ಲಕ್ನೋ: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಟೀಂ ಇಂಡಿಯಾದ ಆರಂಭಿಕ ಆಟಗಾರ ಕನ್ನಡಿಗ ಕೆ.ಎಲ್ ರಾಹುಲ್ ಹೊರ ಬಿದ್ದಿದ್ದಾರೆ.
Advertisement
ರಾಹುಲ್ ಟೀಂ ಇಂಡಿಯಾದ ಆರಂಭಿಕ ಆಟಗಾರನಾಗಿ ಮಯಾಂಕ್ ಅಗರ್ವಾಲ್ ಜೊತೆ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿತ್ತು. ಆದರೆ ಅಭ್ಯಾಸದ ವೇಳೆ ಎಡ ತೊಡೆಯ ಸ್ನಾಯು ಸೆಳೆತದಿಂದಾಗಿ ರಾಹುಲ್ ಅಭ್ಯಾಸದಿಂದ ಹೊರಗುಳಿದಿದ್ದು, ಇನ್ನೂ ಚೇತರಿಸಿಕೊಳ್ಳದ ಹಿನ್ನೆಲೆ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿಯಿಂದ ರಾಹುಲ್ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಕಪ್ ಗೆಲ್ಲಲು ಲಕ್ಕಿ ಕಲರ್ ಆದ ಹಳದಿ ಜೆರ್ಸಿ
Advertisement
NEWS – Suryakumar Yadav replaces KL Rahul in India's Test squad.
KL Rahul has sustained a muscle strain on his left thigh and has been ruled out of the upcoming 2-match Paytm Test series against New Zealand.
More details here –https://t.co/ChXVhBSb6H #INDvNZ @Paytm pic.twitter.com/uZp21Ybajx
— BCCI (@BCCI) November 23, 2021
Advertisement
ರಾಹುಲ್ ಟೆಸ್ಟ್ ಸರಣಿಯಿಂದ ಹೊರಗುಳಿದಿರುವುದರಿಂದ ಅವರ ಸ್ಥಾನಕ್ಕೆ ಸೂರ್ಯಕುಮಾರ್ ಯಾದವ್ ಅವರನ್ನು ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಟೆಸ್ಟ್ ಸರಣಿಯಿಂದ ರೋಹಿತ್ ಶರ್ಮಾ ವಿಶ್ರಾಂತಿ ಪಡೆದರೆ, ವಿರಾಟ್ ಕೊಹ್ಲಿ ಮೊದಲ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದಾರೆ. ಎರಡನೇ ಪಂದ್ಯಕ್ಕೆ ಲಭ್ಯರಿದ್ದಾರೆ. ಇವರಿಬ್ಬರ ಅಲಭ್ಯತೆಯಲ್ಲಿ ಅಜಿಂಕ್ಯಾ ರಹಾನೆ ಮೊದಲನೇ ಟೆಸ್ಟ್ ನಲ್ಲಿ ನಾಯಕತ್ವ ನಿರ್ವಹಿಸಲಿದ್ದಾರೆ. ಇದನ್ನೂ ಓದಿ: 20 ಕೋಟಿಗೆ ರಾಹುಲ್ ಹರಾಜು: ಆಕಾಶ್ ಚೋಪ್ರಾ ಭವಿಷ್ಯ
Advertisement
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿ ನವೆಂಬರ್ 25ಕ್ಕೆ ಆರಂಭಗೊಂಡು ಡಿಸೆಂಬರ್ 7ಕ್ಕೆ ಕೊನೆಗೊಳ್ಳಲಿದೆ. ನವೆಂಬರ್ 25 ರಿಂದ 29ರ ವರೆಗೆ ಕಾನ್ಪುರದಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆದರೆ, ಮುಂಬೈನಲ್ಲಿ 2ನೇ ಟೆಸ್ಟ್ ಪಂದ್ಯಾಟ ಡಿಸೆಂಬರ್ 3 ರಿಂದ 7ರ ವರೆಗೆ ನಡೆಯಲಿದೆ. ಇದನ್ನೂ ಓದಿ: ಚಹರ್ ಸಿಕ್ಸ್‌ಗೆ ಸೆಲ್ಯೂಟ್ ಹೊಡೆದ ರೋಹಿತ್