ಲಕ್ನೋ: ಉತ್ತರಪ್ರದೇಶದಲ್ಲಿ (Uttarpradesh) ನಗರಸಭೆಯ ಸದಸ್ಯರುಗಳ (Civic Body Meeting) ನಡುವೆ ಭಾರೀ ಗುದ್ದಾಟ-ತಳ್ಳಾಟ ನಡೆದಿದೆ. ಸದ್ಯ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
जब विकास कार्य हुए ही नहीं तो समीक्षा बैठक में और क्या होता, इसीलिए शामली में सभासदों के मध्य जमकर शारीरिक प्रहारों का आदान-प्रदान हुआ।
भाजपा राज का सबक : समीक्षा बैठक में अपनी सुरक्षा का प्रबंध स्वयं करके आएं। pic.twitter.com/9Fb8wBVwmh
— Akhilesh Yadav (@yadavakhilesh) December 28, 2023
- Advertisement -
ಶಾಮ್ಲಿ ಪುರಸಭೆಯ (Shamli Municipal Council) ಆಡಳಿತ ಮಂಡಳಿ ಸಭೆಯಲ್ಲಿ ಪುರಸಭೆ ಅಧ್ಯಕ್ಷ (Municipal Chairman) ಅರವಿಂದ ಸಂಗಲ್ ಮತ್ತು ಶಾಸಕ ಪ್ರಸನ್ನ ಚೌಧರಿ ಉಪಸ್ಥಿತರಿದ್ದರು. ಸಭೆಯಲ್ಲಿ 4 ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚೆ ಆರಂಭವಾಯಿತು. ಈ ವೇಳೆ ಅರವಿಂದ ಸಂಗಲ್ ಮತ್ತು ಪ್ರಸನ್ನ ಚೌಧರಿ ನಡುವೆ ತೀವ್ರ ವಾಗ್ವಾದ ನಡೆಯಿತು. ಮಾತಿನ ಚಕಮಕಿಯಿಂದ ಪ್ರಾರಂಭವಾದ ಜಗಳ ಪರಸ್ಪರ ಹೊಡೆದಾಡಿಕೊಳ್ಳುವ ಮಟ್ಟಕ್ಕೆ ತಿರುಗಿತು.
- Advertisement -
- Advertisement -
ಇಬ್ಬರು ಸದಸ್ಯರು ಪರಸ್ಪರ ಗುದ್ದಾಟ ನಡೆಸುವುದರೊಂದಿಗೆ ನಗರ ಪಾಲಿಕೆ ಆಡಳಿತ ಮಂಡಳಿ ಸಭೆಯು ಸಂಪೂರ್ಣ ಕುಸ್ತಿ ಅಖಾಡವಾಯಿತು. ಪೊಲೀಸರು ಮತ್ತು ಹಿರಿಯ ಮುಖಂಡರ ಎದುರೇ ಇಡೀ ಘಟನೆ ನಡೆದಿದೆ. ಇನ್ನು ಇದರ ವೀಡಿಯೋವನ್ನು ಸಭೆಯಲ್ಲಿದ್ದವರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
- Advertisement -
ಅಖಿಲೇಶ್ ಯಾದವ್ ಹೇಳಿದ್ದೇನು..?: ಇತ್ತ ವೈರಲ್ ವೀಡಿಯೋವನ್ನು ಗಮನಿಸಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಬಿಜೆಪಿಯನ್ನು (BJP) ತೀವ್ರ ತರಾಟೆಗೆ ತೆಗೆದುಕೊಂಡರು.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ವೀಡಿಯೋ ಹಂಚಿಕೊಂಡು, ಯಾವುದೇ ಅಭಿವೃದ್ಧಿ ಕೆಲಸಗಳು ಆಗದಿದ್ದಾಗ ಪರಿಶೀಲನಾ ಸಭೆಯಲ್ಲಿ ಇನ್ನೇನು ಆಗಿರಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಇದರಿಂದಾಗಿ ಶಾಮ್ಲಿಯಲ್ಲಿ ನಡೆದ ಕೌನ್ಸಿಲರ್‌ಗಳ ಸಭೆಯಲ್ಲಿ ಪರಸ್ಪರ ದೈಹಿಕ ಹಲ್ಲೆಗಳು ನಡೆದಿವೆ ಎಂದಿದ್ದಾರೆ. ಒಟ್ಟಿನಲ್ಲಿ ನಿಮ್ಮ ಸ್ವಂತ ಭದ್ರತೆಯನ್ನು ಏರ್ಪಡಿಸಿದ ನಂತರ ಪರಿಶೀಲನಾ ಸಭೆಗೆ ಬನ್ನಿ ಎಂಬುದು ಬಿಜೆಪಿ ಆಡಳಿತದ ಪಾಠವಾಗಿದೆ ಎಂದು ಅವರು ಗರಂ ಆದರು.