ಕನ್ನಡದ ನಟಿ ಶ್ರೀಲೀಲಾಗೆ ‘ಪುಷ್ಪ 2’ (Pushpa 2) ಸಿನಿಮಾದಿಂದ ಒಂದೊಳ್ಳೆಯ ಬ್ರೇಕ್ ಸಿಕ್ಕಿದೆ. ಕಿಸ್ಸಿಕ್ ಐಟಂ ಹಾಡಿನ ಸಕ್ಸಸ್‌ನಿಂದ ಹಲವಾರು ಅವಕಾಶಗಳು ಅವರನ್ನು ಅರಸಿ ಬರುತ್ತಿವೆ. ಹೀಗಿರುವಾಗ ಟಾಪ್ ನಟಿಯಾಗಿ ನಿಲ್ಲಲು ಮತ್ತು ಯಶಸ್ಸಿಗಾಗಿ ನಟಿ ದಿಟ್ಟ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಇದನ್ನೂ ಓದಿ:ಹೋಟೆಲ್‌ನಲ್ಲಿ ಶವವಾಗಿ ಪತ್ತೆಯಾದ ಮಲಯಾಳಂ ನಟ ದಿಲೀಪ್ ಶಂಕರ್
ಶ್ರೀಲೀಲಾ (Sreeleela) ಡ್ಯಾನ್ಸ್, ನಟನೆ ಬಗ್ಗೆ ಫ್ಯಾನ್ಸ್‌ಗೆ ಕ್ರೇಜ್ ಇದೆ. ತೆಲುಗಿಗೆ ಕಾಲಿಟ್ಟ ನಾಲ್ಕೇ ವರ್ಷಗಳಲ್ಲಿ ನಟಿ ಅಲ್ಲಿನ ಪ್ರೇಕ್ಷಕರ ಮನಗೆದ್ದಿದ್ದಾರೆ. ಆದರೆ ಅವರು ಸಿನಿಮಾದ ನಟನೆಗಿಂತ ಡ್ಯಾನ್ಸ್ ಮತ್ತು ಐಟಂ ಸಾಂಗ್‌ನಿಂದಲೇ ಹೆಚ್ಚು ಗುರುತಿಸಿಕೊಂಡಿದ್ದಾರೆ. ಹಾಗಾಗಿ ಚಿತ್ರದ ಕಥೆ ಆಯ್ಕೆ ಮಾಡುವ ರೀತಿಯನ್ನು ಇದೀಗ ಅವರು ಬದಲಿಸಿಕೊಂಡಿದ್ದಾರೆ. ಮರ ಸುತ್ತುವ ಪಾತ್ರ ಬಿಟ್ಟು ನಟನೆಗೆ ಸ್ಕೋಪ್ ಇರುವ ಪಾತ್ರಕ್ಕೆ ನಟಿ ಪ್ರಾಮುಖ್ಯತೆ ಕೊಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಹಾಗಾಗಿ ತಮಿಳಿನ ಶಿವ ಕಾರ್ತಿಕೇಯನ್ (Siva Karthikeyan) ನಟನೆಯ ಸಿನಿಮಾಗೆ ಶ್ರೀಲೀಲಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಚಿತ್ರಕ್ಕೆ ಪ್ರತಿಭಾನ್ವಿತ ನಿರ್ದೇಶಕಿ ಸುಧಾ ಕೊಂಗರ ಡೈರೆಕ್ಷನ್ ಮಾಡಲಿದ್ದಾರೆ. ಇದರಲ್ಲಿ ‘ಕಿಸ್’ ನಟಿಗೆ ಉತ್ತಮ ಪಾತ್ರವೇ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.
ಇನ್ನೂ ಸೌತ್ ಸಿನಿಮಾಗಳ ಜೊತೆ ನಟಿ ಬಾಲಿವುಡ್‌ಗೂ (Bollywood) ಪಾದಾರ್ಪಣೆ ಮಾಡಿದ್ದಾರೆ. ಸೈಫ್ ಅಲಿ ಖಾನ್ ಪುತ್ರನಿಗೆ ನಾಯಕಿಯಾಗಿ ಅವರು ನಟಿಸುತ್ತಿದ್ದಾರೆ.