ನವದೆಹಲಿ: ಟೀಂ ಇಂಡಿಯಾ ಪರ ಯುವ ಆಟಗಾರ ಕೆಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡುತ್ತಿದ್ದು, ಭವಿಷ್ಯದ ಕ್ರಿಕೆಟ್ ನಲ್ಲಿ ಮುಂದಿನ ಸ್ಟಾರ್ ಆಟಗಾರ ಆಗಲಿದ್ದಾರೆ ಎಂದು ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಅಭಿಪ್ರಾಯ ಪಟ್ಟಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ವೃತ್ತಿ ಜೀವನದ ಎರಡನೇ ಶತಕಗಳಿಸಿದ ರಾಹುಲ್ ಟೀಂ ಇಂಡಿಯಾ ಗೆಲುವಿಗೆ ಕಾರಣರಾಗಿದ್ದರು. ಆಸ್ಟ್ರೇಲಿಯಾ ವಿರುದ್ಧದ ಟೂರ್ನಿಯಿಂದಲೂ ಕೆಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಪಂದ್ಯದ ವೇಳೆ ಎದುರಾಳಿ ತಂಡ ಸಮರ್ಥ ಬೌಲಿಂಗ್ ದಾಳಿಯ ನಡುವೆಯೂ ನಾಯಕ ಆಟಗಾರರ ಬ್ಯಾಟಿಂಗ್ ಗೆ ಮೆಚ್ಚುಗೆ ಸೂಚಿಸಿದ್ದರು ಎಂದು ತಿಳಿಸಿದ್ದಾರೆ.
ಕುಲ್‍ದೀಪ್ ಯಾದವ್ ಸಹ ತಮ್ಮ ಬೌಲಿಂಗ್ ನಲ್ಲಿ ಮ್ಯಾಜಿಕ್ ಮಾಡಿದ್ದು, ಇಂಗ್ಲೆಂಡ್ ತಂಡದ ಆಟಗಾರರು ಕುಲ್‍ದೀಪ್ ಯಾದವ್ ಬೌಲಿಂಗ್ ದಾಳಿಯನ್ನು ಎದುರಿಸಲು ವಿಫಲರಾಗಿದ್ದರು. ಮುಖ್ಯವಾಗಿ ಇಂಗ್ಲೆಂಡ್ ತಂಡದ ಆಟಗಾರರದ ಜೋ ರೂಟ್, ಬೆನ್‍ಸ್ಟೋರಂತಹ ಸ್ಫೋಟಕ ಆಟಗಾರನನ್ನು ಸಹ ಕಟ್ಟಿಹಾಕಲು ಯಶಸ್ವಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಟೀಂ ಇಂಡಿಯಾ ತಂಡವನ್ನು ರೈಡ್ ಮಾಡಲು ಸಿದ್ಧವಿರುವ ಕಾರಿಗೆ ಹೋಲಿಕೆ ಮಾಡಿರುವ ಅವರು ಚಾಲಕ ವಿರಾಟ್ ಕೊಹ್ಲಿ ತಂಡವನ್ನು ಸಮರ್ಥವಾಗಿ ಮುನ್ನಡೆಸಿದ್ದು, ತಂಡದ ಗೆಲುವು ಪಡೆಯಲು ಪ್ರಮುಖ ಕಾರಣ. ಸದ್ಯ ಟೀಂ ಇಂಡಿಯಾ ಉತ್ತಮ ತಂಡವನ್ನು ಹೊಂದಿದೆ ಎಂದಿದ್ದಾರೆ.
ಸದ್ಯ ಟೀಂ ಇಂಡಿಯಾ ಆಟಗಾರರು ಟಿ20 ಸರಣಿ ಗೆಲುವಿನ ನಿರೀಕ್ಷೆಯಲ್ಲಿದ್ದು, ಮೊದಲ ಪಂದ್ಯ ಸೋತಿರುವ ಇಂಗ್ಲೆಂಡ್ ಇಂದು ರಾತ್ರಿ ನಡೆಯಲಿರುವ ಪಂದ್ಯದಲ್ಲಿ ಗೆಲುವು ದಾಖಲಿಸಬೇಕಾದ ಒತ್ತಡದಲ್ಲಿದೆ.
Special Day, Special Knock last night at Manchester.????????????Thank you all for the amazing support! ???????????????? Kudos to @imkuldeep18 on a brilliant 5-fer!! ????????#INDvsENG #Grateful pic.twitter.com/vYqH3c8DkL
— K L Rahul (@klrahul) July 4, 2018