ಜೊನಾಥನ್ ಹೆಸರಿನ ಆಮೆಯೊಂದು 190ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಅತ್ಯಂತ ಹಳೆಯ ಆಮೆ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸೇರಿದೆ.
1832ರಲ್ಲಿ ಜನಿಸಿದ ಜೊನಾಥನ್ ಆಮೆ ಜನಿಸಿದೆ ಎಂದು ಹೇಳಲಾಗುತ್ತದೆ. ಸಾಗರೋತ್ತರ ಪ್ರದೇಶವಾದ ಸೇಂಟ್ ಹೆಲೆನಾ ದ್ವೀಪದಲ್ಲಿರುವ ಜೊನಾಥನ್ ಆಮೆ 190ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದೆ. ವಿಶ್ವದ ಅತ್ಯಂತ ಹಳೆಯ ಆಮೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದನ್ನೂ ಓದಿ: ಐತಿಹಾಸಿಕ ಕೌತುಕಕ್ಕೆ ಸಾಕ್ಷಿಯಾದ ಗವಿ ಗಂಗಾಧರೇಶ್ವರ ದೇಗುಲ – ಶಿವಲಿಂಗಕ್ಕೆ ಸೂರ್ಯ ರಶ್ಮಿ ಸ್ಪರ್ಶ
Advertisement
Advertisement
ಸೇಂಟ್ ಹೆಲೆನಾ ಸರ್ಕಾರದ ಪ್ರಕಾರ ಜೊನಾಥನ್ ಚಳಿಗಾಲದ ಕಾರಣ ಬಳಲಿದ್ದು, ಚೆನ್ನಾಗಿ ತಿನ್ನುತ್ತದೆ. ಜೊನಾಥ್ ಜೀವನದ ಬಹುಪಾಲು ಸಮಯವನ್ನು ಸೇಂಟ್ ಹೆಲೆನಾದ ಗವರ್ನರ್ ಅವರ ಮನೆಯಲ್ಲಿ ಕಳೆದಿದ್ದು, ಅಲ್ಲಿ ಅದು ಡೇವಿಡ್, ಎಮ್ಮಾ ಫ್ರೆಡ್ ಎನ್ನುವ ದೈತ್ಯಾಕಾರದ ಆಮೆಗಳೊಮದಿಗೆ ವಾಸಿಸುತ್ತದೆ. ಎಲೆಕೋಸು, ಸೌತೆಕಾಯಿ, ಕ್ಯಾರೆಟ್, ಸೇಬುಹಣ್ಣುಗಳನ್ನು ಸೇವಿಸುತ್ತದೆ ಪಶುವೈದ್ಯರೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: ಆರೋಪಿಗಳ ರಕ್ಷಣೆಗೆ ಲಂಚ – ರವಿ ಡಿ.ಚನ್ನಣ್ಣನವರ್ ಅಮಾನತಿಗೆ AAP ಆಗ್ರಹ
Advertisement
Advertisement
ತುಯಿ ಮಲಿಲಾ ಅತ್ಯಂತ ಹಳೆಯ ಆಮೆಯಾಗಿದೆ. ಇದು 188 ವರ್ಷ ಜೀವಿಸಿತ್ತು. 177ರಲ್ಲಿ ಟೋಂಗಾ ರಾಜಮನೆತನಕ್ಕೆ ದಾನ ಮಾಡಲಾಗಿತ್ತು. ಜೊನಾಥನ್ ಆಮೆ 1882ರಲ್ಲಿ ಸೇಶೆಲ್ಸ್‌ನಿಂದ ಸೇಂಟ್ ಹೆಲೆನಾಗೆ ಬಂದಾಗ ಆಮೆ ಸಂಪೂರ್ಣವಾಗಿ ಪ್ರಬುದ್ಧವಾಗಿತ್ತು. ಕನಿಷ್ಠ 50 ವರ್ಷವಾಗಿತ್ತು ಎಂಬ ಅಂಶದ ಆಧಾರದ ಮೇಳೆ ಜೊನಾಥನ್ ವಿಶ್ವ ದಾಖಲೆ ಬರೆದಿದೆ.