ನವದೆಹಲಿ: ಉದ್ಯಮಿ ಹಾಗೂ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ತಂಡದ ಸಹ ಮಾಲೀಕರಾಗಿರುವ ನೆಸ್ ವಾಡಿಯಾ ಅವರಿಗೆ ಜಪಾನ್ ಕೋರ್ಟ್ 2 ವರ್ಷ ಜೈಲಿ ಶಿಕ್ಷೆ ವಿಧಿಸಿದೆ.
ನೆಸ್ ವಾಡಿಯಾ ಮಾದಕ ವಸ್ತು ಸಾಗಾಣೆ ಆರೋಪದಲ್ಲಿ ಮಾರ್ಚ್ ನಲ್ಲಿ ಉತ್ತರ ಜಪಾನಿನ ದ್ವೀಪದ ಹೊಕ್ಕೈಹೋಡ ಚಿಟೋಸ್ ವಿಮಾನ ನಿಲ್ದಾಣದಲ್ಲಿ ಬಂಧನವಾಗಿದ್ದರು. ಈ ಸಂದರ್ಭದಲ್ಲಿ ಅವರ ಜೇಬಿನಲ್ಲಿ ಸುಮಾರು 25 ಗ್ರಾಂ ಗಾಂಜಾ ಪತ್ತೆಯಾಗಿತ್ತು.
Advertisement
ಈ ಕುರಿತು ಮಾಧ್ಯಮವೊಂದು ವರದಿ ಮಾಡಿದ್ದು, ತಮ್ಮ ಬಳಿ ಇದ್ದ ಮಾದಕ ವಸ್ತು ವೈಯಕ್ತಿಕ ಬಳಕೆಗೆ ಎಂದು ವಾಡಿಯಾ ಹೇಳಿಕೆ ನೀಡಿದ್ದರು. ನಂತರ ನ್ಯಾಯಾಂಗ ಬಂಧನದಲ್ಲಿದ್ದ ಅವರಿಗೆ ಸಪ್ಪೊರೊ ನ್ಯಾಯಾಲಯ 2 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
Advertisement
Advertisement
ವಾಡಿಯಾ ಸಂಸ್ಥೆ ಭಾರತ ಬಹುದೊಡ್ಡ ಉದ್ಯಮ ಸಂಸ್ಥೆಯಾಗಿದ್ದು, 47 ವರ್ಷದ ನೆಸ್ ವಾಡಿಯಾ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. 2014ರ ಜೂನ್ ಐಪಿಎಲ್ ಟೂರ್ನಿಯ ವೇಳೆ ಪ್ರೀತಿ ಜಿಂಟಾ ನೆಸ್ ವಾಡಿಯಾ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಮುಂಬೈಯ ವಾಂಖೆಡೆ ಕ್ರೀಡಾಂಗಣದಲ್ಲಿ ಪಂದ್ಯದ ವೇಳೆ ತಮ್ಮ ಮೇಲೆ ವಾಡಿಯಾ ಹಲ್ಲೆ ನಡೆಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
Advertisement
2020ರ ಟೋಕಿಯೋ ಒಲಂಪಿಕ್ಸ್ ಹಿನ್ನೆಲೆಯಲ್ಲಿ ಜಪಾನ್ ಮಾದಕ ವಸ್ತುಗಳ ಸಾಗಾಣೆ ಮಾಡುವವರ ವಿರುದ್ಧ ಕಠಿಣ ನಿಯಮಗಳನ್ನು ಜಾರಿ ಮಾಡಿದೆ.