ಮೈಸೂರು: ಸ್ನೇಹಿತನನ್ನೇ ಕೊಲೆ (Murder) ಮಾಡಿ ತಾನು ದ್ವೇಷಿಸುತ್ತಿದ್ದ ವ್ಯಕ್ತಿಯ ಮೇಲೆ ಆರೋಪ ಬರುವಂತೆ ಸಂಚು ರೂಪಿಸಿದ್ದ ಪ್ರಕರಣ ಹೆಚ್‍ಡಿ.ಕೋಟೆಯ ನೇರಳೆಹುಂಡಿಯಲ್ಲಿ ನಡೆದಿದೆ.
ಕೊಲೆ ಮಾಡಿ ತಾನು ದ್ವೇಷಿಸುತ್ತಿದ್ದ ವ್ಯಕ್ತಿಯ ಮೇಲೆ ಅನುಮಾನ ಬರುವಂತೆ ಪ್ಲಾನ್ ಮಾಡಿದ ಕಿರಾತಕ ದಿನೇಶ್ ಎಂಬಾತ ಪೊಲೀಸರ ಅತಿಥಿಯಾಗಿದ್ದಾನೆ. ಈ ಮೊದಲು ಗೃಹಿಣಿಗೆ ಮೆಸೇಜ್ ಮಾಡಿದ್ದಕ್ಕೆ ಯುವಕನ ಕೊಲೆ ನಡೆದಿದೆ ಎನ್ನಲಾಗಿತ್ತು. ಆದರೆ ಪೊಲೀಸರ (Police) ತನಿಖೆಯಿಂದ ಹತ್ಯೆಯ ಕಾರಣ ಬಯಲಾಗಿದೆ. ಇದನ್ನೂ ಓದಿ: ಪತ್ನಿಯನ್ನು ಥಳಿಸಿ ಬೆತ್ತಲೆ ಮೆರವಣಿಗೆ ಮಾಡಿದ ಪತಿ!
ಗ್ರಾಮದ ಭಾನುಪ್ರಕಾಶ್ ಎಂಬ ಯುವಕನ ಕೊಲೆಯಾಗಿತ್ತು. ಯುವಕನ ಕೊಲೆ ಸಂಬಂಧ 6 ಮಂದಿ ವಶಕ್ಕೆ ಪಡೆಯಲಾಗಿತ್ತು. ಕೊಲೆಯಾದ ಭಾನುಪ್ರಕಾಶ್ ಈ ಹಿಂದೆ ತನ್ನ ಹೆಂಡತಿಗೆ ಮೆಸೇಜ್ ಮಾಡಿದ್ದ ಎಂದು ಅದೇ ಗ್ರಾಮದ ಎನ್.ಪ್ರಕಾಶ್ ಎಂಬಾತ ಗಲಾಟೆ ಮಾಡಿದ್ದ. ಪ್ರಕಾಶ್ ಮೇಲೆ ಆರೋಪಿ ಮೊದಲಿಂದಲೂ ದ್ವೇಷ ಇಟ್ಟುಕೊಂಡಿದ್ದ. ಈ ದ್ವೇಷ ತೀರಿಸಿಕೊಳ್ಳಲು ಭಾನುಪ್ರಕಾಶ್‍ನನ್ನು ತಾನೇ ಕೊಲೆ ಮಾಡಿ ಆ ಕೊಲೆಯನ್ನು ಪ್ರಕಾಶ್ ಮಾಡಿದ್ದಾನೆ. ಕೊಲೆಗೆ ಪ್ರಕಾಶ್ ಹೆಂಡತಿಗೆ ಭಾನುಪ್ರಕಾಶ್ ಮೆಸೇಜ್ ಮಾಡಿದ್ದೇ ಕಾರಣ ಎಂದು ಬಿಂಬಿಸಿದ್ದ.
ಆದರೆ ವಿಚಾರಣೆ ವೇಳೆ ಭಾನುಪ್ರಕಾಶ್ ಕೊಲೆ ಮಾಡಿದ್ದು ಆತನ ಸ್ನೇಹಿತ ದಿನೇಶ್ ಎಂಬುದು ಬಹಿರಂಗವಾಗಿದೆ. ದಿನೇಶ್ ತನ್ನ ಗೆಳೆಯ ಭೀಮ ಎಂಬಾತನ ಜೊತೆ ಸೇರಿ ಭಾನುಪ್ರಕಾಶ್‍ನನ್ನು ಕತ್ತು ಸೀಳಿ ಕೊಲೆ ಮಾಡಿದ್ದ. ಮೊಬೈಲ್ ಟವರ್ ಆಧಾರದ ಮೇಲೆ ಕೊಲೆ ಆರೋಪಿ ಪತ್ತೆಯಾಗಿದ್ದಾನೆ. ಕೊಲೆಗೆ ಆರೋಪಿ ದಿನೇಶ್ ಹಾಗೂ ಎನ್.ಪ್ರಕಾಶ್ ನಡುವಿನ ಹಳೆ ದ್ವೇಷವೇ ಕಾರಣ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಲವ್ ಫೈಲ್ಯೂರ್‌ನಿಂದ ಆತ್ಮಹತ್ಯೆಗೆ ಶರಣಾದ್ರಾ ಪೊಲೀಸ್ ಪೇದೆ?
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]