Cricket

ಕೋಲ್ಕತ್ತಾಗೆ 7 ವಿಕೆಟ್‍ಗಳ ಭರ್ಜರಿ ಜಯ – 4ನೇ ಸ್ಥಾನಕ್ಕೆ ಜಿಗಿತ

Published

on

Share this

ಅಬುಧಾಬಿ: ರಾಹುಲ್ ತ್ರಿಪಾಠಿ ಮತ್ತು ವೆಂಕಟೇಶ್ ಅಯ್ಯರ್ ಅವರ ಸ್ಫೋಟಕ ಅರ್ಧಶತಕದಿಂದಾಗಿ ಮುಂಬೈ ಇಂಡಿಯನ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 7 ವಿಕೆಟ್ ಗಳ ಜಯ ಸಾಧಿಸಿದೆ.

ಗೆಲ್ಲಲು 156 ರನ್‍ಗಳ ಗುರಿಯನ್ನು ಪಡೆದ ಕೋಲ್ಕತ್ತಾ 15.1 ಓವರ್‌ಗಳಲ್ಲಿ  3 ವಿಕೆಟ್ ನಷ್ಟಕ್ಕೆ 159 ರನ್ ಗಳನ್ನು ಹೊಡೆದು ಜಯಗಳಿಸಿತು.

ರಾಹುಲ್ ತ್ರಿಪಾಠಿ 74 ರನ್(42 ಎಸೆತ, 8 ಬೌಂಡರಿ, 3 ಸಿಕ್ಸರ್) ಹೊಡೆದರೆ ವೆಂಕಟೇಶ್ ಅಯ್ಯರ್ 53 ರನ್(30 ಎಸೆತ, 4 ಬೌಂಡರಿ, 3 ಸಿಕ್ಸರ್) ಹೊಡೆದು ಔಟಾದರು.

ಇಂದಿನ ಪಂದ್ಯವನ್ನು ಜಯಗಳಿಸಿದ ಕೆಕೆಆರ್ ಅಂಕಪಟ್ಟಿಯಲ್ಲಿ 8 ಅಂಕಗಳನ್ನು ಪಡೆದು ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ. ರಾಜಸ್ಥಾನ ರಾಯಲ್ಸ್, ಮುಂಬೈ ಇಂಡಿಯನ್ಸ್ 8 ಅಂಕ ಪಡೆದರೂ ರನ್ ರೇಟ್ ನಲ್ಲಿ ಕೋಲ್ಕತ್ತಾ ಮುಂದಿದೆ. ಇದನ್ನೂ ಓದಿ: ಆರ್​ಸಿಬಿ ಕ್ಯಾಪ್ಟನ್ ರೇಸ್‍ನಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್ 

ಮುಂಬೈ ಪರ ರೋಹಿತ್ ಶರ್ಮಾ 33 ರನ್(30 ಎಸೆತ, 4 ಬೌಂಡರಿ), ಕ್ವಿಂಟನ್ ಡಿ ಕಾಕ್ 55 ರನ್(42 ಎಸೆತ, 4 ಬೌಂಡರಿ, 3 ಸಿಕ್ಸರ್) ಹೊಡೆದು ಔಟಾದರು.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications