ಶಾರ್ಜಾ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೆಕೆಆರ್ 3 ವಿಕೆಟ್‍ಗಳ ಜಯ ದಾಖಲಿಸುವ ಮೂಲಕ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.
Advertisement
ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದ 128 ರನ್‍ಗಳ ಗುರಿಯನ್ನು ಕೆಕೆಆರ್ 18.2 ಓವರ್‍ಗಳಲ್ಲಿ ಹೊಡೆದು ಜಯವನ್ನು ತನ್ನದಾಗಿಸಿಕೊಂಡಿದೆ. ಸೋತರೂ ಡೆಲ್ಲಿ, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಮುಂದುವರಿದಿದೆ. ಇದನ್ನೂ ಓದಿ: ಕೋಲ್ಕತ್ತಾಗೆ 7 ವಿಕೆಟ್‍ಗಳ ಭರ್ಜರಿ ಜಯ – 4ನೇ ಸ್ಥಾನಕ್ಕೆ ಜಿಗಿತ
Advertisement
Advertisement
ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಬಹೃತ್ ಮೊತ್ತ ದಾಖಲಿಸುವ ಸೂಚನೆ ನೀಡಿತು. ಸ್ಮಿತ್ 39 ರನ್ (34 ಎಸೆತ 4 ಬೌಂಡರಿ) ಸಿಡಿಸಿ ವಿಕೆಟ್ ಒಪ್ಪಿಸಿದರು. ಶಿಖರ್ ಧವನ್ 24ರನ್ (20 ಎಸೆತ 5 ಬೌಂಡರಿ) ಗಳಿಸಿದರು. ಕೆಕೆಆರ್ ಬೌಲರ್‍ಗಳ ದಾಳಿಗೆ ನಲುಗಿದ ಡೆಲ್ಲಿ ರನ್ ಗಳಿಸಲು ಪರಾದಡಿತು. ನಾಯಕ ರಿಷಭ್ ಪಂತ್ 39 ರನ್ (36 ಎಸೆತ 3 ಬೌಂಡರಿ) ಸಿಡಿಸಿ ರನ್ ಔಟ್‍ಗೆ ಬಲಿಯಾದರು. ಇನ್ನುಳಿದ ಯಾವೊಬ್ಬ ಡೆಲ್ಲಿ ಬ್ಯಾಟ್ಸ್‍ಮನ್ ಕೂಡ ಕೆಕೆಆರ್ ಬೌಲಿಂಗ್ ದಾಳಿಯನ್ನು ಎದುರಿಸಲಾಗದೆ ಪೆವಿಲಿಯನ್ ಪರೆಡ್ ನಡೆಸಿದರು. ನಿಗದಿತ 20 ಓವರ್‍ಗಳಲ್ಲಿ ಡೆಲ್ಲಿ ತಂಡ 9 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಲಷ್ಟೆ ಶಕ್ತವಾಯಿತು. ಕೆಕೆಆರ್ ಪರ ನರೈನ್ ಹಾಗೂ ಫರ್ಗುಸನ್ ತಲಾ 2 ವಿಕೆಟ್ ಪಡೆದು ಮಿಂಚಿದರು. ಇದನ್ನೂ ಓದಿ: ಜೇಸನ್ ರಾಯ್ ಅಬ್ಬರಕ್ಕೆ ಮಕಾಡೆ ಮಲಗಿದ ರಾಜಸ್ಥಾನ್ ರಾಯಲ್ಸ್: ಹೈದರಾಬಾದ್‍ಗೆ ಜಯ
Advertisement
ಡೆಲ್ಲಿ ನೀಡಿದ್ದ ಸಾಧಾರಣ ಗುರಿ ಬೆನ್ನತ್ತಿದ ಕೋಲ್ಕತ್ತಾ ಉತ್ತಮ ಆರಂಭ ಪಡೆಯಿತು. ಶುಬ್‍ಮನ್ ಗಿಲ್ 30ರನ್ (33 ಎಸೆತ 1 ಬೌಂಡರಿ 2 ಸಿಕ್ಸರ್) ಸಿಡಿಸಿ ರಬಾಡಗೆ ವಿಕೆಟ್ ಒಪ್ಪಿಸಿದರು. ಡ್ಯಾಸಿಂಗ್ ಓಪನರ್ ವೆಂಕಟೇಶ್ ಅಯ್ಯರ್ 14ರನ್ (15 ಎಸೆತ 2 ಬೌಂಡರಿ) ಗಳಿಸಿ ಯಾದವ್‍ಗೆ ವಿಕೆಟ್ ಕೊಟ್ಟು ಹೊರ ನಡೆದರು. ಅಲ್ಪ ಮೊತ್ತವನ್ನು ಬೆನ್ನತ್ತಲು ತಿಣುಕಾಡಿದ ಕೆಕೆಆರ್‍ಗೆ ನಿತೀಶ್ ರಾಣಾ ಅಜೇಯ 36ರನ್ (27 ಎಸೆತ 2 ಬೌಂಡರಿ 2 ಸಿಕ್ಸರ್) ಸಿಡಿಸುವ ಮೂಲಕ ಜಯ ದೊರಕಿಸಿಕೊಟ್ಟರು. ಡೆಲ್ಲಿ ಪರ ಅವೇಶ್ ಖಾನ್ 3 ವಿಕೆಟ್ ಪಡೆದರೆ ಅಶ್ವಿನ್ 1 ಹಾಗೂ ಲಲಿತ್ ಯಾದವ್ 1 ವಿಕೆಟ್ ಪಡೆದರು.