ಮತ್ತು ಬರುವ ಔಷಧಿ ನೀಡಿ ಮಗುವಿನ ಅಪಹರಣ – ಕಲಬುರಗಿ ದಂಪತಿ ಬಂಧನ

Public TV
1 Min Read
Child theft

– ಆತ್ಮೀಯತೆ ಬೆಳಸಿಕೊಂಡು ಬಿಸ್ಕೆಟ್ ಕೊಟ್ಟಿದ ದಂಪತಿ
– ಮಗುವಿನ ತಂದೆ, ತಾಯಿ ಮಲಗಿದಾಗ ಮಗು ಕದ್ದು ಪರಾರಿ

ರಾಯಚೂರು: ಮತ್ತು ಬರುವ ಔಷಧಿ ನೀಡಿ 3 ವರ್ಷದ ಮಗುವನ್ನು ಕದ್ದು ಪರಾರಿಯಾಗಿದ್ದ ದಂಪತಿಯನ್ನು ಬಂಧಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಕದ್ದ ಮಗುವನ್ನು ರಾಯಚೂರು (Raichuru) ಜಿಲ್ಲೆಯ ದೇವದುರ್ಗದ (Devadurga) ಬಂಡೆಗುಡ್ಡ ತಾಂಡಾದ ಪ್ರಕಾಶ್ ಹಾಗೂ ಹಂಪಮ್ಮ ದಂಪತಿಯ ಮಗು ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಪಬ್ಲಿಕ್‌ ಟಿವಿ ವಿದ್ಯಾ ಮಂದಿರಕ್ಕೆ ಚಾಲನೆ – ಬನ್ನಿ PG ಕಾಲೇಜ್‌, ಕೋರ್ಸ್‌ಗಳ ಬಗ್ಗೆ ತಿಳಿದುಕೊಳ್ಳಿ

ರಾಯಚೂರಿನಿಂದ ಬೆಂಗಳೂರಿಗೆ ಉದ್ಯಾನ ಎಕ್‌ಪ್ರೆಸ್ (Udyan Express) ರೈಲಿನಲ್ಲಿ ದಂಪತಿ ತಮ್ಮ ಎರಡು ಮಕ್ಕಳೊಂದಿಗೆ ಗುಳೆ ಹೊರಟಿದ್ದರು. ಅದೇ ರೈಲಿನಲ್ಲಿ ಕಲಬುರಗಿ (Kalaburagi) ಮೂಲದ ರೂಪೇಶ್ ಹಾಗೂ ಕುಸುಮ ದಂಪತಿ ಪ್ರಯಾಣಿಸುತ್ತಿದ್ದರು. ರೂಪೇಶ್ ಮತ್ತು ಕುಸುಮ ಪಕ್ಕದ ಸೀಟಿನಲ್ಲಿ ಕುಳಿತು ಮಗುವಿನೊಂದಿಗೆ ಆತ್ಮೀಯತೆ ಬೆಳೆಸಿಕೊಂಡು ಬಿಸ್ಕೆಟ್ ಕೊಟ್ಟಿದ್ದರು. ರಾತ್ರಿ ಮಗುವಿನ ತಂದೆ, ತಾಯಿ ಮಲಗಿದಾಗ ಆಂಧ್ರಪ್ರದೇಶದ ಅನಂತಪುರ ರೈಲು ನಿಲ್ದಾಣದಲ್ಲಿ ಮಗುವನ್ನು ಎತ್ತಿಕೊಂಡು ಪರಾರಿಯಾಗಿದ್ದರು. ಅಲ್ಲಿಂದ ಮಗುವನ್ನು ಬಸ್ಸಿನಲ್ಲಿ ಮಂತ್ರಾಲಯಕ್ಕೆ (Mantralaya) ಕರೆದೊಯ್ದು ಕೂದಲು ಕತ್ತರಿಸಿದ್ದರು. ಬಳಿಕ ರಾಯಚೂರಿನ ಬಸ್ ನಿಲ್ದಾಣದಲ್ಲಿ ಮಗುವಿನೊಂದಿಗೆ ಓಡಾಡುತ್ತಿರುವಾಗ ಸಿಕ್ಕಿಬಿದ್ದಿದ್ದಾರೆ.

ವಿಚಾರಣೆ ನಡೆಸಿದಾಗ 22 ವರ್ಷಗಳ ಹಿಂದೆ ಮದುವೆಯಾಗಿದ್ದು, ದಂಪತಿಗೆ ಮಕ್ಕಳಾಗದ ಹಿನ್ನೆಲೆ ಮಗು ಕದ್ದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಆದ್ದರಿಂದ ಸಹ ಪ್ರಯಾಣಿಕನಿಗೆ ದತ್ತು ತೆಗೆದುಕೊಳ್ಳಲು ಮಗು ಸಿಕ್ಕರೆ ತಿಳಿಸಿ ಎಂದು ಮೊಬೈಲ್ ನಂಬರ್ ಕೂಡ ಕೊಟ್ಟಿದ್ದರು. ಮೊಬೈಲ್ ನಂಬರ್ ಟ್ರೇಸ್ ಮಾಡಿದಾಗ ದಂಪತಿಯಿರುವ ಜಾಗ ತಿಳಿದು ಬಂದಿದೆ. ರಾಯಚೂರಿನ ಬಸ್ ನಿಲ್ದಾಣದಲ್ಲಿ ಮಗುವನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.ಇದನ್ನೂ ಓದಿ: ದರೋಡೆಗೆ ಹೋಗಿ ನೇಪಾಳಿ ವಿದ್ಯಾರ್ಥಿನಿಗೆ ಗುಂಡಿಕ್ಕಿ ಕೊಂದ ಭಾರತೀಯ ಮೂಲದ ವ್ಯಕ್ತಿ

ಮಗುವಿಗೆ ಮತ್ತು ಬರುವ ಔಷಧಿ ನೀಡಿ ಕರೆದೊಯ್ದಿರುವ ಶಂಕೆಯಿದ್ದು, ಈ ಸಂಬಂಧ ಆಂಧ್ರಪ್ರದೇಶದ ಅನಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article