ಮೊಹಾಲಿಯಲ್ಲಿ ಕೆಎಲ್ ರಾಹುಲ್ ಅಪರೂಪದ ಸಾಧನೆ

Public TV
2 Min Read
kl rahul

ಮೊಹಾಲಿ : ಐಪಿಎಲ್ 12ನೇ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಅರ್ಧ ಶತಕ ಸಿಡಿಸಿ ಅಪರೂಪದ ಸಾಧನೆ ಮಾಡಿದ್ದಾರೆ.

ಐಪಿಎಲ್ 12ನೇ ಆವೃತ್ತಿಯ ಭಾಗವಾಗಿ ಏಪ್ರಿಲ್ 8 ರಂದು ನಡೆದ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಕೆಎಲ್ ರಾಹುಲ್ ಅರ್ಧ ಶತಕ ಸಿಡಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು. ಪಂದ್ಯದಲ್ಲಿ 53 ಎಸೆತಗಳ ನೆರವಿನಿಂದ 7 ಬೌಂಡರಿ, 1 ಸಿಕ್ಸರ್ ಸಿಡಿಸಿ 71 ರನ್ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನ ಪಡೆದಿದ್ದರು.

KL RAHUL 1

ಕಳೆದ ವರ್ಷ ಇದೇ ಮೊಹಾಲಿ ಕ್ರೀಡಾಂಗಣದಲ್ಲಿ ನಡೆದ ಡೆಲ್ಲಿ ವಿರುದ್ಧ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು. ಅಲ್ಲದೇ ಕೇವಲ 14 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿ ಐಪಿಎಲ್ ನಲ್ಲಿ ವೇಗದ ಅರ್ಧ ಶತಕ ಸಿಡಿಸಿದ ಸಾಧನೆಯನ್ನ ಮಾಡಿದ್ದರು. ಆ ಮೂಲಕ ಯೂಸಫ್ ಪಠಾಣ್ ಅವರ ಹೆಸರಿನಲ್ಲಿ ಇದ್ದ ದಾಖಲೆಯನ್ನು ಅಳಿಸಿ ಹಾಕಿದ್ದರು. ಯೂಸುಫ್ ಪಠಾಣ್ 2015 ರಲ್ಲಿ 15 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದ್ದರು. ಒಂದು ವರ್ಷದ ಅವಧಿಯ ಅಂತರದಲ್ಲಿ ಕಾಕತಾಳಿಯವಾಗಿ ಎಂಬಂತೆ ಅರ್ಧ ಶತಕದ ಸಾಧನೆ ಮಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನ ವಹಿಸಿದ್ದಾರೆ.

2019ರ ಐಪಿಎಲ್ ಆರಂಭಕ್ಕೂ ಮುನ್ನ ಫಾರ್ಮ್ ಸಮಸ್ಯೆ ಎದುರಿಸಿದ್ದ ರಾಹುಲ್ ಟೂರ್ನಿಯ ಎರಡು ಪಂದ್ಯದಲ್ಲಿ ಕೂಡ ಉತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ದರು. ಆದರೆ ಆ ಬಳಿಕ ನಡೆದ 4 ಪಂದ್ಯಗಳಲ್ಲಿ 3 ಅರ್ಧ ಶತಕ ಸಿಡಿಸಿ ಮಿಂಚಿದ್ದಾರೆ. ಕಾಫಿ ವಿಥ್ ಕರಣ್ ಶೋ ಬಳಿಕ ವಿವಾದಕ್ಕೆ ಸಿಲುಕಿದ್ದ ರಾಹುಲ್ ನಿಷೇಧಕ್ಕೆ ಒಳಗಾಗಿದ್ದರು. ಆದರೆ ಬಿಸಿಸಿಐ ನಿಷೇಧ ತೆರವುಗೊಳಿಸಿದ ಬಳಿಕ ಇಂಗ್ಲೆಂಡ್ ಎ ತಂಡದ ವಿರುದ್ಧ ಆಡುವ ಅವಕಾಶ ಪಡೆದು ರಾಹುಲ್ ದ್ರಾವಿಡ್ ಅವರ ಸಲಹೆಗಳೊಂದಿಗೆ ಮತ್ತೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಪಡೆದಿದ್ದರು. ಸದ್ಯ ರಾಹುಲ್ ಮಹತ್ವದ ವಿಶ್ವಕಪ್ ರೇಸ್‍ನಲ್ಲಿದ್ದಾರೆ. ಇತ್ತ ಆಡಿರುವ 6 ಪಂದ್ಯಗಳಲ್ಲಿ 4 ರಲ್ಲಿ ಗೆಲುವು ಪಡೆದಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಬುಧವಾರ ಮುಂಬೈ ತಂಡವನ್ನು ಎದುರಿಸಲಿದೆ.

Share This Article
Leave a Comment

Leave a Reply

Your email address will not be published. Required fields are marked *