ಗಾಂಧಿನಗರ: ರಾಜ್ಯದಾದ್ಯಂತ ಇಂದು ಗಾಳಿಪಟ ಹಾರಿಸುವಾಗ 63ಕ್ಕೂ ಹೆಚ್ಚು ಮಂದಿ ಮೇಲಿನಿಂದ ಬಿದ್ದು ಗಾಯಗೊಂಡಿದ್ದಾರೆ. 108 ಅಂಬುಲೆನ್ಸ್ ಸೇವೆಗೆ 1,203 ದೂರುಗಳು ಬಂದಿವೆ ಎನ್ನಲಾಗಿದೆ.
Advertisement
ರಸ್ತೆಯಲ್ಲಿ ಪ್ರಯಾಣಿಸುವವರೇ ಅಪಘಾತಕ್ಕೆ ಸಿಲುಕೊಂಡವರು. ನೇತಾಡುತ್ತಿದ್ದ ಗಾಳಿಪಟದ ದಾರಗಳು ಸಾರ್ವಜನಿಕರ ಕುತ್ತಿಗೆ ಮುಖಕ್ಕೆ ಸಿಲುಕಿಕೊಂಡಿವೆ. ಹೆಚ್ಚಿನವರು ಹೀಗೆ ಅಪಘಾತಕ್ಕೆ ಸಿಲುಕಿಕೊಂಡಿದ್ದಾರೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅಂಬುಲೆನ್ಸ್ ಸೇವೆಗಳು ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ, 63 ಜನರಲ್ಲಿ 21 ಜನರು ಅಹಮದಾಬಾದ್‍ನವರಾಗಿದ್ದಾರೆ, ವಡೋದರಾ ಮತ್ತು ರಾಜ್‍ಕೋಟ್ ತಲಾ ಏಳು ಪ್ರಕರಣಗಲಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಧಗ ಧಗ ಉರಿಯುವ ಬೆಂಕಿ ಮೈ ಆವರಿಸಿದ್ದರೂ ರಸ್ತೆಗೆ ಓಡಿದ ದಂಪತಿ
Advertisement
Advertisement
ಟೆರೇಸ್‍ಗಳಿಂದ ಅಥವಾ ಎತ್ತರದಿಂದ ಬಿದ್ದ ನಂತರ 69 ಜನರು ಗಾಯಗೊಂಡಿದ್ದಾರೆ. ಕಳೆದ ವರ್ಷ ಪುಣೆಯಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ಗಾಳಿಪಟದ ದಾರದಿಂದ ಬೈಕ್ ಸವಾರನ ಕತ್ತು ಸೀಳಿತ್ತು ಎಂದಿದ್ದಾರೆ. ಇದನ್ನೂ ಓದಿ: 190 ವರ್ಷದ ಆಮೆ- ಗಿನ್ನಿಸ್ ಪುಟಕ್ಕೆ ಸೇರ್ಪಡೆ