ಮುಂಬೈ: ದೇಶಾದ್ಯಂತ ಕಿಕಿ ಚಾಲೆಂಜ್ ವಿರುದ್ಧ ಪೊಲೀಸರು ಹೆಚ್ಚಿನ ಜಾಗೃತಿ ಮೂಡಿಸುತ್ತಿದ್ದರೂ, ಯುವಕರು ಮಾತ್ರ ಚಾಲೆಂಜ್ ಸ್ವೀಕರಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದನ್ನು ನಿಲ್ಲಿಸುತ್ತಿಲ್ಲ. ಅದ್ದರಿಂದ ಪೊಲೀಸರು ಇಂತಹ ವಿಡಿಯೋ ಆಧರಿಸಿ ಕ್ರಮಕೈಗೊಳ್ಳಲು ಮುಂದಾಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಕಿಕಿ ಚಾಲೆಂಜ್ ವಿಡಿಯೋ ಆಧರಿಸಿ ಮಹಾರಾಷ್ಟ್ರದ ಪಾಲ್ಗರ್ ಜಿಲ್ಲೆಯಲ್ಲಿ ಮೂವರು ಯುವಕರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರಿಪಡಿಸಿದ್ದಾರೆ. ಅಲ್ಲದೇ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಯುವಕರಿಗೆ ರೈಲು ನಿಲ್ದಾಣ ಶುಚಿಗೊಳಿಸುವ ಶಿಕ್ಷೆ ನೀಡಿದೆ.
Advertisement
Advertisement
ಶ್ಯಾಮ್ ಶರ್ಮಾ (24), ಧ್ರವ್ ಶಾ (23), ನಿಶಾಂತ್ ಶರ್ಮಾ (20) ಶಿಕ್ಷೆ ಪಡೆದರಾಗಿದ್ದು, ಮೂವರು ಬೆಳಗ್ಗೆ 11 ರಿಂದ 2 ಮಧ್ಯಾಹ್ನ ಹಾಗೂ 3 ರಿಂದ ಸಂಜೆ 4 ಗಂಟೆ ವರೆಗೂ ರೈಲು ನಿಲ್ದಾಣ ಶುಚಿಗೊಳಿಸಿ, ಪ್ರಯಾಣಿಕರಿಗೆ ಕಿಕಿ ಚಾಲೆಂಜ್ ನಿಂದ ಉಂಟಾಗುತ್ತಿರುವ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸುವಂತೆ ಸೂಚನೆ ನೀಡಿದೆ.
Advertisement
ಮೂವರು ಯುವಕರು ಚಾಲೆಂಜ್ ಸ್ವೀಕರಿಸಿ ಮಾಡಿದ್ದ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೇ ಇದುವರೆಗೂ 2.2 ಲಕ್ಷ ವ್ಯೂ ಆಗಿದೆ. ಚಲಿಸುತ್ತಿದ್ದ ರೈಲಿನಿಂದ ಕೆಳಗಿಳಿದ ಯುವಕ ಹಾಡಿಗೆ ಡ್ಯಾನ್ಸ್ ಮಾಡಿದರೆ ಮತ್ತೊಬ್ಬ ಯುವಕ ತನ್ನ ಮೊಬೈಲ್ ನಲ್ಲಿ ಸೆರೆಹಿಡಿದ್ದಾನೆ. ಮತ್ತೊಬ್ಬ ಯುವಕ ರೈಲಿನ ಬಾಗಿಲಿನಲ್ಲಿ ನಿಂತು ಡಾನ್ಸ್ ಮಾಡಿದ್ದಾನೆ. ಈ ವಿಡಿಯೋ ಅನ್ವಯ ಮೂವರು ಯುವಕರನ್ನು ರೈಲ್ವೇ ಪೊಲೀಸರು ಬಂಧಿಸಿ ಐಪಿಸಿ ಸೆಕ್ಷನ್ 145 ಬಿ (ಅಸಭ್ಯ ವರ್ತನೆ), 147 (ರೈಲ್ವೇ ನಿಲ್ದಾಣಕ್ಕೆ ಹಾನಿ) ಹಾಗೂ 156 (ಸಾಹಸ ಪ್ರದರ್ಶನ) ಸೇರಿದಂತೆ ವಿವಿಧ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews