Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ರಾಜಕಾರಣಿಗಳಷ್ಟೇ ಅಲ್ಲ ಅಧಿಕಾರಿಗಳೂ ಜನರೊಂದಿಗೆ ಬೆರೆಯುವ ಪರಿಪಾಠ ಬೆಳೆಸಿಕೊಳ್ಬೇಕು: ಕಿರಣ್ ಬೇಡಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ರಾಜಕಾರಣಿಗಳಷ್ಟೇ ಅಲ್ಲ ಅಧಿಕಾರಿಗಳೂ ಜನರೊಂದಿಗೆ ಬೆರೆಯುವ ಪರಿಪಾಠ ಬೆಳೆಸಿಕೊಳ್ಬೇಕು: ಕಿರಣ್ ಬೇಡಿ

Bengaluru City

ರಾಜಕಾರಣಿಗಳಷ್ಟೇ ಅಲ್ಲ ಅಧಿಕಾರಿಗಳೂ ಜನರೊಂದಿಗೆ ಬೆರೆಯುವ ಪರಿಪಾಠ ಬೆಳೆಸಿಕೊಳ್ಬೇಕು: ಕಿರಣ್ ಬೇಡಿ

Public TV
Last updated: May 1, 2022 5:24 pm
Public TV
Share
3 Min Read
WhatsApp Image 2022 05 01 at 2.39.25 PM
SHARE

ಬೆಂಗಳೂರು: ಜನರ ಸಮಸ್ಯೆಗಳ ಪರಿಹಾರಕ್ಕೆ ಕೇವಲ ರಾಜಕಾರಣಿಗಳಷ್ಟೇ ಅಲ್ಲ ಪ್ರಮುಖ ಅಧಿಕಾರಿಗಳೂ ಕೂಡಾ ಜನರೊಂದಿಗೆ ಬೆರೆಯುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು. ಇದರಿಂದ ಜನರ ಹಲವಾರು ಸಮಸ್ಯೆಗಳು ಸುಲಭವಾಗಿ ಪರಿಹಾರವಾಗಲು ಸಾಧ್ಯ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಮತ್ತು ಪಾಂಡಿಚೇರಿಯ ಮಾಜಿ ಲೆಫ್ಟೆನೆಂಟ್ ಗವರ್ನರ್ ಕಿರಣ್ ಬೇಡಿ ಅಭಿಪ್ರಾಯಪಟ್ಟರು.

ಇಂದು ಬೆಂಗಳೂರಿನಲ್ಲಿ ಸುರಾನಾ ಕಾಲೇಜಿನ ವತಿಯಿಂದ ಆಯೋಜಿಸಲಾಗಿದ್ದ 3ನೇ ಆವೃತ್ತಿಯ ಸಿಜಿಎಸ್ ಕಾನ್ ಕ್ಲೇವ್ ನಲ್ಲಿ ದೇಶ ಮತ್ತು ಸಮುದಾಯಕ್ಕಾಗಿ ಉತ್ತಮ ಸೇವೆ ಸಲ್ಲಿಸಿದ ಗಣ್ಯರಿಗೆ ನೀಡಲಾದ, ಜಿಸಿ ಸುರಾನಾ ಲೀಡರ್‌ಶೀಪ್ ಅವಾರ್ಡ್ 2022 ಅನ್ನು ಸ್ವೀಕರಿಸಿ ಮಾತನಾಡಿದರು. ಇದನ್ನೂ ಓದಿ: ಪ್ಯಾನ್ ಇಂಡಿಯಾ’ – ಸಿನಿಮಾಗಳಿಗೆ ಅಗೌರವ ತೋರುವ ಪದ, ಇದನ್ನು ತೆಗೆದುಹಾಕಬೇಕು: ಸಿದ್ಧಾರ್ಥ್ 

WhatsApp Image 2022 05 01 at 2.39.24 PM 1

ಸರ್ಕಾರದ ಪ್ರಮುಖ ಸ್ಥಾನಗಳಲ್ಲಿರುವ ಅಧಿಕಾರಿಗಳು ತಮ್ಮ ನಾಯಕತ್ವದ ಸರಿಯಾದ ಉಪಯೋಗ ಮಾಡಿಕೊಳ್ಳುವುದು ಬಹಳ ಅಗತ್ಯ. ನಾನು ಐಪಿಎಸ್ ಅಧಿಕಾರಿಯಾಗಿ ಕೆಲಸ ಪ್ರಾರಂಭಿಸಿದ ಸಂಧರ್ಭದಲ್ಲಿ ಅಧಿಕಾರಿಗಳ ಮಧ್ಯೆ ಸಂವಹನವೇ ಇರುತ್ತಿರಲಿಲ್ಲ. ಇದು ಪಾಂಡಿಚೇರಿಯಲ್ಲೂ ಕಂಡುಬಂದಿತು. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ನನ್ನ ಆಡಳಿತದಲ್ಲಿ 6 ‘ಪಿ’ ಗಳನ್ನು ಅಳವಡಿಸಿಕೊಂಡೆ. ಜನರಲ್ಲಿ ನಮ್ಮ ಆಡಳಿತದ ಬಗ್ಗೆ ನಂಬಿಕೆ ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು ಎಂದರು.

WhatsApp Image 2022 05 01 at 2.39.24 PM

ಅಧಿಕಾರಿಗಳು ಮತ್ತು ಪ್ರತಿ ಇಲಾಖೆಯ ಪ್ರಮುಖರು ಜನರ ಮಧ್ಯೆ ಬೆರೆಯುವ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಸ್ವತಃ ಪರಿಶೀಲಿಸುವ ಪರಿಪಾಠವನ್ನು ಬೆಳೆಸಲಾಯಿತು. ಇದರಿಂದ ಅಭಿವೃದ್ಧಿ ಕೆಲಸಗಳು ಬಹಳ ವೇಗ ಪಡೆದುಕೊಂಡವು. ಯಾರೋ ಗುರುತಿಸಲಿ ಎನ್ನುವ ಮನೋಭಾವನೆಯಿಂದ ಕೆಲಸಗಳನ್ನು ಮಾಡಬಾರದು. ನಮ್ಮ ಕೆಲಸಗಳೇ ನಮ್ಮನ್ನು ಗುರುತಿಸುವಂತಾಗಬೇಕು. ಶಿಕ್ಷಣ ನೀಡಿರುವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ಉತ್ತಮ ಸಾಧನೆ ಮಾಡುವಂತೆ ಕರೆ ನೀಡಿದರು. ಇದನ್ನೂ ಓದಿ: ಸೌತ್‌ ಸಿನಿಮಾದಿಂದ ಬಾಲಿವುಡ್‌ನಲ್ಲಿ ಅಭದ್ರತೆ – ಖಡಕ್‌ ಉತ್ತರ ಕೊಟ್ಟ ನವಾಜುದ್ದೀನ್ ಸಿದ್ದಿಕಿ

ASHWATH 1 1

ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವಥ್ ನಾರಾಯಣ ಮಾತನಾಡಿ, ಇಂದು ಶೈಕ್ಷಣಿಕ ಅಂಕಗಳು ಮಾತ್ರ ಉದ್ಯೋಗ ಪಡೆಯುವ ಮಾನದಂಡ ಅಲ್ಲ. ಕ್ರೀಡೆ, ವ್ಯಕ್ತಿತ್ವ ಬೆಳವಣಿಗೆ ಮತ್ತು ನಾಯಕತ್ವ ಗುಣವನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ನಮ್ಮ ಶೈಕ್ಷಣಿಕ ಪರಿಕ್ಷಾ ಪದ್ಧತಿಯ ಮಾನದಂಡಗಳೇ ಬದಲಾಗಿವೆ. ಮೊದಲೆಲ್ಲಾ ಪುಸ್ತಕಗಳನ್ನು ಬಾಯಿಪಾಠ ಮಾಡಿ ಹೆಚ್ಚು ಅಂಕಗಳನ್ನು ಪಡೆದುಕೊಳ್ಳಬಹುದಿತ್ತು. ಆದರೆ ಈಗ ವಿಷಯವನ್ನು ಸಮರ್ಥವಾಗಿ ತಿಳಿದುಕೊಂಡರೆ ಮಾತ್ರ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ. ಬೆಂಗಳೂರು ಎಲ್ಲಾ ಕ್ಷೇತ್ರಗಳಲ್ಲೂ ಬಹಳ ಕ್ಷಿಪ್ರವಾಗಿ ಬೆಳೆಯುತ್ತಿದೆ. ಎಲ್ಲಾ ರಂಗಗಳಲ್ಲೂ ಕೂಡಾ ವಿಫುಲ ಅವಕಾಶಗಳು ಇವೆ. ಸುರಾನಾ ಶೈಕ್ಷಣಿಕ ಸಂಸ್ಥೆಗಳು ನಗರದ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ಸುರಾನಾ ಕಾಲೇಜು ಸ್ವಾಯತ್ತ ಸ್ಥಾನಮಾನ ಪಡೆದುಕೊಂಡಿದ್ದು ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯವನ್ನೂ ಪ್ರಾರಂಭಿಸಲಿ. ಇದಕ್ಕೆ ಬೇಕಾದ ಎಲ್ಲಾ ಸಹಕಾರ ನೀಡಲಾಗುವುದು ಎಂದು ಹೇಳಿದರು.

ಪದ್ಮಶ್ರೀ ಪುರಸ್ಕೃತ ಡಾ. ರಮಣರಾವ್ ಮಾತನಾಡಿ, ಮೈಕ್ರೋಲ್ಯಾಬ್ಸ್ ಸಂಸ್ಥೆಯ ವತಿಯಿಂದ ಸುರಾನಾ ಕುಟುಂಬ ದೇಶದ ಆರೋಗ್ಯ ಕ್ಷೇತ್ರಕ್ಕೆ ಬಹಳ ಕೊಡುಗೆ ನೀಡಿದೆ. ನಾನು ಪ್ರತಿ ಭಾನುವಾರ ನಡೆಸುತ್ತಿದ್ದ ಉಚಿತ ಆರೋಗ್ಯ ಶಿಬಿರಕ್ಕೆ ಉಚಿತವಾಗಿ ಮಾತ್ರೆಗಳನ್ನು ನೀಡಿ ಸಹಕರಿಸುತ್ತಿದ್ದನ್ನು ನೆನಪಿಸಿಕೊಂಡರು.

kiranbedi

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಸುರಾನಾ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಸುರಾನಾ ಟ್ರಸ್ಟ್‍ನ ವ್ಯವಸ್ಥಾಪಕ ಟ್ರಸ್ಟಿ ಡಾ. ಅರ್ಚನಾ ಸುರಾನಾ, ಮೈಕ್ರೋಲ್ಯಾಬ್ಸ್‍ನ ಎಂ.ಡಿ ದಿಲೀಪ್ ಸುರಾನಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಸುರಾನಾ ಕಾಲೇಜಿನ ವತಿಯಿಂದ ಆಯೋಜಿಸಿದ್ದ 3ನೇ ಆವೃತ್ತಿಯ ಸಿಜಿಎಸ್ ಕಾನ್ ಕ್ಲೇವ್ ನಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಮತ್ತು ಪಾಂಡಿಚೇರಿಯ ಮಾಜಿ ಲೆಪ್ಟಿನೆಂಟ್ ಗೌರ್ನರ್ ಕಿರಣ್ ಬೇಡಿ, ಸಮರ್ಥನಂ ಸಂಸ್ಥೆಯ ಡಾ. ಜಿ.ಕೆ ಮಹಾಂತೇಶ್, ಶಿಕ್ಷಣ ತಜ್ಞ ಡಾ. ಹೆಚ್. ಆರ್ ಅಪ್ಪನ್ನಯ್ಯ, ಪದ್ಮಶ್ರೀ ಪುರಸ್ಕೃತ ಡಾ. ಬಿ ರಮಣರಾವ್ ಅವರಿಗೆ ಜಿಸಿ ಸುರಾನಾ ಲೀಡರ್‌ಶೀಪ್ ಅವಾರ್ಡ್ 2022 ನೀಡಿ ಗೌರವಿಸಲಾಯಿತು. ಈ ಸಂಧರ್ಭದಲ್ಲಿ ಸಚಿವರಾದ ಡಾ. ಸಿ ಎನ್ ಅಶ್ವಥ್ ನಾರಾಯಣ, ಸುರಾನಾ ಟ್ರಸ್ಟ್‍ನ ವ್ಯವಸ್ಥಾಪಕ ಟ್ರಸ್ಟಿ ಡಾ. ಅರ್ಚನಾ ಸುರಾನಾ, ಮೈಕ್ರೋಲ್ಯಾಬ್ಸ್‌ನ ಎಂ.ಡಿ ದಿಲೀಪ್ ಸುರಾನಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

TAGGED:bengalurudr. ramanaraoDr.CN Ashwath NarayanaG Surana Leadership Award 2022kiran bediSurana Collegeಕಿರಣ್ ಬೇಡಿಜಿ ಸುರಾನಾ ಲೀಡರ್‌ಶೀಪ್ ಅವಾರ್ಡ್ 2022ಡಾ. ರಮಣರಾವ್ಡಾ.ಸಿ.ಎನ್.ಅಶ್ವಥ್ ನಾರಾಯಣಬೆಂಗಳೂರುಸುರಾನಾ ಕಾಲೇಜು
Share This Article
Facebook Whatsapp Whatsapp Telegram

Cinema news

Rashika
ರಾಶಿಕಾ ಹೇಳೋ ಆ 5 ಫೈನಲಿಸ್ಟ್‌ಗಳ್ಯಾರು?
Cinema Districts Karnataka Latest Sandalwood Top Stories
Allu Arjun Lokesh Kanagaraj
ಅಲ್ಲು ಅರ್ಜುನ್, ಲೋಕೇಶ್ ಕಾಂಬಿನೇಷನ್ ಅದ್ಧೂರಿ ಬಜೆಟ್ ಚಿತ್ರ..!
Cinema Latest South cinema Top Stories
yash
ನಟ ಯಶ್ ಬರ್ತಡೇಗೆ ರಸ್ತೆಯಲ್ಲಿ ಬ್ಯಾನರ್ ಹಾಕಿದ್ದಕ್ಕೆ FIR
Bengaluru City Cinema Districts Karnataka Latest Main Post Sandalwood
YASH 5
ಮುಂಬೈ ಏರ್‌ಪೋರ್ಟ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದ ರಾಕಿಭಾಯ್
Cinema Sandalwood

You Might Also Like

crane collapse bengaluru
Bengaluru City

ಅಗರ ಮೆಟ್ರೋ ಕಾಮಗಾರಿ ವೇಳೆ ಅವಘಡ – ಆಯತಪ್ಪಿ ಬಿದ್ದ ಬೃಹತ್ ಕ್ರೇನ್

Public TV
By Public TV
3 minutes ago
Mauled by stray dogs 10 year old girl dies in Bagalkote
Bagalkot

ಬೀದಿನಾಯಿ ಕಚ್ಚಿ ಗಂಭೀರ ಗಾಯಗೊಂಡಿದ್ದ ಬಾಲಕಿ ಸಾವು

Public TV
By Public TV
30 minutes ago
Stray Dogs 1
Latest

ತೆಲಂಗಾಣದಲ್ಲಿ 500 ಬೀದಿನಾಯಿಗಳ ಸಾಮೂಹಿಕ ಹತ್ಯೆ

Public TV
By Public TV
42 minutes ago
22 killed 30 injured after construction crane collapse derails train in Thailand
Latest

ಥೈಲ್ಯಾಂಡ್‌ನಲ್ಲಿ ಚಲಿಸುತ್ತಿದ್ದ ರೈಲಿನ ಮೇಲೆ ಬಿತ್ತು ಕ್ರೇನ್‌ – 22 ಮಂದಿ ಸಾವು

Public TV
By Public TV
1 hour ago
One Dollar equals 11092500 Iranian rial and 42 percent inflation
Latest

1 ಡಾಲರ್‌ 10.92 ಲಕ್ಷ ರಿಯಲ್‌ಗೆ ಸಮ – ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದ ಇರಾನ್‌ ಕರೆನ್ಸಿ

Public TV
By Public TV
2 hours ago
Hassan Heart Attack
Districts

ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವಾಗಲೇ ಹಠಾತ್ ಕುಸಿದು ಬಿದ್ದು ವ್ಯಕ್ತಿ ಸಾವು

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?