ಕಲಬುರಗಿ: ಕರ್ನಾಟಕದಿಂದ (Karnataka) ಮಹಾರಾಷ್ಟ್ರಕ್ಕೆ (Maharashtra) ಕೆಕೆಆರ್‌ಟಿಸಿ ಬಸ್ ಸಂಚಾರ ಸ್ಥಗಿತಗೊಂಡ ಹಿನ್ನಲೆ, ತುಳಜಾಪುರದ ಅಂಬಾಭವಾನಿ ದೇವಿ ದರ್ಶನಕ್ಕೆ ತೆರಳಿದ ನೂರಾರು ಕನ್ನಡಿಗರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕರ್ನಾಟಕದಿಂದ ಮಹಾರಾಷ್ಟ್ರದ ತುಳಜಾಪುರಕ್ಕೆ ಬಸ್ (Bus) ಸೇವೆ ಸ್ಥಗಿತವಾಗಿರುವುದರಿಂದ ನೂರಾರು ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ತುಳಜಾಪುರದ ಬಸ್ ನಿಲ್ದಾಣದಲ್ಲಿಯೇ ಕುಳಿತಿದ್ದಾರೆ. ನಮ್ಮ ಊರಿಗೆ ಹೋಗಲು ಬಸ್ ಬಿಡಿ ಎಂದು ಮಹಿಳೆಯರು ಆಗ್ರಹಿಸುತ್ತಿದ್ದಾರೆ.
Advertisement
Advertisement
ನಾವು ಫ್ರೀ ಬಸ್ ಎಂಬ ಕಾರಣಕ್ಕೆ ಹೆಚ್ಚಿನ ದುಡ್ಡು ಕೂಡ ತಂದಿಲ್ಲ. ಈಗ ಖಾಸಗಿ ವಾಹನದವರು 500 – 600 ರೂ. ಹಣವನ್ನು ಕೇಳುತ್ತಿದ್ದು, ಎಲ್ಲಿಂದ ಕೋಡೊದು? ಬೆಳಗ್ಗೆಯಿಂದ ಉಪವಾಸ ಇದ್ದೇವೆ. ನಮ್ಮ ಕಷ್ಟ ಯಾರಿಗೆ ಹೇಳಬೇಕು? ನಾವು ನಮ್ಮ ಊರುಗಳಿಗೆ ಹೋಗಬೇಕು. ದಯವಿಟ್ಟು ಬಸ್ ಬಿಡಿ ಎಂದು ಮಹಿಳೆಯರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕೋವಿಡ್‌ನಿಂದ ಹೆಚ್ಚುತ್ತಿದ್ಯಾ ಹೃದಯಾಘಾತ?- ಹೃದ್ರೋಗ ತಜ್ಞರು ಹೇಳೋದು ಏನು?
Advertisement
ಮಹಾರಾಷ್ಟ್ರದಲ್ಲಿ ಮೀಸಲಾತಿ ಸಂಬಂಧ ನಡೆಯುತ್ತಿರುವ ಹೋರಾಟದಲ್ಲಿ ಪ್ರತಿಭಟನಾಕರರು ಸೋಮವಾರ ಬೀದರ್ ಜಿಲ್ಲೆಯ ಭಾಲ್ಕಿಯಿಂದ ಪುಣೆಗೆ ಹೊರಟಿದ್ದ ಕೆಕೆಆರ್‌ಟಿಸಿಯ ಬಸ್ ಅನ್ನು ಉಮರ್ಗಾ ಬಳಿಯ ತರುರಿ ಗ್ರಾಮದಲ್ಲಿ ತಡೆದು ಪ್ರಯಾಣಿಕರನ್ನು ಕೆಳಗಿಳಿಸಿ ಬೆಂಕಿ ಹಚ್ಚಿದ್ದರು. ಈ ಹಿನ್ನೆಲೆಯಲ್ಲಿ ತುಳಜಾಪುರ ಯಾತ್ರೆ ಸೇರಿದಂತೆ ಮಹಾರಾಷ್ಟ್ರಕ್ಕೆ ಅಂತರಾಜ್ಯ ಕಾರ್ಯಾಚರಣೆಯನ್ನು ಕೆಕೆಆರ್‌ಟಿಸಿ ತಾತ್ಕಲಿಕವಾಗಿ ಸ್ಥಗಿತಗೊಳಿಸಿದೆ. ಇದನ್ನೂ ಓದಿ: ನನ್ನ ಹೆಸರು ಕೆಡಿಸಿದ್ದಕ್ಕೆ ಬರಗಾಲ ಬಂದಿದೆ: ರಮೇಶ್ ಜಾರಕಿಹೊಳಿ
Advertisement
Web Stories