ಬೆಂಗಳೂರು: ಕಿರಣ್ ಮಜುಂದಾರ್ ಶಾ (Kiran Mazumdar Shaw) ಅವರು ಇನ್ಫೋಸಿಸ್‌ನಲ್ಲಿ (Infosys) ಸ್ವತಂತ್ರ ನಿರ್ದೇಶಕಿಯಾಗಿ ತಮ್ಮ ಅಧಿಕಾರವನ್ನು ಪೂರ್ಣಗೊಳಿಸಿದ್ದು, ಮಾರ್ಚ್ 22 ರಿಂದ ಜಾರಿಗೆ ಬರುವಂತೆ ನಿವೃತ್ತರಾಗಿದ್ದಾರೆ (Retirement) ಎಂದು ಕಂಪನಿ ತಿಳಿಸಿದೆ.
ಬಯೋಕಾನ್‌ನ (Biocon) ಕಿರಣ್ ಮಜುಂದಾರ್ ಶಾ ಅವರು ಇನ್ಫೋಸಿಸ್ ಮಂಡಳಿಯ ಸ್ವತಂತ್ರ ನಿರ್ದೇಶಕಿಯಾಗಿ ನಿವೃತ್ತರಾಗಿದ್ದಾರೆ ಎಂದು ಕಂಪನಿ ತಿಳಿಸಿದೆ. ಇದೀಗ ಇನ್ಫೋಸಿಸ್‌ನ ಮಂಡಳಿಯು ನಾಮನಿರ್ದೇಶನ ಹಾಗೂ ಸಂಭಾವನೆಯ ಶಿಫಾರಸಿನ ಆಧಾರದ ಮೇಲೆ ಮಾರ್ಚ್ 23ರಿಂದ ಕಂಪನಿಯ ಪ್ರಮುಖ ಸ್ವತಂತ್ರ ನಿರ್ದೇಶಕರಾಗಿ ಡಿ ಸುಂದರಂ ಅವರನ್ನು ನೇಮಿಸಿಕೊಂಡಿದೆ.
Advertisement
Advertisement
ಇನ್ಫೋಸಿಸ್ ಕುಟುಂಬದ ಇಂತಹ ಅವಿಭಾಜ್ಯ ಸದಸ್ಯರಾಗಿರುವ ಕಿರಣ್ ಮಜುಂದಾರ್ ಶಾ ಅವರಿಗೆ ನಾವು ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಹಲವು ವರ್ಷಗಳಿಂದ ಮಂಡಳಿಗೆ ಅಮೂಲ್ಯವಾದ ಮಾರ್ಗದರ್ಶನ ಮತ್ತು ನಾಯಕತ್ವವನ್ನು ನೀಡಿರುವುದಕ್ಕೆ, ಅವರು ನನ್ನ ಅದ್ಭುತವಾದ ಸ್ನೇಹಿತೆ ಹಾಗೂ ಸಹೋದ್ಯೋಗಿಯಾಗಿರುವುದರಿಂದ ನಾನು ಅವರಿಗೆ ವೈಯಕ್ತಿಕವಾಗಿ ಕೃತಜ್ಞತೆ ತಿಳಿಸುತ್ತೇನೆ ಎಂದು ಇನ್ಫೋಸಿಸ್ ಅಧ್ಯಕ್ಷ ನಂದನ್ ನಿಲೇಕಲ್ ಹೇಳಿದ್ದಾರೆ. ಇದನ್ನೂ ಓದಿ: ನಾಳೆ ಕರೆದಿದ್ದ ಸಾರಿಗೆ ಮುಷ್ಕರಕ್ಕೆ ಹೈಕೋರ್ಟ್ ಬ್ರೇಕ್
Advertisement
Advertisement
ಕಿರಣ್ ಮಜುಂದಾರ್ ಶಾ ಅವರು 2014 ರಲ್ಲಿ ಇನ್ಫೋಸಿಸ್ ಮಂಡಳಿಗೆ ಸ್ವತಂತ್ರ ನಿರ್ದೇಶಕಿಯಾಗಿ ಮತ್ತು 2018 ರಲ್ಲಿ ಪ್ರಮುಖ ಸ್ವತಂತ್ರ ನಿರ್ದೇಶಕಿಯಾಗಿ ನೇಮಕಗೊಂಡರು. ಅವರು ನಾಮನಿರ್ದೇಶನ ಮತ್ತು ಸಂಭಾವನೆ ಸಮಿತಿ ಮತ್ತು ಸಿಎಸ್‌ಆರ್ ಸಮಿತಿಯ ಅಧ್ಯಕ್ಷರಾಗಿ ಮಂಡಳಿಯ ಅಪಾಯ ನಿರ್ವಹಣೆ ಮತ್ತು ಇಎಸ್‌ಜಿ ಸಮಿತಿಗಳ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ವೈಯಕ್ತಿಕ ವಿಷಯ ಬಿಟ್ಟು ತಂಡ ಬಲಗೊಳಿಸಿ ರೋಹಿತ್ ಶರ್ಮಾಗೆ ಗವಾಸ್ಕರ್ ಸಲಹೆ