ನವದೆಹಲಿ: ಭಾರತದ ಅಗರ್ಭ ಶ್ರೀಮಂತ ಕುಟುಂಬಗಳಲ್ಲಿ ಒಂದಾದ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹದಲ್ಲಿ ನಾನು ಬೆಲೆಬಾಳುವ ವಜ್ರವನ್ನು ಕಳೆದುಕೊಂಡೆ ಎಂದು ಅಮೆರಿಕನ್ ಮಾಡೆಲ್ ಕಿಮ್ ಕರ್ದಾಶಿಯಾನ್ (Kim Kardashian) ಖಾಸಗಿ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ.
ಅನಂತ್ ಅಂಬಾನಿಯವರು ಅದ್ದೂರಿ ಮದುವೆಯಲ್ಲಿ ಕಿಮ್ ಕರ್ದಾಶಿಯಾನ್ ಭಾಗವಹಿಸಿದ್ದರು. ಈ ವೇಳೆ ಅವರು ಕಸ್ಟಮ್ ಐವರಿ ಲೆಹೆಂಗಾ ಜೊತೆಗೆ ದುಬಾರಿ ಬೆಲೆಯ ವಜ್ರದ ಹಾರ, ಕಿವಿಯೋಲೆಗಳು ಮತ್ತು ಶಿರ ಮಾಲೆಯನ್ನು ಧರಿಸಿದ್ದರು. ಇದನ್ನೂ ಓದಿ: ಕನ್ನಡದ ‘ಅಮ್ಮಾವ್ರ ಗಂಡ’ ಚಿತ್ರದಲ್ಲಿ ನಟಿಸಿದ್ದ ಭಾಗ್ಯಶ್ರೀ ಹಣೆಗೆ ಪೆಟ್ಟು- ಆಸ್ಪತ್ರೆಗೆ ದಾಖಲು
ಮದುವೆ ಸಮಾರಂಭದಲ್ಲಿ ಅನಂತ್ ಅಂಬಾನಿ ಸಹೋದರಿ ಇಶಾ ಅಂಬಾನಿ ಜೊತೆ ಕಿಮ್ ಕರ್ದಾಶಿಯಾನ್ ಮಾತನಾಡುತ್ತಿದ್ದಾಗ ಅವರ ಡೈಮಂಡ್ ನೆಕ್ಲೆಸ್‌ನಿಂದ ಒಂದು ವಜ್ರದ ಹರಳು ಕೆಳಗೆ ಬಿದ್ದಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಕಮಾಲ್ – ಜಸ್ಟ್ 6 ನಿಮಿಷದಲ್ಲಿ ಕೊಹ್ಲಿ ದಾಖಲೆ ಉಡೀಸ್
ನನಗೆ ಅರಿವಿಲ್ಲದೇ ನನ್ನ ನೆಕ್ಲೆಸ್‌ನಿಂದ ವಜ್ರದ ಹರಳು ಕೆಳಗೆ ಬಿದ್ದಿದೆ. ಇದನ್ನೂ ನನ್ನ ಜೊತೆಗಿದ್ದ ಸ್ನೇಹಿತೆ ಕ್ಲೋಯ್ ಗಮನಿಸಿದ್ದು, ಬಳಿಕ ನನ್ನ ಗಮನಕ್ಕೆ ತಂದಳು. ನಾವೆಲ್ಲರೂ ಸೇರಿ ಆ ಡೈಮಂಡ್ ನೆಕ್ಲೆಸ್‌ನ ಹರಳನ್ನು ಹುಡುಕಿದೆವು. ಆದರೆ ಕೊನೆಗೂ ದುಬಾರಿ ಆ ವಜ್ರದ ಹರಳು ಸಿಗಲಿಲ್ಲ ಎಂದು ಸಂದರ್ಶನ ಒಂದರಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.