ಬೆಂಗಳೂರು: ಅಪಹರಣ ಪ್ರಕರಣದಲ್ಲಿ ಶಾಸಕ, ಮಾಜಿ ಸಚಿವ ಹೆಚ್‌ಡಿ ರೇವಣ್ಣಗೆ (HD Revanna) ಜಾಮೀನು (Bail) ಸಿಕ್ಕಿದ ಬೆನ್ನಲ್ಲೇ ದೇಗುಲ (Temple) ಯಾತ್ರೆ ಆರಂಭಿಸಿದ್ದಾರೆ.
ಪರಪ್ಪನ ಅಗ್ರಹಾರ (Parappana Agrahara) ಜೈಲಿನಿಂದ ನೇರವಾಗಿ ಪದ್ಮನಾಭ ನಗರದಲ್ಲಿರುವ ಮಾಜಿ ಪ್ರಧಾನಿ ದೇವೇಗೌಡರ (Devegowda) ನಿವಾಸಕ್ಕೆ ಆಗಮಿಸಿ ದೇವರ ಕೋಣೆಯಲ್ಲಿ ಪೂಜೆ ಮಾಡಿದರು. ಇದನ್ನೂ ಓದಿ: ಕಾರ್ಯಕರ್ತರ ಮುಂದೆ ರೇವಣ್ಣ ಕಣ್ಣೀರು!
ನಂತರ ರೇವಣ್ಣ ಬೆಂಗಳೂರಿನ ಜೆಪಿ ನಗರದಲ್ಲಿರುವ ತಿರುಮಲ ಲಕ್ಷ್ಮಿ ವೆಂಕಟೇಶ್ವರ ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆಯಲ್ಲಿ ಭಾಗಿಯಾಗಿದರು. ದೇವಾಲಯದಲ್ಲಿ ಕುಂಬಳಕಾಯಿ, ಈಡುಗಾಯಿ ದೃಷ್ಟಿ ತೆಗೆಸಿ ರೇವಣ್ಣ ಒಬ್ಬರೇ ಪೂಜೆ ಮಾಡಿದರು. ಇಲ್ಲಿಂದ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ನಾಳೆ ಶೃಂಗೇರಿಗೆ ರೇವಣ್ಣ ಭೇಟಿ ನೀಡುವ ಸಾಧ್ಯತೆಯಿದೆ.