ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ಇನ್ನೂ ಕೆಲವು ವಾರಗಳಲ್ಲಿ ಫೈನಲ್ ಹಂತ ತಲುಪಲಿದೆ. ಈ ವಾರ ಬಿಗ್‍ಬಾಸ್ ಮನೆಯಿಂದ ಡ್ಯಾನ್ಸರ್ ಕಿಶನ್ ಹೊರ ಬಂದಿದ್ದಾರೆ. ಆದರೆ ಕಿಶನ್ ಎಲಿಮಿನೇಟ್ ಆಗುವ ಮುನ್ನ ಸುದೀಪ್ ಕ್ಲಾಸ್ ತೆಗೆದುಕೊಂಡರು.
ಕಿಶನ್ ಬಿಗ್‍ಬಾಸ್ ಮನೆಗೆ ಬಂದಾಗಿನಿಂದ ತಮಾಷೆ ಮಾಡಿಕೊಂಡು, ಹುಡುಗಿಯರಿಗೆ ಮುತ್ತು ಕೊಟ್ಟುಕೊಂಡು ಚೆನ್ನಾಗಿ ಆಟವಾಡುತ್ತಿದ್ದರು. ಅಷ್ಟೇ ಅಲ್ಲದೇ ಈ ವಾರ ಉತ್ತಮವಾಗಿ ಆಟವಾಡಿ ಗೋಲ್ಡ್ ಮೆಡಲ್ ಕೂಡ ಪಡೆದುಕೊಂಡಿದ್ದರು. ಆದರೆ ಅನಿರೀಕ್ಷಿತವಾಗಿ ಈ ವಾರ ಕಿಶನ್ ಮನೆಯಿಂದ ಹೊರ ಬಂದಿದ್ದಾರೆ. ಎಲಿಮಿನೇಟ್ ಆಗುವ ಮುನ್ನ ಕಿಶನ್‍ಗೆ ಸುದೀಪ್ ಕ್ಲಾಸ್ ತೆಗೆದುಕೊಂಡರು.
ಈ ವಾರ ಕಿಶನ್ ಆಟವಾಡುವಾಗ ಜೋರಾಗಿ ಭೂಮಿಯನ್ನು ತಳ್ಳಿದ್ದರು. ಇದರಿಂದ ಭೂಮಿ ಕಾಲಿಗೆ ಪೆಟ್ಟಾಯಿತು. ಆದರೆ ಕೂದಲೆಳೆ ಅಂತರದಲ್ಲಿ ಭೂಮಿ ದೊಡ್ಡ ಅಪಾಯದಿಂದ ಪಾರಾಗಿದ್ದರು. ಈ ಬಗ್ಗೆ ‘ವಾರದ ಕಥೆ ಕಿಚ್ಚನ ಜೊತೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಸುದೀಪ್, ಗೆಲ್ಲುವುದಕ್ಕೆ ಏನ್ ಬೇಕೋ ಅದನ್ನು ಮಾಡಿ. ಆಟವಾಡೋದಕ್ಕೆ ಅಂತಾ ಅಷ್ಟು ದೊಡ್ಡ ಬೌಂಡರಿ ಕೊಟ್ಟಿದ್ದರು. ಆದರೆ ನೀವು ತಳ್ಳಿದ್ದು ತಪ್ಪು. ಈ ರೀತಿ ಆಟವಾಡಿದರೆ ನಾವು ಬೇರೆ ಯಾವ ರೀತಿಯ ಗೇಮ್ ಕೊಡಬೇಕು ಎಂದು ಯೋಚನೆ ಮಾಡಬೇಕಾಗುತ್ತದೆ.
ಟಾಸ್ಕ್ ಆಡುವಾಗ ಅಗ್ರೆಷನ್ ಬೇಕೆಬೇಕು. ಆದರೆ ನಿಮ್ಮ ಜೀವಕ್ಕೆ ಅಪಾಯ ಮಾಡಿಕೊಳ್ಳುವ ಹಂತಕ್ಕೆ ಬೇಡ ಎಂದು ಕಿಶನ್‍ಗೆ ಸುದೀಪ್ ಕ್ಲಾಸ್ ತೆಗೆದುಕೊಂಡರು. ಆಗ ಕಿಶನ್ ಕ್ಷಮೆ ಕೇಳಿದ್ದಾರೆ. ಅದಕ್ಕೆ ತಪ್ಪು ಮಾಡಿದರೆ ಮಾತ್ರ ಕಲಿಯಬಹುದು. ಆದರೆ ಮಾಡಿದ ತಪ್ಪನ್ನೇ ರಿಪೀಟ್ ಮಾಡಬೇಡಿ, ಹೊಸ ತಪ್ಪು ಮಾಡಿ. ಆದರೆ ನೀವು ಮತ್ತೆ ಮತ್ತೆ ಅದೇ ತಪ್ಪು ಮಾಡುತ್ತಿದ್ದೀರಾ ಎಂದು ಸುದೀಪ್ ಕಿಶನ್‍ಗೆ ಕ್ಲಾಸ್ ತೆಗೆದುಕೊಂಡರು.