ಮಡಿಕೇರಿ: ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪವನ್ನು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕಿರುಮಕ್ಕಿ ಗ್ರಾಮದ ತೋಟದಲ್ಲಿ ಸೆರೆಯಾಗಿದೆ.
ಗ್ರಾಮದ ತೋಟದಲ್ಲಿ ಸುಮಾರು 10 ಆಡಿ ಉದ್ದದ ಕಾಳಿಂಗ ಸರ್ಪ ಪತ್ತೆಯಾಗಿದೆ. ಬಳಿಕ ಭಾರೀ ಗಾತ್ರದ ಹಾವನ್ನು ಕಂಡು ಗಾಬರಿಗೊಂಡಿದ್ದು, ತಕ್ಷಣ ಉರಗ ತಜ್ಞ ವಸಂತ ಕಟ್ಟಿ ಅವರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.
Advertisement
Advertisement
ಮಾಹಿತಿ ತಿಳಿದ ವಸಂತ ಕಟ್ಡಿ ಅವರು, ಅವರ ತಂಡ ಕಾಳಿಂಗ ಸರ್ಪವನ್ನು ಹಿಡಿಯಲು ಸ್ಥಳಕ್ಕೆ ಆಗಮಿಸಿದ್ದು, ನಂತರ ಸುರಕ್ಷಿತವಾಗಿ ಕಾಳಿಂಗ ಸರ್ಪವನ್ನು ಸರೆ ಹಿಡಿದಿದ್ದಾರೆ. ಸ್ನೇಕ್ ವಸಂತ ಕಟ್ಟಿ ಅವರು ಈವರೆಗೆ ಅನೇಕ ಕಾಳಿಂಗದಂತಹ ಸಾಕಷ್ಟು ವಿಷಕಾರಿ ಹಾವುಗಳನ್ನು ಸೆರೆಹಿಡಿದಿದ್ದಾರೆ.
Advertisement
ಕಾಳಿಂಗ ಸರ್ಪವನ್ನು ಸೆರೆ ಹಿಡಿದ ಬಳಿಕ ಸಾರ್ವಜನಿಕರಿಗೆ ಪ್ರದರ್ಶನ ಮಾಡಿದ್ದಾರೆ. ಬಳಿಕ ಅಲ್ಲಿದ್ದವರಿಗೆ ಹಾವುಗಳ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಿ ನಂತರ ಪೆರಂಬಡಿ ಅರಣ್ಯಕ್ಕೆ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಬಿಡಲಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv