ಢಾಕಾ: ಬಾಂಗ್ಲಾದೇಶ (Bangladesh) ವಿರುದ್ಧದ 2ನೇ ಟೆಸ್ಟ್ (2nd Test) ಆರಂಭಕ್ಕೂ ಮುನ್ನ ಟೀಂ ಇಂಡಿಯಾ (Team India) ಹಂಗಾಮಿ ನಾಯಕ ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಗಾಯಗೊಂಡಿದ್ದಾರೆ.
Advertisement
ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದ ವೇಳೆ ರಾಹುಲ್ ಕೈಗೆ ಬಾಲ್ ತಗುಲಿ ಗಾಯಗೊಂಡಿದ್ದು, ಬಳಿಕ ವಿಶ್ರಾಂತಿ ಮೊರೆ ಹೋಗಿದ್ದಾರೆ. ನಾಳೆಯಿಂದ ಭಾರತ ಮತ್ತು ಬಾಂಗ್ಲಾ ನಡುವೆ ಎರಡನೇ ಮತ್ತು ಕೊನೆಯ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಈ ನಡುವೆ ಇಂದು ರಾಹುಲ್ ಗಾಯಗೊಂಡಿರುವುದು ಟೀಂ ಇಂಡಿಯಾಗೆ ಚಿಂತೆಯಾಗಿದೆ. ಇದನ್ನೂ ಓದಿ: ಫಿಫಾ ವಿಶ್ವಕಪ್ ತಬ್ಬಿಕೊಂಡು ಮಲಗಿದ ಮೆಸ್ಸಿ
Advertisement
Advertisement
ಈಗಾಗಲೇ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿದ ಟೀಂ ಇಂಡಿಯಾ 1-0 ಮುನ್ನಡೆ ಪಡೆದುಕೊಂಡಿದೆ. ಇದೀಗ 2ನೇ ಟೆಸ್ಟ್ ಪಂದ್ಯ ಗೆದ್ದು ಸರಣಿ ಗೆಲ್ಲುವ ತವಕದಲ್ಲಿದ್ದ ಭಾರತಕ್ಕೆ ಇದೀಗ ರಾಹುಲ್ ಅಲಭ್ಯರಾಗುವ ಸಾಧ್ಯತೆ ಕಾಡುತ್ತಿದೆ. ರೋಹಿತ್ ಶರ್ಮಾ ಗಾಯಗೊಂಡು ತಂಡದಿಂದ ಹೊರ ನಡೆದಾಗ ಹಂಗಾಮಿ ನಾಯಕರಾಗಿ ರಾಹುಲ್ ತಂಡದ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡು ಮೊದಲ ಪಂದ್ಯ ಗೆದ್ದಿದ್ದರು.
Advertisement
ಇದೀಗ ರಾಹುಲ್ ಗಾಯದ ಕುರಿತು ಟೀಂ ಇಂಡಿಯಾದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೂರ್ ಮಾಹಿತಿ ಹಂಚಿಕೊಂಡಿದ್ದು, ನೆಟ್ಸ್‌ನಲ್ಲಿ ರಾಹುಲ್ ಗಾಯಗೊಂಡಿದ್ದು, ವೈದ್ಯಕೀಯ ತಂಡ ಅವರ ಮೇಲೆ ನಿಗಾ ವಹಿಸಿದೆ. ಅವರು ನಾಳೆಯಿಂದ ನಡೆಯುವ ಟೆಸ್ಟ್‌ನಲ್ಲಿ ಆಡುವ ಭರವಸೆ ಇದೆ ಎಂದಿದ್ದಾರೆ. ಇದನ್ನೂ ಓದಿ: ಬಾಲಿವುಡ್ ನಟಿ ಅನನ್ಯ ಪಾಂಡೆ ಕಾಪಿ ಮಾಡಿದ ದಿಗ್ಗಜ ಆಟಗಾರ ಲಿಯೋನೆಲ್ ಮೆಸ್ಸಿ
ಒಂದು ವೇಳೆ ರಾಹುಲ್ ಎರಡನೇ ಟೆಸ್ಟ್‌ಗೆ ಅಲಭ್ಯರಾದರೆ, ತಂಡದ ಉಪನಾಯಕ ಚೇತೇಶ್ವರ ಪೂಜಾರ ತಂಡವನ್ನು ಮುನ್ನಡೆಸುವ ಸಾಧ್ಯತೆ ಹೆಚ್ಚಿದೆ. ಈ ನಡುವೆ ಅಭ್ಯಾಸದ ವೇಳೆ ಕೊಹ್ಲಿ ಹಾಗೂ ರಾಹುಲ್ ಎಳೆನೀರು ಸವಿದು ದಣಿವಾರಿಸಿಕೊಂಡರು.