ವಾರ್ಷಿಕ ಗಣೇಶೋತ್ಸವ ಆಚರಣೆಗೆ ಸಮಿತಿ ದೊಡ್ಡ ಮಟ್ಟದ ಲಾಟರಿ ಬಹುಮಾನವನ್ನು ಇಟ್ಟಿದೆ. 10 ಹೈ ಎಂಡ್ ಕಾರುಗಳು, 10 ಸ್ಕೂಟರ್ ಗಳು, ಜೊತೆಗೆ ಈ 20 ಬಂಪರ್ ಬಹುಮಾನ ಗೆಲ್ಲುವವರಿಗೆ 70 ಲಕ್ಷ ರೂಪಾಯಿಗೂ ಅಧಿಕ ನಗದು ಬಹುಮಾನ ಈ ಕೆಪೆಮ್ ಸಾರ್ವಜನಿಕ ಗಣೇಶೋತ್ಸವ ಮಂಡಳಿಯ ಲಾಟರಿಯಲ್ಲಿ ಘೋಷಣೆ ಮಾಡಿದೆ. ಇದನ್ನೂ ಓದಿ: ಜಾತಿ ಕಟ್ಟು ಪಾಡುಗಳನ್ನ ಮೀರಲು ಮಾನವೀಯತೆ, ವಿಚಾರವಂತಿಕೆಯ ದಾರಿ – ಮರ್ಯಾದಾ ಹತ್ಯೆಗೆ ಸಿಎಂ ಆತಂಕ
ಭಾನುವಾರ ಸಂಜೆಯಷ್ಟೇ ಲಾಟರಿ ಉದ್ಘಾಟನೆ ಮಾಡಲಾಗಿದ್ದು, ಸೋಮವಾರ ಎನ್ನುವಷ್ಟರಲ್ಲಿ ಸಾವಿರಾರು ಜನ ಮುಗಿಬಿದ್ದು ಖರೀದಿಗೆ ಮುಂದಾಗಿದ್ದಾರೆ. ಇನ್ನು ಕಾರವಾರದಿಂದ ಸಹ ಜನ ಖರೀದಿಗೆ ತೆರಳಿದ್ದು, ಖರೀದಿಸಲು ಬಂದ ಜನ ಇಡೀ ದಿನ ಕಿಲೋಮೀಟರ್ ಗಟ್ಟಲೇ ಸರತಿ ಸಾಲಿನಲ್ಲಿ ನಿಂತು ಖರೀದಿಸಿದ್ದು ಒಂದೇ ದಿನದಲ್ಲಿ 1 ಲಕ್ಷ ಲಾಟರಿ ಖರೀದಿಯಾಗಿದೆ. ಒಂದು ಲಾಟರಿಗೆ 300 ರೂಪಾಯಿ ದರವಿದ್ದು ಇದೀಗ ನಿಗದಿ ಲಾಟರಿ ಖರ್ಚಾಗಿದ್ದರೂ ಜನ ಟಿಕೆಟ್ ಕೊಳ್ಳಲು ಇಂದು ಸಹ ಸರತಿ ಸಾಲಿನಲ್ಲಿ ಸಮಿತಿ ಮುಂದೆ ನಿಂತಿದ್ದಾರೆ. ಜನರನ್ನು ನಿಯಂತ್ರಿಸಲು ಪೊಲೀಸರು ಮತ್ತು ಸಮಿತಿ ಸದಸ್ಯರು ಹರಸಾಹಸ ಪಡುವಂತಾಯಿತು. ಇನ್ನು ಒಂದು ಲಕ್ಷ ಲಾಟರಿ ಒಂದೇ ದಿನದಲ್ಲಿ ಖರ್ಚಾದ್ದರಿಂದ ಲಾಟರಿ ಮಾರಾಟವನ್ನು ನಿಲ್ಲಿಸಲಾಗಿದ್ದು, ರಾಜ್ಯ ಹೊರ ರಾಜ್ಯದಿಂದಲೂ ಆಗಿಮಿಸಿದ್ದ ಜನ ಲಾಟರಿ ಟಿಕೆಟ್ ಸಿಗದೆ ಹಿಂದಿರುಗಿದ್ದಾರೆ.
Web Stories