ಕಲಬುರಗಿ: ಕಾನ್ಸ್‌ಟೇಬಲ್ ನೇಮಕಾತಿಯಲ್ಲೂ ಅಕ್ರಮ ನಡೆದಿದೆ. ಅಲ್ಲದೇ ಕಾನ್ಸ್‌ಟೇಬಲ್ ನೇಮಕಾತಿಯಲ್ಲಿ ಅಕ್ರಮವೆಸಗಿದವರೇ ಪಿಎಸ್‍ಐ ಅಕ್ರಮದಲ್ಲೂ ಭಾಗಿಯಾಗಿದ್ದಾರೆ. ಇನ್ನೂ ಪ್ರಕರಣದಲ್ಲಿ ಬಂಧಿಸಲಾದ ದಿವ್ಯಾ ಹಾಗರಗಿ ಮತ್ತು ಆರ್.ಡಿ ಪಾಟೀಲ್ ಕಿಂಗ್‍ಪಿನ್ ಎಂದು ಹೇಳ್ತಿದ್ದಾರೆ. ಆದರೆ, ಪ್ರಮುಖ ಕಿಂಗ್‍ಪಿನ್‍ಗಳು ಬೇರೆ. ಅವರು ಬೆಂಗಳೂರಿನಲ್ಲೇ ಇದ್ದು ಅವರನ್ನು ಹೊರತರಬೇಕು ಎಂದು ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ.
Advertisement
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಿಎಎಸ್‍ಐ ಅಕ್ರಮ ನೇಮಕ ಪ್ರಕರಣದಲ್ಲಿ ಗೃಹ ಸಚಿವರು ಯಾರನ್ನು ಸೇಫ್ ಮಾಡಲು ಹೊರಟಿದ್ದಾರೋ ಗೊತ್ತಿಲ್ಲ. ಆದರೆ, ಪ್ರಕರಣದಲ್ಲಿ ಗೃಹ ಸಚಿವರೇ ಬಲಿಪಶು ಆಗುವುದಂತೂ ಪಕ್ಕಾ. ಇದರಿಂದ ಅವರ ಕೆರಿಯರ್ ಹಾಳಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣದ ಕುರಿತು ಸರ್ಕಾರಕ್ಕೆ ಪ್ರೆಶ್ನೆಗಳ ಸುರಿಮಳೆಗೈದು ಆರಗ ಜ್ಞಾನೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಗೃಹ ಸಚಿವರು ನನಗೆ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಅವರ ಸರ್ಟಿಫಿಕೇಟ್ ಬೇಡವೆಂದಿದ್ದರು. ಆದರೆ ಇದೀಗ ಪಕ್ಷದ ಶಾಸಕ ಯತ್ನಾಳ್ ಅವರೇ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಪರೀಕ್ಷೆ ಬರೆದ 57 ಸಾವಿರ ಅಭ್ಯರ್ಥಿಗಳು ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಅವರಿಗೆ ಸ್ವಾಭಿಮಾನ ಇದ್ದಿದ್ದರೆ ರಾಜೀನಾಮೆ ಕೊಟ್ಟು ಕುರ್ಚಿ ಬಿಟ್ಟು ಹೋಗಬೇಕಿತ್ತು. ಅಧಿಕಾರದ ಮೋಹದಿಂದ ಅಥವಾ ಯಾರನ್ನೋ ರಕ್ಷಿಸಲು ಅವರು ಹೀಗೆ ಮಾಡುತ್ತಿದ್ದಾರೋ ಏನೋ ಗೊತ್ತಿಲ್ಲ. ಆದರೆ, ಇದರಿಂದ ಅವರ ಭವಿಷ್ಯ ಹಾಳಾಗುತ್ತದೆ ಎಂದಿದ್ದಾರೆ. ಇದನ್ನೂ ಓದಿ: ನಡುರಸ್ತೆಯಲ್ಲೇ ವಕೀಲೆ, ಆಕೆಯ ಪತಿ ಮೇಲೆ ಮಾರಣಾಂತಿಕ ಹಲ್ಲೆ
Advertisement
Advertisement
ಬಂಧಿತರ ನಿಖರ ಲಿಸ್ಟ್ ಎಲ್ಲಿದೆ?:
ಈವರೆಗೂ ಬಂಧಿತರಾದವರ ನಿಖರ ಲಿಸ್ಟ್ ಅನ್ನು ಸರ್ಕಾರ ಕೊಟ್ಟಿಲ್ಲ. ಬಂಧನವಾಗಿರುವ ಆರೋಪಿಗಳ ವಿವರವನ್ನು ಸರ್ಕಾರ ಯಾಕೆ ನೀಡುತ್ತಿಲ್ಲ. ಈವರೆಗೆ ತಲೆಮರೆಸಿಕೊಂಡಿರುವವರು ಎಷ್ಟು ಜನ? ಸರ್ಕಾರವನ್ನು ರಕ್ಷಣೆ ಮಾಡಲು ಮಾತ್ರವಷ್ಟೇ ತನಿಖೆ ನಡೆಸಲಾಗುತ್ತಿದೆ. ಒಟ್ಟು ಎಷ್ಟು ಜನರಿಗೆ ನೋಟಿಸ್ ನೀಡಿದ್ದೀರಿ ಎಷ್ಟು ಜನರಿಗೆ ವಿಚಾರಣೆ ನಡೆಸಿದ್ದೀರಿ? ಎಂದು ಪ್ರಶ್ನೆಗಳ ಮಳೆ ಸುರಿಸಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಬೆಳಗಿನ ಜಾವ ಮೈಕ್ ಮೂಲಕ ಆಜಾನ್ ಕೂಗದಿರಲು ಮುಸ್ಲಿಂ ಧರ್ಮ ಗುರುಗಳು ನಿರ್ಧಾರ
Advertisement
ಅಧಿಕೃತ ವರದಿ ಏನಾಗಿದೆ?:
ಐದು ಅಭ್ಯರ್ಥಿಗಳು ಪಿಎಸ್‍ಐ ಅಕ್ರಮದ ಬಗ್ಗೆ ದೂರು ಸಲ್ಲಿಸಿರುತ್ತಾರೆ ಎಂದು ಗೃಹ ಸಚಿವರೇ ಹೇಳಿದ್ದಾರೆ. ದೂರುಗಳು ಬಂದಿವೆ. ಆದರೆ, ಇದನ್ನು ನಾವು ಮೇಲಧಿಕಾರಿಯ ಪರಿಶೀಲನೆಗೆ ನೀಡಿದ್ದೇನೆ ಎಂದಿದ್ದಾರೆ. ಅರ್ಹತೆ ಪ್ರಕಾರ ಅಂಕ ನೀಡಲಾಗಿದೆ ಎಂದು ಹೇಳಿದ್ದಾರೆ. ಗೃಹ ಸಚಿವರು ಅಕ್ರಮ ನಡೆದಿಲ್ಲ ಎಂದು ಹೇಳಿದ್ದಾರೆ. ಈಗ ತನಿಖೆಯಲ್ಲಿ ಲೋಪ ಕಂಡು ಬಂದಿದೆ. ತನಿಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. 12 ಜನರನ್ನು ಸಸ್ಪೆಂಡ್ ಸಹ ಮಾಡಲಾಗಿದೆ. ತನಿಖೆ ನಡೆಸಿದ ಹಿರಿಯ ಅಧಿಕಾರಿಗಳು ಯಾರು? ತನಿಖೆ ನಡೆದಿದ್ದು ಹೇಗೆ? ಆ ವರದಿ ಎಲ್ಲಿದೆ? ಗೃಹ ಸಚಿವರು ಸದನದಲ್ಲಿ ಉತ್ತರ ಕೊಟ್ಟ ಮೇಲೆ ಆಫಿಷಿಯಲ್ ವರದಿ ಏನಾಗಿದೆ? ಎಂದು ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ. ಇದನ್ನೂ ಓದಿ: ಹಿಂದುಳಿದ ವರ್ಗಗಳಿಗೆ ಮೀಸಲಾತಿ ತಪ್ಪಲು ಕಾಂಗ್ರೆಸ್ಸೇ ಕಾರಣ: ಸಿ.ಟಿ.ರವಿ