Connect with us

Cricket

ನೀನಿಲ್ಲದೇ ಡ್ರೆಸ್ಸಿಂಗ್ ರೂಮ್ ಖಾಲಿ ಎನಿಸುತ್ತಿದೆ: ಕೆ.ಎಲ್.ರಾಹುಲ್

Published

on

ಮುಂಬೈ: ಟೀಂ ಇಂಡಿಯಾ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ಕೆ.ಎಲ್.ರಾಹುಲ್ ಉತ್ತಮ ಸ್ನೇಹಿತರು ಎಂಬುವುದು ಎಲ್ಲರಿಗೂ ತಿಳಿದ ಸಂಗತಿ. ಇಬ್ಬರೂ ತಂಡಲ್ಲಿದ್ದರೆ ಸಂತಸದ ವಾತಾವರಣ ಮನೆ ಮಾಡಿರುತ್ತದೆ. ಈ ಹಿಂದೆ ತಾವು ಟೀಂ ಇಂಡಿಯಾ ಆಟಗಾರರು ಎಂಬುವುದನ್ನು ಮರೆತು ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಹಿಳೆಯರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿ ವಿವಾದಕ್ಕೆ ಕಾರಣರಾಗಿದ್ದರು. ಅಲ್ಲದೇ ಕೆಲ ಪಂದ್ಯಗಳಿಂದ ತಂಡದಿಂದ ಹೊರಗುಳಿದಿದ್ದರು. ಸದ್ಯ ಗಾಯದ ಸಮಸ್ಯೆಯಿಂದ ತಂಡದಿಂದ ದೂರವುಳಿದಿದ್ದ ಹಾರ್ದಿಕ್ ಪಾಂಡ್ಯ ಕಮ್ ಬ್ಯಾಕ್ ಮಾಡಿದ್ದು, ಮುಂಬೈನಲ್ಲಿ ನಡೆದ ವಿಂಡೀಸ್ ವಿರುದ್ಧದ ಪಂದ್ಯದ ವೇಳೆ ತಂಡದೊಂದಿಗೆ ಕಾಣಿಸಿಕೊಂಡಿದ್ದರು.

ಪಂದ್ಯದ ಬಳಿಕ ಕೆ.ಎಲ್.ರಾಹುಲ್ ಅವರನ್ನು ಹಾರ್ದಿಕ್ ಅವರು ಚಿಟ್‍ಚಾಟ್ ಮಾಡಿದ್ದರು. ಈ ವೇಳೆ ಪಂದ್ಯದಲ್ಲಿ ಸಹಆಟಗಾರರ ಪ್ರದರ್ಶನದ ಬಗ್ಗೆ ಮೆಚ್ಚುಗೆ ಸೂಚಿಸಿದ ಹಾರ್ದಿಕ್, ತನಗೂ ಬ್ಯಾಟ್ ಹಿಡಿದು ಫೀಲ್ಡ್ ಗೆ ಆಗಮನಿಸಬೇಕೆನಿಸಿತ್ತು ಎಂದು ರಾಹುಲ್‍ ಗೆ ಪ್ರಶ್ನಿಸಿದರು. ಈ ಪ್ರಶ್ನೆಗೆ ಉತ್ತರಿಸಿದ ರಾಹುಲ್, ನಿನ್ನ ಆಗಮನದ ನಿರೀಕ್ಷೆಯಲ್ಲಿದ್ದೇನೆ. ತಂಡದ ಬೇರೆ ಆಟಗಾರರಿಗೆ ಯಾವ ಅಭಿಪ್ರಾಯ ವಿದೆ ಎಂಬುವುದು ನನಗೆ ಗೊತ್ತಿಲ್ಲ. ಆದರೆ ನನಗೆ ಮಾತ್ರ ನೀನಿಲ್ಲದೇ ಡ್ರೆಸ್ಸಿಂಗ್ ರೂಮ್ ಖಾಲಿ ಎನಿಸುತ್ತಿದೆ. ನನಗಾಗಿಯಾದರೂ ಬೇಗ ಬಾ ಎಂದು ಹೇಳಿದರು.

ಈ ಕುರಿತು ವಿಡಿಯೋವನ್ನು ಬಿಸಿಸಿಐ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಅಂತಿಮ ಟಿ20 ಪಂದ್ಯದಲ್ಲಿ 67 ರನ್ ಅಂತರದಿಂದ ಗೆಲುವು ಪಡೆದ ಟೀಂ ಇಂಡಿಯಾ ಮೂರು ಪಂದ್ಯಗಳ ಟಿ20 ಸರಣಿಯನ್ನು 2-1 ಅಂತರದೊಂದಿಗೆ ತನ್ನದಾಗಿಸಿಕೊಂಡಿತು. ಟೀಂ ಇಂಡಿಯಾ ಸತತವಾಗಿ ಗೆಲುವು ಪಡೆದ 7ನೇ ಟಿ20 ಸರಣಿ ಇದಾಗಿದೆ.

Click to comment

Leave a Reply

Your email address will not be published. Required fields are marked *