19ರ ಯುವತಿಯ ಕಿಡ್ನ್ಯಾಪ್‌ – 22 ಮಂದಿ ಕಾಮುಕರಿಂದ ದಿನವಿಡೀ ಗ್ಯಾಂಗ್‌ ರೇಪ್‌

Public TV
1 Min Read
Crime 1

ನವದೆಹಲಿ: 19 ವರ್ಷದ ಯುವತಿಯನ್ನ ಅಪಹರಿಸಿ 22 ಮಂದಿ ದಿನವಿಡೀ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ (Varanasi) ನಡೆದಿದೆ. ಘಟನೆಗೆ ಸಂಬಂಧಿಸಿದಂತೆ 6 ಮಂದಿಯನ್ನು ಬಂಧಿಸಲಾಗಿದ್ದು, ಉಳಿದವರಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸ್‌ (UP Police) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Crime

ಉತ್ತರ ವಾರಣಾಸಿಯ ಲಾಲ್‌ಪುರ್‌ ಪ್ರದೇಶದ ನಿವಾಸಿಯಾಗಿರುವ ಯುವತಿ ಕಳೆದ ಮಾರ್ಚ್‌ 29ರಂದು ತನ್ನ ಸ್ನೇಹಿತರನ್ನ ಭೇಟಿಯಾಗಲು ಮನೆಯಿಂದ ಹೊರಟಿದ್ದಳು. ಇದೇ ರೀತಿ ಆಗಾಗ್ಗೆ ತನ್ನ ಸ್ನೇಹಿತರನ್ನ ಭೇಟಿಯಾಗಿ ಯಾವುದೇ ತೊಂದರೆ ಇಲ್ಲದೇ ಮನೆಗೆ ಬರುತ್ತಿದ್ದಳು. ಆದ್ರೆ ಅಂದು ಮನೆಗೆ ಮರಳಲು ಸಾಧ್ಯವಾಗಲಿಲ್ಲ. ಕೊನೆಗೆ ಊರೆಲ್ಲ ಹುಡುಕಾಡಿದರೂ ಸಿಗದಿದ್ದ ಕಾರಣ ಪೋಷಕರು ಏಪ್ರಿಲ್ 4ರಂದು ಪೊಲೀಸರಿಗೆ ದೂರು ನೀಡಿದ್ದರು. ಇದನ್ನೂ ಓದಿ: ಬೆಲೆ ಏರಿಕೆಯ ಪಾಪ ನಮ್ಮೇಲೇರಲು ಯತ್ನಿಸುತ್ತಿರುವ ಬಿಜೆಪಿ ನಾಯಕರ ಮುಖಕ್ಕೆ ಮೋದಿ ಮಸಿ ಬಳಿದಿದ್ದಾರೆ: ಸಿಎಂ

Stop Rape Crime 2

ದೂರು ನೀಡಿದ ಅದೇ ದಿನ ಕಿಡ್ನ್ಯಾಪ್‌ ಮಾಡಿದ್ದ ಕಾಮುಕರು ಆಕೆಗೆ ಡ್ರಗ್ಸ್‌ ನೀಡಿ ಕಳುಹಿಸಿದ್ದರು. ಬಳಿಕ ತನ್ನ ಸ್ನೇಹಿತೆಯನ್ನು ಭೇಟಿಯಾದ ಸಂತ್ರಸ್ತೆ ಮೆನೆಗೆ ಬಂದು ಪೋಷಕರಿಗೆ ತನಗಾದ ಅನ್ಯಾಯದ ಬಗ್ಗೆ ತಿಳಿಸಿದಳು. ಬಳಿಕ ಪೋಷಕರು ಪೊಲೀಸರಿಗೆ ಏಪ್ರಿಲ್‌ 6ರಂದು ದೂರು ನೀಡಿದ್ದರು. ದೂರಿನಲ್ಲಿ ತನ್ನ ಮೇಲೆ 22 ಜನ ಅತ್ಯಾಚಾರ ಎಸಗಿದ್ದಾರೆಂದು ಸಂತ್ರಸ್ತೆ ಹೇಳಿಕೊಂಡಿದ್ದಾಳೆ. ಇದನ್ನೂ ಓದಿ: IISC, IIT ಮಾದರಿ ಸಂಸ್ಥೆಗಳಿಂದ ಪರಿಶೀಲನೆ, ಎಲ್ಲ ಕೈಗಾರಿಕೆಗಳ ಮಾಲಿನ್ಯ ಅಧ್ಯಯನಕ್ಕೆ ಸೂಚನೆ: ಎಂ.ಬಿ.ಪಾಟೀಲ್

ಪ್ರಕರಣ ದಾಖಲಿಸಿಕೊಂಡ ಪೊಲೀಸರು ದೂರು ನೀಡಿದ ಅದೇ ದಿನ ರಾತ್ರಿ ಹುಕ್ಕಾ ಬಾರ್, ಹೋಟೆಲ್, ಲಾಡ್ಜ್ ಮತ್ತು ಅತಿಥಿ ಗೃಹ ಸೇರಿದಂತೆ ವಿವಿಧೆಡೆ ದಾಳಿ ನಡೆಸಿ 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಕೆಲವರು ಹುಕುಲ್‌ಗಂಜ್ ಮತ್ತು ಲಲ್ಲಾಪುರ ಪ್ರದೇಶದವರಾಗಿದ್ದು, ಕೆಲವರು ಅಪ್ರಾಪ್ತರೂ ಆಗಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಆರೇ ತಿಂಗಳಲ್ಲಿ ತಂದುಕೊಡ್ತೀನಿ – 2.45 ಲಕ್ಷ ರೂ. ಕದ್ದು ಪತ್ರ ಬರೆದಿಟ್ಟು ಹೋದ ಕಳ್ಳ!

Share This Article